More

    ಗಾಂಧಿ ತತ್ವ ನಿರ್ಲಕ್ಷ್ಯ ಬೇಡ – ಸಿ.ಎಚ್.ದೇವರಾಜ್ ಮನವಿ

    ದಾವಣಗೆರೆ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ತತ್ವಾದರ್ಶಗಳನ್ನು ಪಾಲಿಸದೇ ಇರುವುದು ಅವರ ಹತ್ಯೆಗಿಂತಲೂ ಘೋರವಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಎಚ್.ದೇವರಾಜ್ ಹೇಳಿದರು.
    ದಾವಣಗೆರೆ ವಿದ್ಯಾನಗರ ಲಯನ್ಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಗಾಂಧಿ ವಿಚಾರಧಾರೆಗಳ ಬಗ್ಗೆ ನಾವಿಂದು ಚಿಂತನೆ ಮಾಡುವ ಅನಿವಾರ್ಯತೆ ಇದೆ ಎಂದರು.
    ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ಸುಮಾರು 90 ವರ್ಷಗಳ ಕಾಲ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಹಲವಾರು ಮಹನೀಯರ ಬಲಿದಾನವಾಗಿದೆ. ಇದು ವ್ಯರ್ಥವಾಗದಿರಲು ನಾವು ರಾಷ್ಟ್ರ ಕಟ್ಟುವ ಕಾಯಕದಲ್ಲಿ ಕೈ ಜೋಡಿಸಬೇಕಿದೆ ಎಂದು ಹೇಳಿದರು.
    ಸಂವಿಧಾನ ನಮಗೆ ಮೂಲ ಹಕ್ಕುಗಳ ಜತೆಗೆ ಮೂಲಭೂತ ಕರ್ತವ್ಯಗಳನ್ನೂ ನೀಡಿದೆ. ಕರ್ತವ್ಯಗಳ ಪಾಲನೆ ಸರಿಯಾದಲ್ಲಿ ಹಕ್ಕುಗಳು ಅನುಷ್ಠಾನ ತಾನಾಗಿಯೇ ಆಗಲಿದೆ. ಈ ಹಿನ್ನಲೆಯಲ್ಲಿ ಸ್ವಾತಂತ್ರ್ಯ ವನ್ನು ಸ್ವೇಚ್ಛೆ ಎಂದು ಭಾವಿಸಬಾರದು ಎಂದರು.
    ಭಾರತ ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ 5 ನೇ ಸ್ಥಾನದಲ್ಲಿದೆ. ಮುಂಬರುವ ದಿನಗಳಲ್ಲಿ 3 ನೇ ಸ್ಥಾನಕ್ಕೇರುವ ಲಕ್ಷಣಗಳಿವೆ. ಹೀಗಾಗಿ ಭಾರತೀಯರು ಎಂದು ಗರ್ವ ಪಡಬೇಕಿದೆ ಎಂದು ಹೇಳಿದರು. ಅಶಕ್ತರಿಗೆ ಲಯನ್ಸ್ ಕ್ಲಬ್ ವತಿಯಿಂದ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.
    ಲಯನ್ಸ್ ಜಿಲ್ಲಾ ಮಾಜಿ ಗೌರ‌್ನರ್ ಎಚ್.ಎನ್.ಶಿವಕುಮಾರ್. ಡಾ.ಜಿ.ಶಿವಲಿಂಗಪ್ಪ, ವಲಯ ಚೇರ‌್ಮನ್ ದಿಳ್ಯಪ್ಪ, ಕ್ಲಬ್ ಕಾರ್ಯದರ್ಶಿ ಡಾ.ಜಿ.ಎನ್.ಎಚ್.ಕುಮಾರ್. ಖಜಾಂಚಿ ಶೀತಲ್‌ಕುಮಾರ್, ಸುದರ್ಶನ್, ಎಲ್.ಎಸ್.ಪ್ರಭುದೇವ್, ಮಹೇಂದ್ರಕುಮಾರ್, ಡಿ.ವಿ.ಗಿರೀಶ್, ಶಿವಶಂಕರ್, ಬಸವರಾಜ್, ಮಾಜಿ ಕಮಾಂಡೆಂಟ್ ಮಹಾಲಿಂಗಪ್ಪ, ಸೇವಾದಳದ ಬಸವರಾಜಪ್ಪ ಇತರರಿದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts