More

    ಗಮನ ಸೆಳೆದ ‘ಶಾಲೆಯಲ್ಲಿ ಸಂತೆ’

    ಅಥಣಿ: ಫಾಸ್ಟ್ ಫುಡ್, ಜಂಕ್ ಫುಡ್‌ನಿಂದ ಆರೋಗ್ಯಕ್ಕೆ ಆಗುವ ಹಾನಿ ಹಾಗೂ ಹಣ್ಣು, ತರಕಾರಿ ಸೇವನೆಯಿಂದ ಆಗುವ ಪ್ರಯೋಜನ ತಿಳಿಸುವುದು ಪಾಲಕರ ಕರ್ತವ್ಯ ಎಂದು ಸಮಾಜ ಸೇವಕ ರವಿ ಪೂಜಾರಿ ಹೇಳಿದರು.

    ಪಟ್ಟಣದ ಶ್ರೀಮತಿ ಕಾಶಿಬಾಯಿ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಾಲೆಯಲ್ಲಿ ಸಂತೆ ತರಕಾರಿ ಹಾಗೂ ಹಣ್ಣುಗಳ ಪ್ರದರ್ಶನ, ಮಾರಾಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಸುರೇಶ ಚಿಕ್ಕಟ್ಟಿ ಮಾತನಾಡಿ, ಮಕ್ಕಳು ಮಾರಾಟ ಮಾಡುತ್ತಿದ್ದ ಹಣ್ಣು, ತರಕಾರಿಗಳನ್ನು ರವಿ ಪೂಜಾರಿ ಖರೀದಿಸಿರುವುದು ಇತರರಿಗೆ ಪ್ರೇರಣೆ ಎಂದರು.

    ಕಾರ್ಯದರ್ಶಿ ಸದಾಶಿವ ಚಿಕ್ಕಟ್ಟಿ ಮಾತನಾಡಿದರು. ಪಾಲಕರು ತರಕಾರಿ, ಹಣ್ಣು ಖರೀದಿಸಿ ಮಕ್ಕಳ ಸಂತೆಗೆ ಪ್ರೋತ್ಸಾಹಿಸಿದರು. ಸಂತೆ ಗ್ರಾಮಸ್ಥರ ಗಮನ ಸೆಳೆಯಿತು. ಮುಖ್ಯಾಧ್ಯಾಪಕ ಟಿ.ಎ.ಮೊಗೇರ, ನಿಜಪ್ಪ ಹಿರೇಮನಿ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts