More

    ಗುಡ್ಡದಲ್ಲಿ ಅಕೇಶಿಯಾ ಸಸಿ ನೆಡಬೇಡಿ

    ಕುಮಟಾ: ತಾಲೂಕಿನ ಹೆಗಡೆ ಪಂಚಾಯಿತಿ ವ್ಯಾಪ್ತಿಯ ಮಾಸೂರು ಗುಡ್ಡದಲ್ಲಿ ಅಕೇಶಿಯಾ ಸಸಿಗಳನ್ನು ನೆಡಬಾರದು ಎಂದು ಮಾಸೂರಿನ ಬೊಬ್ರುಮಂದಿರದಲ್ಲಿ ಗ್ರಾಮಸ್ಥರು ಮಂಗಳವಾರ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

    ಮಾಸೂರು ಭಾಗದಲ್ಲಿ ಮೊದಲು ನೀರಿಗೆ ಬರಗಾಲವಿರಲಿಲ್ಲ. ಅರಣ್ಯ ಇಲಾಖೆಯು ಅಕೇಶಿಯಾ ನೆಡುತೋಪು ಬೆಳೆದ ನಂತರ ಅಂತರ್ಜಲ ಕುಸಿಯುತ್ತ ಬಂತು. ಈಗೀಗ ಜನವರಿ ತಿಂಗಳಲ್ಲೇ ಬಾವಿಯ ನೀರು ಬರಿದಾಗುತ್ತಿದೆ. ಅರಣ್ಯೀಕರಣದಿಂದ ಅಂತರ್ಜಲ ಹೆಚ್ಚುವ ಬದಲು ಬರಿದಾಗುತ್ತಿರುವುದು ನಮ್ಮ ಅನುಭವಕ್ಕೆ ಬಂದಿದೆ. ಅದಕ್ಕಾಗಿ ಅಕೇಶಿಯಾ ಹೊರತುಪಡಿಸಿ ಪ್ರಾಣಿ, ಪಕ್ಷಿ ಸಂಕುಲಗಳಿಗೆ ಆಶ್ರಯ ಒದಗಿಸುವ, ಅಂತರ್ಜಲ ಹೆಚ್ಚಿಸುವ ಮಾವು, ನೇರಳೆ, ಆಲ, ಅತ್ತಿ, ಹಲಸು ಇತರ ಗಿಡಗಳನ್ನು ನೆಡಬೇಕು ಎಂದು ಗ್ರಾಮಸ್ಥರು ಮನವಿ ತಿಳಿಸಿದ್ದಾರೆ.

    ಮನವಿ ಸ್ವೀಕರಿಸಿದ ಆರ್​ಎಫ್​ಒ ಪ್ರವೀಣ ನಾಯಕ, ಈಗಾಗಲೇ ನೆಡುವುದಕ್ಕಾಗಿ ಅಕೇಶಿಯಾ ಗಿಡಗಳು ಬಂದಿವೆ. ನೆಡುತೋಪಿನ ಅರ್ಧದಷ್ಟು ಭಾಗಕ್ಕೆ ಮಾತ್ರ ಅಕೇಶಿಯಾ ಗಿಡ ಹಾಕುತ್ತೇವೆ. ಉಳಿದ ಭಾಗಕ್ಕೆ ಅನ್ಯ ಗಿಡಗಳನ್ನು ಬೆಳೆಸುತ್ತೇವೆ ಎಂದರು.

    ಹೆಗಡೆ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಪಟಗಾರ, ಜಿಪಂ ಮಾಜಿ ಸದಸ್ಯ ಗೋವಿಂದ ಪಟಗಾರ, ರಾಘವೇಂದ್ರ ಪಟಗಾರ, ರಮೇಶ ನಾಯ್ಕ, ಎಂ.ಎಸ್. ಗುನಗಾ, ನಾರಾಯಣ ಪಟಗಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts