More

    ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಒತ್ತು

    ಹುಕ್ಕೇರಿ: ಶಿರಗಾಂವ ಉಪಕೇಂದ್ರದ ಮೇಲಿನ ವಿದ್ಯುತ್ ಸಂಪರ್ಕ ಭಾರ ಕಡಿಮೆಗೊಳಿಸುವ ನಿಟ್ಟಿನಲ್ಲಿ ಹಾಗೂ ಈ ಭಾಗದ ರೈತರಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವ ಸಂಕಲ್ಪದಿಂದ ಸಚಿವ ಉಮೇಶ ಕತ್ತಿ ಅವರು ವಿದ್ಯುತ್ ಪ್ರಸರಣ ಮಾರ್ಗ ಕಾಮಗಾರಿಗೆ ಮಂಜೂರಾತಿ ಕೊಡಿಸಿದ್ದಾರೆ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ರಮೇಶ ಕತ್ತಿ ಹೇಳಿದ್ದಾರೆ.

    ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಹೊಸದಾಗಿ 110/11 ಕೆವಿ ವಿದ್ಯುತ್ ಉಪಕೇಂದ್ರ ಸ್ಥಾಪನೆ, ಉದ್ದೇಶಿತ ಉಪಕೇಂದ್ರಕ್ಕೆ ಈಗಿರುವ ವಿಶ್ವರಾಜ ಶುಗರ್ಸ್‌ನಿಂದ ವಿದ್ಯುತ್ ಪ್ರಸರಣ ಮಾರ್ಗ ನಿರ್ಮಿಸುವ 10.55 ಕೋಟಿ ರೂ. ವೆಚ್ಚದ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಈ ಉಪಕೇಂದ್ರದಿಂದ ಬೆಲ್ಲದ ಬಾಗೇವಾಡಿ, ಕಡಹಟ್ಟಿ, ಶಿರಹಟ್ಟಿ, ಸಾರಾಪುರ ಮತ್ತು ಶಿರಢಾಣ ಗ್ರಾಮಗಳಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಆಗಲಿದೆ. ಇದರಿಂದ ರೈತರಿಗೆ ಆಗುತ್ತಿರುವ ವಿದ್ಯುತ್ ಸಮಸ್ಯೆ ಪರಿಹಾರವಾಗುತ್ತದೆ. ಈ ಯೋಜನೆಯನ್ನು ಮುಂಬರುವ 3 ದಶಕಗಳ ಬೇಡಿಕೆಗೆ ಅನ್ವಯಿಸುವಂತೆ ಮಂಜೂರಾತಿ ಮಾಡಿಸಲಾಗಿದೆ ಎಂದರು.

    ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ರವೀಂದ್ರ ಹಿಡಕಲ್ ಮಾತನಾಡಿ, ಈ ಉಪಕೇಂದ್ರದ ಜತೆಗೆ ಶೀಘ್ರ ಸುಲ್ತಾನಪುರದಲ್ಲೂ ಇಂತಹ ಉಪಕೇಂದ್ರ ಪ್ರಾರಂಭಿಸಲು ಮಂಜೂರಾತಿ ದೊರಕಿದೆ ಎಂದರು.

    ಸಚಿವ ಉಮೇಶ ಕತ್ತಿ ರೈತರ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈಗಾಗಲೇ ರೈತರಿಗೆ ತೋಟಪಟ್ಟಿ ರಸ್ತೆ, ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ರಸ್ತೆಗಳು ಹಾಗೂ ನೀರಾವರಿಗಾಗಿ ಕೆರೆ-ಕಟ್ಟೆಗಳ ನಿರ್ಮಾಣ ಮಾಡುವ ಮೂಲಕ ಅವರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ ಎಂದರು. ವಿದ್ಯುತ್ ಪ್ರಸರಣ ನಿಗಮದ ಎಸ್‌ಇ ಶ್ರೀಕಾಂತ ಸಸಾಲಟ್ಟಿ ಮಾತನಾಡಿ, ಈ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗಾಗಿ ಸಂಪೂರ್ಣಗೊಳಿಸುವ ಚಿಂತನೆ ಮಾಡಲಾಗಿದೆ.

    ಯೋಜನೆಯಿಂದ ವಾರ್ಷಿಕವಾಗಿ 6.025 ಮಿಲಿಯನ್ ಯೂನಿಟ್ ವಿದ್ಯುತ್ ಉಳಿತಾಯವಾಗಲಿದೆ. ಜತೆಗೆ 11 ಗ್ರಾಮಗಳ ರೈತರಿಗೆ ಗುಣಮಟ್ಟದ ವಿದ್ಯುತ್ ಮತ್ತು ಬೆಲ್ಲದ ಬಾಗೇವಾಡಿ ಮತ್ತು ಸಾರಾಪುರ ಗ್ರಾಮಗಳಿಗೆ ನಿರಂತರ ಜ್ಯೋತಿಯಡಿ ವಿದ್ಯುತ್ ಸರಬರಾಜು ಆಗಲಿದೆ ಎಂದರು. ಇದೇ ಸಂದರ್ಭದಲ್ಲಿ ಅತಿಥಿಗಳನ್ನು ಸತ್ಕರಿಸಿದರು.

    ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಸಂಘದ ನಿರ್ದೇಶಕ ರವೀಂದ್ರ ಅಸೋದೆ, ಗ್ರಾಪಂ ಅಧ್ಯಕ್ಷೆ ಜ್ಯೋತಿ ಮಾಹುರಕರ್, ಪಿಕೆಪಿಎಸ್ ನಿರ್ದೇಶಕ ಅಶೋಕ ಬೆಲ್ಲದ, ಮಹಾನಿಂಗ ಶೆಟ್ಟಿ, ದೀಪಕ ಮುರಗಾಲಿ, ರಾಜೇಶ ಪಾಟೀಲ, ಸಂತೋಷಕುಮಾರ, ಸಿ.ಬಿ.ಜಾಡರ, ಆರ್.ಎಸ್. ಲೋಹಾರ, ಆರ್.ಇ. ನೇಮಿನಾಥ ಖೇಮಲಾಪುರೆ, ಉದಯ ಮಗದುಮ್ಮ, ಎಸ್.ಎಸ್.ಖರೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts