More

    ಗಾಂಜಾ ಮಾರಾಟಗಾರ ಅಂದರ್

    ಹುಬ್ಬಳ್ಳಿ: ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಕುಖ್ಯಾತ ವ್ಯಕ್ತಿಯನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿ, ಆತನಿಂದ 1 ಕೆ.ಜಿ. ಗಾಂಜಾ, 1 ಕಾರು ಹಾಗೂ 1 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.

    ವಿಜಯಪುರ ಮದಿನಾನಗರ ಮೂಲದ ಸದ್ಯ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ವಾಸವಿರುವ ಅಬ್ದುಲ್ ರಜಾಕ್ ಮೊಹಮ್ಮದಸಾಬ್ ಖಾಸಬಾಗ್ (42) ಬಂಧಿತ. ಉಳ್ಳಾಗಡ್ಡಿ ವ್ಯಾಪಾರ ಮಾಡಿಕೊಂಡಿದ್ದ ರಜಾಕ್ ಕಲಬುರಗಿ ಹೆದ್ದಾರಿಯಲ್ಲಿ ಗಾಂಜಾ ಖರೀದಿಸಿ ಹುಬ್ಬಳ್ಳಿ- ಧಾರವಾಡ ಮತ್ತಿತರೆಡೆಗಳಲ್ಲಿ ಮಾರಾಟ ಮಾಡುತ್ತಿದ್ದ. ಸೆ.3ರಂದು ಉಪನಗರ ಠಾಣೆ ಪೊಲೀಸರು ಇಬ್ಬರು ಗಾಂಜಾ ಮಾರಾಟಗಾರರನ್ನು ಬಂಧಿಸಿ 5 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದರು. ಆ ತಂಡಕ್ಕೆ ಈತನೇ ಗಾಂಜಾ ಸರಬರಾಜು ಮಾಡುತ್ತಿದ್ದ. ಆ ಪ್ರಕರಣದಲ್ಲಿ ಆರೋಪಿಯಾಗಿದ್ದ ರಜಾಕ್ ತಲೆಮರೆಸಿಕೊಂಡಿದ್ದ. ಬಾಗಲಕೋಟೆ ಗದ್ದನಕೇರಿ ಕ್ರಾಸ್ ಬಳಿ ಸೋಮವಾರ ಪೊಲೀಸರು ಬಂಧಿಸಿದ್ದಾರೆ. ಇನ್ಸ್​ಪೆಕ್ಟರ್ ಎಸ್.ಕೆ. ಹೊಳೆಯಣ್ಣವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಪಿಎಸ್​ಐ ಅಶೋಕ ಬಿ.ಎಸ್.ಪಿ., ಸಿಬ್ಬಂದಿ ಸುನೀಲ ಪಾಂಡೆ, ಮಲ್ಲಿಕಾರ್ಜುನ ದನಿಗೊಂಡ, ಮಂಜುನಾಥ ಯಕ್ಕಡಿ, ಉಮೇಶ ಹೆದ್ದೇರಿ, ರೇಣಪ್ಪ ಸಿಕ್ಕಲಗೇರ, ರವಿ ಹೊಸಮನಿ, ನಾಗರಾಜ ಬೀರಣ್ಣವರ ತಂಡದಲ್ಲಿದ್ದರು.
    ಗಾಂಜಾ ಸಂಗ್ರಹ; ಓರ್ವನ ಬಂಧನ
    ಧಾರವಾಡ
    : ಕೆಲ ದಿನಗಳಿಂದ ಅಕ್ರಮ ಗಾಂಜಾ ಮಾರಾಟಗಾರರ ಮಟ್ಟ ಹಾಕುತ್ತಿರುವ ಪೊಲೀಸರು, ಸೇವೆಯಿಂದ ವಜಾಗೊಂಡ ಪೊಲೀಸ್ ಕಾನ್ಸ್​ಟೇಬಲ್ ಮನೆಯಲ್ಲೇ ಗಾಂಜಾ ಪತ್ತೆ ಮಾಡಿದ ಘಟನೆ ಸೋಮವಾರ ನಗರದಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕು ಕನದಾಳ ಗ್ರಾಮ ಮೂಲದ, ಇಲ್ಲಿನ ಮುರುಘಾಮಠ ಬಳಿಯ ಸಂಜು ಪಾಟೀಲ್ (30) ಬಂಧಿತ ವ್ಯಕ್ತಿ. ಬೆಂಗಳೂರಿನ ಪೊಲೀಸ್ ಠಾಣೆ ಒಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈತ, ಕೆಲ ಕಾರಣಗಳಿಂದ ವಜಾಗೊಂಡಿದ್ದ. ನಂತರ ಸ್ಪರ್ಧಾತಕ ಪರೀಕ್ಷೆ ಸಿದ್ಧತೆಗಾಗಿ ಧಾರವಾಡಕ್ಕೆ ಆಗಮಿಸಿದ್ದ ಎನ್ನಲಾಗಿದೆ. ಈತ ಮನೆಯಲ್ಲಿ ಗಾಂಜಾ ಸಂಗ್ರಹಿಸಿ ಇಟ್ಟಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಉಪನಗರ ಠಾಣೆ ಪೊಲೀಸರು, ಇನ್​ಸ್ಪೆಕ್ಟರ್ ಪ್ರಮೋದ ಯಲಿಗಾರ ನೇತೃತ್ವದಲ್ಲಿ ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತನಿಂದ 283 ಗ್ರಾಂ. ಗಾಂಜಾ, ಮೊಬೈಲ್ ಜಪ್ತಿ ಮಾಡಿದ್ದಾರೆ.

    ಸಂಜು ಪಾಟೀಲ್ ಬಂಧನದ ಬಳಿಕ ಆತನಿಗೆ ಕರೊನಾ ಪರೀಕ್ಷೆ ಮಾಡಿಸಿದ್ದು, ಪಾಸಿಟಿವ್ ಇರುವುದಾಗಿ ವರದಿ ಬಂದಿದೆ. ಹೀಗಾಗಿ ಆತನನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts