More

    ಗುರುವಾರವೂ ಕೆಲಸ ಬಿಟ್ಟು ಧರಣಿ

    ಲಕ್ಷ್ಮೇಶ್ವರ: ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ರದ್ದತಿ, ಅಸಂಘಟಿತ ಕಾರ್ವಿುಕರ ಕಲ್ಯಾಣಕ್ಕೆ ವಿಶೇಷ ನೆರವು, ಸಾಮಾಜಿಕ ಭದ್ರತೆ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಕರೆ ನೀಡಿದ್ದ ಬಂದ್ ಬೆಂಬಲಿಸಿ ಇಲ್ಲಿನ ಎಪಿಎಂಸಿಯಲ್ಲಿ ಲಕ್ಷ್ಮೇಶ್ವರ ಎಪಿಎಂಸಿ ಲೈಸೆನ್ಸ್​ದಾರರ ಹಮಾಲಿ ಕೆಲಸಗಾರರ ಸಂಘದ ಸದಸ್ಯರು ಗುರುವಾರವೂ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

    ಸರ್ಕಾರದ ವಿರುದ್ಧ ಘೊಷಣೆ ಕೂಗಿದ ಪ್ರತಿಭಟನಾಕಾರರು, ವಿವಿಧ ಬೇಡಿಕೆ ಈಡೇರಿಸುವಂತೆ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

    ಸಂಘದ ಅಧ್ಯಕ್ಷ ನಿಂಗಪ್ಪ ಶರಸೂರಿ ಮಾತನಾಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಲಕ್ಷಾಂತರ ಹಮಾಲಿ ಕಾರ್ವಿುಕರು ಬೀದಿಗೆ ಬೀಳುವ ಅಪಾಯವಿದೆ. ಕೋವಿಡ್​ನಿಂದ ಎಪಿಎಂಸಿಗಳು ಹಲವು ತಿಂಗಳು ಕಾರ್ಯ ಸ್ಥಗಿತಗೊಳಿಸಿದ್ದರಿಂದ ಕಾರ್ವಿುಕರು ಉಪವಾಸ ಬೀಳುವಂತಾಗಿದೆ. ಅವರಿಗೆ ಸಾಮಾಜಿಕ ಭದ್ರತೆ ಒದಗಿಸಿ, ಎಲ್ಲರ ರಕ್ಷಣೆಗಾಗಿ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

    ಉಪತಹಸೀಲ್ದಾರ್ ಮಂಜುನಾಥ ದಾಸಪ್ಪನವರ ಮನವಿ ಸ್ವೀಕರಿಸಿ, ಮೇಲಧಿಕಾರಿಗಳಿಗೆ ಕಳುಹಿಸಲಾಗುವುದು ಎಂದರು.

    ಸಂಘದ ಮಾಜಿ ಅಧ್ಯಕ್ಷ ಗೋವಿಂದಪ್ಪ ಶರಸೂರಿ, ಕಾರ್ಯದರ್ಶಿ ಬಿ.ಎಸ್. ಕುಸುಗಲ್, ಪ್ರಧಾನೆಪ್ಪ ಗೋಡಿ, ಅಶೋಕ ಬನ್ನಿಕೊಪ್ಪ, ಸಿಂದೋಗೆಪ್ಪ ದುರಗಣ್ಣವರ, ಸಂತೋಷ ಕುಂಬಾರ, ನೀಲಪ್ಪ ಗದ್ದಿ, ನೀಲಪ್ಪ ಶರಸೂರಿ, ನಿಂಗಪ್ಪ ಗದ್ದಿ, ಮುದಕಣ್ಣ ಗದ್ದಿ, ಜಗದೀಶ ಡಂಬಳ, ಮಲ್ಲಪ್ಪ ಗದ್ದಿ, ಸಣ್ಣಮಲ್ಲಪ್ಪ ಗದ್ದಿ, ರಾಮಣ್ಣ ಕೋಳಿವಾಡ, ಹನುಮಂತಪ್ಪ ಬಾಲೆಹೊಸೂರು ಇತರರಿದ್ದರು.

    ರೈತರ ಪರದಾಟ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಲಕ್ಷ್ಮೇಶ್ವರ ಎಪಿಎಂಸಿ ಲೈಸೆನ್ಸ್​ದಾರರ ಹಮಾಲಿ ಕೆಲಸಗಾರರ ಸಂಘದ ಸದಸ್ಯರ ಪ್ರತಿಭಟನೆಯಿಂದ ಎಪಿಎಂಸಿಯಲ್ಲಿ ವ್ಯಾಪಾರ-ವಹಿವಾಟು ಸ್ಥಗಿತಗೊಂಡಿತ್ತು. ಸತತ ಮಳೆಯಿಂದ ಕಂಗಾಲಾಗಿರುವ ರೈತರಿಗೆ ಶೇಂಗಾ ಫಸಲು ಮಾರಾಟ ಮಾಡಲಾಗದೆ ಪರದಾಡುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts