More

    ಗರ್ಭಿಣಿಗೆ ಜಿಲ್ಲಾಡಳಿತದಿಂದ ಸೀಮಂತ

    ನಂದಗುಡಿ: 8 ತಿಂಗಳ ಗರ್ಭಿಣಿಗೆ ಕರೊನಾ ಸೋಂಕು ದೃಢಪಟ್ಟಾಗ ಜಿಲ್ಲಾಡಳಿತ ಸವಾಲಾಗಿ ಸ್ವೀಕರಿಸಿ, ಸೂಕ್ತ ಚಿಕಿತ್ಸೆ ಒದಗಿಸಿದ್ದರಿಂದ 14 ದಿನಗಳಲ್ಲೆ ಸೋಂಕು ಮುಕ್ತಳಾಗಿ ಮನೆಗೆ ವಾಪಸ್ಸಾಗಲು ಸಾಧ್ಯವಾಗಿದೆ ಎಂದು ತಹಸೀಲ್ದಾರ್ ಗೀತಾ ತಿಳಿಸಿದರು.

    ಹೋಬಳಿಯ ಚಿಕ್ಕ ಕೊರಟಿಯಲ್ಲಿ ಗುರುವಾರ ಕರೊನಾ ಸೋಂಕಿನಿಂದ ಮುಕ್ತಳಾದ ಗರ್ಭಿಣಿಗೆ ಜಿಲ್ಲಾಡಳಿತ ಅಯೋಜಿಸಿದ್ದ ಸೀಮಂತ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸೋಂಕಿಗೆ ಸಿಲುಕಿ ಆತಂಕ ಎದುರಿಸುತ್ತಿದ್ದ ಗರ್ಭಿಣಿಗೆ ಸಂಕಷ್ಟದಲ್ಲಿ ತನ್ನವರಿಲ್ಲ ಇಲ್ಲ ಎಂದು ಕೊರಗದೆ, ತವರಿನ ನೆನಪು ಕಾಡದಿರಲಿ ಎಂಬ ಸದುದ್ದೇಶದಿಂದ ತುಂಬು ಗರ್ಭಿಣಿಗೆ ಅತ್ಮಸ್ಥೈರ್ಯ ತುಂಬುವ ಕೆಲಸಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಸದ್ಯ ಮಹಿಳೆ ಕೊರೊನಾ ಮುಕ್ತವಾಗಿದ್ದಾರೆ ಎಂದರು.

    ಆರೋಗ್ಯ ಅಧಿಕಾರಿಗಳು ಪ್ರತಿ ನಿತ್ಯ ಧೈರ್ಯ ತುಂಬಿ ಚಿಕಿತ್ಸೆ ನೀಡಿದ್ದರಿಂದ ಸೋಂಕು ಮುಕ್ತಳಾಗಿ ಮನೆಗೆ ಹಿಂತಿರುಗಲು ಸಾಧ್ಯವಾಯಿತು. ಅಧಿಕಾರಿಗಳು ಸೀಮಂತ ಮಾಡಿದ್ದು, ಸಂತಸ ತಂದಿದೆ ಎಂದು ಸೋಂಕಿನಿಂದ ಗುಣಮುಖರಾದ ಮಹಿಳೆ ತಿಳಿಸಿದರು.

    ಡಿವೈಎಸ್ಪಿ ನಿಂಗಪ್ಪ ಬಸಪ್ಪ ಸಕ್ರಿ, ತಾಲೂಕು ಅರೋಗ್ಯಾಧಿಕಾರಿ ಮಂಜುನಾಥ್, ಸಿಪಿಐ ರವೀಂದ್ರ, ಪಿಎಸ್‌ಐ ಲಕ್ಷ್ಮೀನಾರಾಯಣ್, ವೈದ್ಯ ಡಾ. ಭಾಸ್ಕರ್ ರೆಡ್ಡಿ, ಡಾ. ಕಿರಣ್ ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts