More

    ಗಲಭೆಕೋರರಿಗೆ ಕಠಿಣ ಶಿಕ್ಷೆ ವಿಧಿಸಿ

    ಹಿರೇಕೆರೂರ: ಬೆಂಗಳೂರಿನ ಕೆ.ಜಿ ಮತ್ತು ಡಿ.ಜೆ. ಹಳ್ಳಿಯಲ್ಲಿ ಒಂದು ಕೋಮಿನವರನ್ನು ಗುರಿಯಾಗಿಸಿ ನಡೆಸಿದ ಗಲಭೆ ಖಂಡಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳ ತಾಲೂಕು ಘಟಕದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ರಿಯಾಜುದ್ದಿನ್ ಬಾಗವಾನ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ತಾಲೂಕು ಬಜರಂಗದಳದ ಸಂಚಾಲಕ ವಿನಯ ಕರ್ನಲ್ ಮಾತನಾಡಿ, ಬೆಂಗಳೂರಿನ ಕೆ.ಜಿ ಮತ್ತು ಡಿ.ಜೆ ಹಳ್ಳಿಯಲ್ಲಿ ಎಸ್​ಡಿಪಿಐ ಹಾಗೂ ಪಿಎಫ್​ಐ ಸಂಘಟನೆಯ ಕಾರ್ಯಕರ್ತರು, ಮುಖಂಡರು, ಒಂದು ಕೋಮಿನ ಯುವಕರು ಮಂಗಳವಾರ ದೊಂಬಿ ನಡೆಸಿ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿ ಅಮಾಯಕರಿಗೆ ತೊಂದರೆ ನೀಡಿದ್ದಾರೆ. ಅಲ್ಲದೆ, ಪೊಲೀಸ್ ಠಾಣೆಯನ್ನು ಸಂಪೂರ್ಣ ಧ್ವಂಸ ಮಾಡಿರುವ ಕೃತ್ಯ ಖಂಡನೀಯ ಎಂದರು.

    ರಾಜ್ಯದಲ್ಲಿ ಇಂತಹ ಘಟನೆಗಳು ಪದೆ ಪದೇ ಮರುಕಳಿಸುತ್ತಿರುವುದು ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಸರ್ಕಾರ ಇಂತಹ ಮುಖಂಡರ ಮತ್ತು ಸಂಘಟನೆಯ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಬೆಂಗಳೂರಿನಲ್ಲಿ ನಡೆದ ಘಟನೆಗೆ ಕಾರಣವಾದ ಎಸ್​ಡಿಪಿಐ ಮತ್ತು ಪಿಎಫ್​ಐ ಸಂಘಟನೆಗಳನ್ನು ಕೂಡಲೇ ನಿಷೇಧಿಸಬೇಕು. ಘಟನೆಯ ರೂವಾರಿ ಸ್ಥಳೀಯ ಕಾರ್ಪೆರೇಟರ್ ಮುಜಾಯಿಲ್ ಪಾಷಾ ಹಾಗೂ ಒಂದು ಕೋಮಿನ ಗುಂಡಾಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ವಿನಯ ಕರ್ನಲ್ ಆಗ್ರಹಿಸಿದರು.

    ನಿರ್ದೇಶನ ನೀಡಲು ಮನವಿ: ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕುರಿತಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ತಾಲೂಕು ವಿಶ್ವ ಹಿಂದು ಪರಿಷತ್, ಬಜರಂಗದಳದ ಕಾರ್ಯಕರ್ತರು ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು.

    ಜಿಲ್ಲಾ ಸಂಚಾಲಕ ಅನೀಲ ಹಲವಾಗಿಲ್ ಮಾತನಾಡಿ, ವಿಶ್ವಹಿಂದು ಪರಿಷತ್, ಬಜರಂಗದಳ ಹಾಗೂ ಹಿಂದುಪರ ಸಂಘಟನೆಗಳು, ಸಾರ್ವಜನಿಕರು ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಸಾಂಪ್ರದಾಯಿಕವಾಗಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸುತ್ತಿದ್ದಾರೆ. ಹೀಗಾಗಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ದಂಡಾಧಿಕಾರಿಗಳು ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ತಹಸೀಲ್ದಾರ್ ರಿಯಾಜುದ್ದಿನ್ ಬಾಗವಾನ್ ಮಾತನಾಡಿ, ತಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು. ಜಿಲ್ಲಾಧಿಕಾರಿಗಳ ಆದೇಶದ ನಂತರ ಸೂಕ್ತ ನಿರ್ದೇಶನ ನೀಡಲಾಗುವುದು ಎಂದರು.

    ಬಜರಂಗದಳ ಜಿಲ್ಲಾ ಸಂಚಾಲಕ ಅನೀಲ ಹಲವಾಗಿಲ್, ರಾಕೇಶ ಬಾಳಿಕಾಯಿ, ಗುರುರಾಜ ಕರಡಿ, ಗಣೇಶ ಮಾರವಳ್ಳಿ, ಶರತ ಮರಿಗೌಡ್ರ, ಸಂತೋಷ ಬೆಳಗುತ್ತಿ, ನಂದನ ಹಲವಾಗಿಲ್, ಅಭಿಷೇಕ ಕಾಯಕದ, ಪ್ರಮೋದ ಬಣಕಾರ, ಆದರ್ಶ ತಿಪ್ಪಶೆಟ್ಟಿ, ಕೀರ್ತಿ ಎಂ., ವಿಶ್ವನಾಥ ಬಣಕಾರ, ಅಜಿತ ಮರಿಗೌಡರ, ಕುಮಾರ ಪೂಜಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts