More

    ಗುಲ್ಬರ್ಗ ವಿವಿ ನಡೆಗೆ ಆಕ್ರೋಶ

    ಬೀದರ್: ಒಂದು, ಎರಡು ವಿಷಯ (ಪ್ರಥಮ, ತೃತೀಯ ಸೆಮ್)ಗಳಲ್ಲಿ ಫೇಲ್ ಆದವರನ್ನು 2, 4ನೇ ಸೆಮ್ ಗೆ ಪ್ರಮೋಟ್ ಮಾಡಲ್ಲ ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಹೊರಡಿಸಿದ ಆದೇಶ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಬೀದರ್ ಶಾಖೆಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.

    ಜಿಲ್ಲಾಧಿಕಾರಿ ಕಚೇರಿ ಎದುರು ಪ್ರದರ್ಶನ ನಡೆಸಿದ ಪ್ರಮುಖರು, ಕರೊನಾ ಕಾರಣಕ್ಕೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಎರಡು ಮತ್ತು ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಪ್ರಮೋಟ್ ಮಾಡಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಆದರೀಗ ಗುಲ್ಬರ್ಗ ವಿವಿ ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕೋವಿಡ್ ಕಾರಣಕ್ಕೆ 2020, 2021ರಲ್ಲಿ ಕ್ರಮವಾಗಿ ನಡೆಯಬೇಕಿದ್ದ ಎರಡು, ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಪ್ರಮೋಟ್ ಮಾಡಲಾಗಿತ್ತು. ಇದಕ್ಕೆ ಒಂದು, ಮೂರನೇ ಸೆಮಿಸ್ಟರ್ ಪಲಿತಾಂಶ ಆಧಾರವಾಗಿ ಇಟ್ಟುಕೊಳ್ಳಲಾಗಿತ್ತು. ಆದರೀಗ ದಿಢೀರ್ ವಿವಿ ಸುತ್ತೋಲೆ ಹೊರಡಿಸಿ 2 ಮತ್ತು 4ನೇ ಸೆಮ್ ಪರೀಕ್ಷೆ ಬರೆಯಲೇಬೇಕು ಎಂದು ಹೇಳಿದ್ದು ವಿದ್ಯಾರ್ಥಿಗಳಲ್ಲಿ ಆಘಾತ ಮೂಡಿಸಿದೆ. ಲಾಕ್ ಡೌನ್ ನಿಂದ 2, 4ನೇ ಸೆಮ್ ಗೆ ಒಂದೂ ತರಗತಿ ನಡೆದಿಲ್ಲ. ಪಠ್ಯ ಏನೆಂಬುದು ಸಹ ಗೊತ್ತಿಲ್ಲ. ಹೀಗಿರುವಾಗ ಪರೀಕ್ಷೆ ಬರೆಯಬೇಕು ಎಂದು ಹೇಳಿದರೆ ಏನು ಮಾಡಬೇಕು ಎಂದು ಕಿಡಿಕಾರಿದರು.

    ತಕ್ಷಣ ಈ ವಿಷಯವನ್ನು ಗಂಭೀರ ಪರಿಗಣಿಸಿ ಈ ಹಿಂದೆ ತಿಳಿಸಿದಂತೆ 2 ಮತ್ತು 4ನೇ ಸೆಮಿಸ್ಟರ್ ಪ್ರಮೋಟ್ ಮಾಡಿರುವ ನಿಲುವು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮುಂದುವರಿಸಿ ವಿವಿ ಹೊರಡಿಸಿರುವ ಗೊಂದಲದ ಸುತ್ತೋಲೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

    ಎಬಿವಿಪಿ ನಗರ ಕಾರ್ಯದರ್ಶಿ ಅಂಬರೀಶ್, ಹೇಮಂತ್, ಅಭಿಷೇಕ್, ಪವನ್, ಓಂಕಾರರಡ್ಡಿ, ಭಜರಂಗ ಗಡಿಕುಶನೂರು, ಆಕಾಶ ರಾಜಗೀರಾ, ಪ್ರೇಮ ಸಾಗರ ಇತರರಿದ್ದರು. ವಿವಿ ಕುಲಪತಿಗೆ ಬರೆದ ಮನವಿ ಪತ್ರವನ್ನು ಡಿಸಿ ಗೋವಿಂದರಡ್ಡಿ ಅವರಿಗೆ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts