More

    ಗಾಂಧಿ ಮಂಟಪದ ಬಳಿ ತ್ಯಾಜ್ಯ ವಿಲೇವಾರಿ ವಾಹನ

    ಮಡಿಕೇರಿ: ನಗರದ ಗಾಂಧಿ ಮಂಟಪದ ಆವರಣದಲ್ಲಿ ತ್ಯಾಜ್ಯ ವಿಲೇವಾರಿ ವಾಹನಗಳನ್ನು ನಿಲ್ಲಿಸುವ ಮೂಲಕ ನಗರಸಭೆ ಮಹಾತ್ಮಗಾಂಧಿಗೆ ಅಗೌರವ ತೋರಿದೆ ಎಂದು ಕೊಡಗು ಜಿಲ್ಲಾ ಸರ್ವೋದಯ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

    ಗಾಂಧಿ ಮಂಟಪಕ್ಕೆ ಗುರುವಾರ ಭೇಟಿ ನೀಡಿದ್ದ ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಅಲ್ಲಿನ ಅಶುಚಿತ್ವ ವಾತಾವರಣ ಕಂಡು ಆಕ್ಷೇಪ ವ್ಯಕ್ತಪಡಿಸಿದರು.
    ಶೌಚಗೃಹಗಳ ತ್ಯಾಜ್ಯ ಸೇರಿದಂತೆ ಕಸ ವಿಲೇವಾರಿ ಮಾಡುವ ಎಲ್ಲ ವಾಹನಗಳನ್ನು ಗಾಂಧಿ ಮಂಟಪದ ಆವರಣದಲ್ಲಿ ನಿಲ್ಲಿಸಲಾಗಿದೆ. ಈ ಪ್ರದೇಶ ಕೆಸರುಮಯವಾಗಿದ್ದು, ಗಾಂಧಿ ಪ್ರತಿಮೆ ಬಳಿ ಅನೈರ್ಮಲ್ಯ ನೆಲೆಸಿದೆ. ಗಾಂಧಿ ಮಂಟಪ ವೀಕ್ಷಿಸಲು ಬರುವ ಪ್ರವಾಸಿಗರು ಕಸದ ವಾಹನ ನೋಡುವ ಪರಿಸ್ಥಿತಿ ಎದುರಾಗಿದೆ ಎಂದು ಕುಶಾಲಪ್ಪ ಆರೋಪಿಸಿದರು.

    ಗಾಂಧಿ ಮಂಟಪದ ಅಭಿವೃದ್ಧಿಗಾಗಿ ಸರ್ಕಾರ ಈ ಜಾಗವನ್ನು ಮೀಸಲಿಟ್ಟು ಹಣ ಕೂಡ ಬಿಡುಗಡೆ ಮಾಡಿದೆ. ಯೋಜನೆ ಅನುಷ್ಠಾನಕ್ಕಾಗಿ ಸರ್ವೋದಯ ಸಮಿತಿ ಅವಿರತ ಶ್ರಮ ವಹಿಸಿದೆ. ಆದರೀಗ ಈ ಪ್ರದೇಶವನ್ನು ತ್ಯಾಜ್ಯ ವಿಲೇವಾರಿ ಮಾಡುವ ವಾಹನಗಳ ನಿಲುಗಡೆಗೆ ಬಳಸಿಕೊಳ್ಳಲಾಗಿದೆ. ತಕ್ಷಣವೇ ನಗರಸಭೆ ವಾಹನಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡದಿದ್ದಲ್ಲಿ ಆ.20ರಂದು ವಾಹನಗಳ ಸಹಿತ ಗಾಂಧಿ ಮಂಟಪದ ಆವರಣಕ್ಕೆ ಬೀಗ ಜಡಿಯುವುದಾಗಿ ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts