More

    ಗುಣಮಟ್ಟದ ಕಾಮಗಾರಿ ಕೈಗೊಳ್ಳಿ

    ರಾಮದುರ್ಗ: ಕೋವಿಡ್ ಸಂದರ್ಭದಲ್ಲಿಯೂ ಮೂಲ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ ಅನುದಾನ ಒದಗಿಸಿದ್ದು, ಸರ್ಕಾರದ ಹಣ ಸದ್ಭಳಕೆಯಾಗಬೇಕಾದಲ್ಲಿ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಕಳಪೆ ಕಾಮಗಾರಿಯಾದಲ್ಲಿ ಅಂತವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಎಚ್ಚರಿಕೆ ನೀಡಿದರು.

    ತಾಲೂಕಿನ ಚಿಲಮೂರ ಗ್ರಾಮದಲ್ಲಿ ಟಿಎಸ್‌ಪಿ ಯೋಜನೆಯ 13 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ ರಸ್ತೆ ನಿರ್ಮಾಣ, ನರಸಾಪುರ ಗ್ರಾಮದ ಎಸ್.ಟಿ ಕಾಲೋನಿಯಲ್ಲಿ 22 ಲಕ್ಷ ರೂ. ವೆಚ್ಚದಲ್ಲಿ ಪೇವರ್ಸ್‌ ಅಳವಡಿಕೆ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ನರಸಾಪುರ ಗ್ರಾಮಕ್ಕೆ ನನ್ನ ಅವಧಿಯಲ್ಲಿ 1 ಕೋಟಿ ರೂ. ವೆಚ್ಚದ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಗ್ರಾಮಸ್ಥರ ಎಲ್ಲ ಬೇಡಿಕೆಗಳನ್ನು ಮುಂಬರುವ ದಿನಗಳಲ್ಲಿ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಗ್ರಾಮಸ್ಥರು ಗುತ್ತಿಗೆದಾರರೊಂದಿಗೆ ಸಹಕಾರದಿಂದ ವರ್ತಿಸಿ, ಮುಂದೆ ನಿಂತು ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕು. ಅನವಶ್ಯಕ ತಂಟೆ ತಕರಾರು ತೆಗೆಯಬಾರದು ಎಂದು ಮನವಿ ಮಾಡಿದರು.

    ಗ್ರಾಮದ ಮುಖಂಡರಾದ ಉಮೇಶ ಬಳಿಗಾರ ಬಾಳನಗೌಡ ಪಾಟೀಲ, ವೆಂಕನಗೌಡ ಪಾಟೀಲ, ಈರಪ್ಪ ಹಳ್ಳಿ, ಶಿವಪ್ಪ ಕಡ್ಲೆಪ್ಪನವರ, ಪಾಂಡು ಬಾಣಿ, ಮಹಾಂತೇಶ ಬಡಿಗೇರ, ಉಮೇಶ ಹಳ್ಳಿ, ಸಿಕಂದರ ಮುಧೋಳ, ಲಕ್ಷ್ಮಣ ಇನಾಮದಾರ, ಲೋಕೋಪಯೋಗಿ ಇಲಾಖೆಯ ಎಇಇ ಆರ್.ಝಡ್ ಸೊಲ್ಲಾಪೂರ, ಜೆಇ ಕೆ.ಎಂ. ದಳವಾಯಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಯಾದವಾಡ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts