More

    ಗುರುಕುಲ ಗೋಲ್ಡನ್ ಸ್ಕಾಲರ್​ಶಿಪ್​ಗೆ 100 ವಿದ್ಯಾರ್ಥಿಗಳು ಆಯ್ಕೆ

    ಭಾಲ್ಕಿ: ಗ್ರಾಮೀಣ, ಬಡವರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ಶ್ರೀ ಚನ್ನಬಸವೇಶ್ವರ ಗುರುಕುಲ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜು ನಡೆಸಿದ ಗೋಲ್ಡನ್ ಸ್ಕಾಲರ್​ಶಿಪ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 100 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ತಿಳಿಸಿದರು.

    ಪಟ್ಟಣದ ಹೊರವಲಯದ ಗುರುಕುಲದಲ್ಲಿ ಇತ್ತೀಚೆಗೆ ಪರೀಕ್ಷೆ ನಡೆಸಲಾಗಿತ್ತು. ಕಲಬುರಗಿ, ಯಾದಗಿರಿ, ಬಳ್ಳಾರಿ, ಬೆಳಗಾವಿ, ಹುಬ್ಬಳಿ-ಧಾರವಾಡ, ಉಡುಪಿ, ಬೀದರ್, ವಿಜಯಪುರ ಮತ್ತು ನೆರೆಯ ತೆಲಂಗಾಣ, ಮಹಾರಾಷ್ಟ್ರದಿಂದ 3153 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 100 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದು, ಇವರು ಉಚಿತ ಶಿಕ್ಷಣ ಪಡೆಯಲು ಅರ್ಹತೆ ಪಡೆದಿದ್ದಾರೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    25 ವಿದ್ಯಾರ್ಥಿಗಳು ಎರಡು ವರ್ಷ ವಸತಿಸಹಿತ ಉಚಿತ ಪಿಯು ಶಿಕ್ಷಣ, ನೀಟ್, ಐಐಟಿ ತರಬೇತಿ ಹಾಗೂ 75 ವಿದ್ಯಾರ್ಥಿಗಳು ವಸತಿರಹಿತ ಉಚಿತ ಪಿಯು ಶಿಕ್ಷಣ, ನೀಟ್, ಐಐಟಿ ತರಬೇತಿ ಪಡೆಯಲಿದ್ದಾರೆ. ಇದರಲ್ಲೂ ಬಡವರು, ಆರ್ಥಿಕ ತೊಂದರೆ ಅನುಭವಿಸುವ ಮಕ್ಕಳಿಗೆ ಮಠದಲ್ಲಿ ಉಚಿತ ವಸತಿ ಕಲ್ಪಿಸಲಾಗುವುದು ಎಂದು ತಿಳಿಸಿದರು.

    100 ಪ್ರಶ್ನೆಗಳಿಗೆ 400 ಅಂಕ ನಿಗದಿಗೊಳಿಸಲಾಗಿತ್ತು. ಆಯ್ಕೆಯಾದ 100ರಲ್ಲಿ 65 ವಿದ್ಯಾರ್ಥಿಗಳು, 35 ವಿದ್ಯಾರ್ಥಿನಿಯರಿದ್ದಾರೆ. ಸರ್ಕಾರಿ ಪ್ರೌಢಶಾಲೆ 11 ಮಕ್ಕಳು ಆಯ್ಕೆಯಾಗಿದ್ದು ವಿಶೇಷ ಎಂದರು.

    ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಗಡಿ ಭಾಗದ ಮಕ್ಕಳಿಗೆ ಅಕ್ಷರ, ಅನ್ನ, ಆಶ್ರಯ ಜತೆಗೆ ಮಾನವೀಯ ಮೌಲ್ಯ ತಿಳಿಸಿಕೊಡಲು ಪಟ್ಟದ್ದೇವರು ಕಟ್ಟಿದ ವಿದ್ಯಾ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಸಾವಿರಾರು ಮಕ್ಕಳಿಗೆ ದಾರಿದೀಪವಾಗಿದೆ. ಶಿಕ್ಷಣದ ಜತೆಗೆ ಸದಾ ಹೊಸತನವನ್ನು ತರುವ ಪ್ರಯತ್ನ ಗುರುಕುಲ ಮಾಡುತ್ತಿದೆ ಎಂದು ಹೇಳಿದರು.

    ಸಂಸ್ಥೆ ನಿರ್ದೇಶಕ ಶಶಿಧರ ಕೋಸಂಬೆ, ಆಡಳಿತಾಧಿಕಾರಿ ಮೋಹನರಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts