More

    ಗುಜರಾತ್‌ನಲ್ಲಿ ಕೆಕೆಸಿಸಿಐ ಟೀಮ್ ಸ್ಟಡಿ

    ಕಲಬುರಗಿ: ಔದ್ಯೋಗಿಕ ವಲಯದಲ್ಲಿ ಪರ್ಯಾಯ ಮಾರ್ಗ, ಕಲಬುರಗಿಯಲ್ಲಿ ಪ್ರಸ್ತಾವಿತ ಜವಳಿ ಪಾರ್ಕ್ನಲ್ಲಿ ಬಂಡವಾಳ ಹೂಡಿಕೆಗೆ ಯೋಜನೆಯೊಂದಿಗೆ ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ(ಕೆಕೆಸಿಸಿಐ) ಪದಾಧಿಕಾರಿಗಳು, ಸದಸ್ಯರ ನಿಯೋಗ ಗುಜರಾತ್ ಜವಳಿ ಕೈಗಾರಿಕೆಗಳಿಗೆ ಇತ್ತೀಚಿಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ.

    ಸಂಸ್ಥೆ ಅಧ್ಯಕ್ಷ ಶಶಿಕಾಂತ ಪಾಟೀಲ್, ಕಾರ್ಯದರ್ಶಿ ಮಂಜುನಾಥ ಜೇವರ್ಗಿ, ಪ್ರವಾಸೋದ್ಯಮ ಸಮಿತಿ ಅಧ್ಯಕ್ಷ ದಿನೇಶ ಪಾಟೀಲ್, ನಿಕಟಪೂರ್ವ ಅಧ್ಯಕ್ಷ ಪ್ರಶಾಂತ ಮಾನಕರ್, ನಿಕಟಪೂರ್ವ ಕಾರ್ಯದರ್ಶಿ ಶರಣಬಸಪ್ಪ ಪಪ್ಪಾ ಇತರರ ನಿಯೋಗ ಗುಜರಾತ್ ಭೇಟಿ ವೇಳೆ ವಡೋದರಾ ಚೇಂಬರ್ ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು, ಸವಲಿ ಗುಜರಾತ್ ಇಂಡಸ್ಟ್ರೀಸ್ ಅಸೊಸಿಯೇಷನ್ ಜತೆ ಸಂವಾದ ನಡೆಸಿದರು.

    ರಾಜಕೋಟ್‌ನ ವಿವಿಧ ಜವಳಿ ಉದ್ಯಮ, ಸ್ಪಿನ್ನಿಂಗ್ ಉದ್ಯಮ ಹಾಗೂ ಕೈಗಾರಿಕಾ ಘಟಕಗಳಿಗೆ ಭೇಟಿ ನೀಡಲಾಯಿತು. ಸ್ಟ್ಯಾಚ್ಯೂ ಆಫ್ ಯುನಿಟಿ, ಪ್ರಸಿದ್ಧ ಪ್ರವಾಸೋದ್ಯಮ ತಾಣ ಕೇವಾಡಿಯಾ, ಸವಲಿ ಗುಜರಾತ್ ಇಂಡಸ್ಟಿçಯಲ್ ಡೆವಲಪ್‌ಮೆಂಟ್ ಕಾರ್ಪೋರೇಷನ್ (ಜಿಐಡಿಸಿ) ವಡೋದರಾ ಮತ್ತು ಗುಜರಾತ್ ಮಂತ್ರಿ ಮಂಡಳದ ಸದಸ್ಯರು, ಅಲ್ಲಿನ ಸಿಎಂ ಭುಪೇಂದ್ರಭಾಯಿ ಪಟೇಲ್ ಅವರನ್ನು ಭೇಟಿ ಮಾಡಲಾಯಿತು. ಎಂ.ಎಂ. ಯಾರ್ನ್ಸ್ ಪ್ರೈವೇಟ್ ಲಿಮಿಟೆಡ್ ಕಾರ್ಯನಿರ್ವಾಹಕ ನಿರ್ದೇಶಕ, ಹೆಸರಾಂತ ಜವಳಿ ಉದ್ಯಮಿ ಡಾ.ಭರತ ಬೋಗರಾ ಜತೆ ಜವಳಿ ಕಾರ್ಖಾನೆಗೆ ಭೇಟಿ ನೀಡಿ ಚರ್ಚಿಸಲಾಯಿತು. ಗುಜರಾತ್ ಕೈಗಾರಿಕಾ ನೀತಿ ಕರ್ನಾಟಕದಲ್ಲೂ ಅಳವಡಿಸಲು ಪ್ರಯತ್ನ ಮಾಡುವುದಕ್ಕೆ ಭೇಟಿ ಪೂರಕವಾಯಿತು ಎಂದು ಸಂಸ್ಥೆ ಅಧ್ಯಕ್ಷ ಶಶಿಕಾಂತ ಪಾಟೀಲ್ ತಿಳಿಸಿದ್ದಾರೆ.

    ಕಲ್ಯಾಣ ಕರ್ನಾಟಕದಲ್ಲಿ ಕೃಷಿ ಮಳೆ ಆಧರಿತವಾಗಿ ಉಳಿದಿದೆ. ಕೈಗಾರಿಕೆಗಳಂಥ ಪರ್ಯಾಯ ವ್ಯವಸ್ಥೆ ಇಲ್ಲಿ ಇರದಿರುವುದರಿಂದ ವಲಸೆ ಸಾಮಾನ್ಯವಾಗಿದೆ. ಈ ಭಾಗಕ್ಕೆ ಕೇಂದ್ರ ಸರ್ಕಾರ ೩೭೧(ಜೆ) ವಿಶೇಷ ಸ್ಥಾನಮಾನ ನೀಡಿ ದಶಕವಾದರೂ ಜನಸಾಮಾನ್ಯರ ಬದುಕಿನಲ್ಲಿ ಯಾವುದೇ ಸುಧಾರಣೆ ಕಂಡುಬAದಿಲ್ಲ. ಈ ಮಧ್ಯೆ, ಕೇಂದ್ರ ಸರ್ಕಾರ ಜಿಲ್ಲೆಯಲ್ಲಿ ಒಂದು ಬೃಹತ್ ಜವಳಿ ಪಾರ್ಕ್ ಸ್ಥಾಪನೆಗೆ ಮುಂದಾಗಿದೆ. ಇದರ ಲಾಭ ಪಡೆಯುವ ನಿಟ್ಟಿನಲ್ಲಿ ಚೇಂಬರ್ ನಿಯೋಗ ಅಧ್ಯಯನ ನಡೆಸಿದೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts