More

    ಗಾಳಿ- ಮಳೆಗೆ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿ

    ಶಿರಸಿ: ನಗರ ಸೇರಿ ಗ್ರಾಮೀಣ ಭಾಗದಲ್ಲಿ ಭಾನುವಾರ ಸುರಿದ ಭಾರಿ ಗಾಳಿ- ಮಳೆಗೆ 50 ಕ್ಕೂ ಹೆಚ್ಚು ಮರಗಳು ಧರೆಗುರುಳಿ, 20ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

    ಸಂಜೆ 4.30 ಗಂಟೆಯಿಂದ ಆರಂಭಗೊಂಡ ಮಳೆಯ ಜತೆ ಗಾಳಿ ಬೀಸಿದ ಜನರನ್ನು ಕಂಗಾಲಾಗುವಂತೆ ಮಾಡಿತ್ತು.

    ಗಾಂಧಿನಗರದಲ್ಲಿ ನಾಗೇಶ ನಾಯ್ಕ ಎಂಬುವವರಿಗೆ ಸೇರಿದ ಮನೆಯ ಮೇಲೆ ಮಾವು ಹಾಗೂ ತೆಂಗಿನ ಮರ ಬಿದ್ದ ಪರಿಣಾಮ ಮನೆಯೊಳಗಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

    ಕೋಟೆಗಲ್ಲಿಯಲ್ಲೂ ಮನೆಯ ಮೇಲೆ ಮರ ಬಿದ್ದು, ಛಾವಣಿಗೆ ಹಾನಿಯಾಗಿದೆ. ನೆಹರುನಗರ, ಹೊಸಪೇಟೆ ರಸ್ತೆ ಮತ್ತಿತರೆಡೆ ಮನೆ, ಅಂಗಡಿಗಳ ಮೇಲ್ಛಾವಣಿ ಗಾಳಿಗೆ ಹಾರಿಸಿಕೊಂಡು ಹೋಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ನಗರದ ನಿಲೇಕಣಿ ಮೀನು ಮಾರುಕಟ್ಟೆ ಬಳಿ ಮರವೊಂದು ಮೀನು ಮಾರಾಟಗಾರ ಸುರೇಶ ಎಂಬುವವರಿಗೆ ಸೇರಿದ ವಾಹನದ ಮೇಲೆ ಬಿದ್ದ ಪರಿಣಾಮ ವಾಹನ ಜಖಂಗೊಂಡಿದೆ. ಘಟನೆ ವೇಳೆ ವಾಹನದೊಳಗಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    ನಗರದ ವಿಕಾಸಾಶ್ರಮ ಮೈದಾನದಲ್ಲಿ ತರಕಾರಿ ದಾಸ್ತಾನು ಮಾಡಿದ್ದ 8 ಕ್ಕೂ ಹೆಚ್ಚು ಮಳಿಗೆಗಳ ಮೇಲ್ಛಾವಣಿ ಗಾಳಿಯ ರಭಸಕ್ಕೆ ಹಾರಿ ದೂರದಲ್ಲಿ ಬಿದ್ದಿತ್ತು. ಇದರಿಂದ ದಾಸ್ತಾನಿಟ್ಟ ತರಕಾರಿ ಸಂಪೂರ್ಣ ಮಳೆ ನೀರಲ್ಲಿ ನೆನೆಯುವಂತಾಯಿತು. ಇಲ್ಲೇ ಸನಿಹವಿದ್ದ ನಾಟಕ ಕಂಪನಿಯೊಂದರ ಟೆಂಟ್ ಬುಡಮೇಲಾಗಿದೆ. 30 ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.

    ಕೆಲವು ತಾಲೂಕುಗಳಲ್ಲಿ ಮಳೆ: ಸಿದ್ದಾಪುರ, ಮುಂಡಗೋಡ, ಹಳಿಯಾಳ, ಯಲ್ಲಾಫುರ ತಾಲೂಕಿನ ವಿವಿಧೆಡೆ ಗುಡುಗು, ಮಿಂಚು ಸಹಿತ ಗಾಳಿಮಳೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts