More

    ರಟ್ಟಿಹಳ್ಳಿಯಲ್ಲಿ ಗಮನ ಸೆಳೆದ ಆರ್​ಎಸ್​ಎಸ್ ಪಥ ಸಂಚಲನ

    ರಟ್ಟಿಹಳ್ಳಿ: ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆರ್​ಎಸ್​ಎಸ್ ಸ್ವಯಂ ಸೇವಕರು ಶುಕ್ರವಾರ ಆಕರ್ಷಕ ಪಥ ಸಂಚಲನ ನಡೆಸಿದರು.

    ಧಾರವಾಡ, ಹಾವೇರಿ, ಗದಗ, ಶಿವಮೊಗ್ಗ ಸೇರಿದಂತೆ ಇತರೆ ಜಿಲ್ಲೆಗಳಿಂದ ಆಗಮಿಸಿದ ಗಣವೇಷಧಾರಿಗಳು, ವಿಶ್ವ ಹಿಂದು ಪರಿಷತ್, ಬಜರಂಗ ದಳ, ಹಿಂದುಪರ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು. ಮೆರವಣಿಗೆಯುದ್ದಕ್ಕೂ ಘೊಷಣೆ ಕೂಗುವ ಮೂಲಕ ಮೆರುಗು ಹೆಚ್ಚಿಸಿದರು. ಗಣವೇಷಧಾರಿಗಳ ಶಿಸ್ತುಬದ್ಧ ನಡಿಗೆ ನೋಡುಗರ ಗಮನ ಸೆಳೆಯಿತು.

    ಮೆರವಣಿಗೆ ಸಾಗುವ ಮಾರ್ಗದಲ್ಲಿ ಸ್ಥಳೀಯರು ತಳಿರು- ತೋರಣಗಳಿಂದ ಅಲಂಕರಿಸಿದ್ದರು. ದೇಶಭಕ್ತ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್​ಸಿಂಗ್, ವೀರ ಸಾವರ್ಕರ್, ಛತ್ರಪತಿ ಶಿವಾಜಿ ಮಹಾರಾಜರು, ವೀರಮದಕರಿ ನಾಯಕ, ಮಹರ್ಷಿ ವಾಲ್ಮೀಕಿ, ಡಾ.ಬಿ.ಆರ್. ಅಂಬೇಡ್ಕರ್, ಕಿತ್ತೂರ ರಾಣಿ ಚನ್ನಮ್ಮ, ಬಸವಣ್ಣ ಹೀಗೆ ಹಲವು ಶರಣರ ಭಾವಚಿತ್ರಗಳು ರಾರಾಜಿಸಿದವು. ಪಥಸಂಚಲನ ಆಗಮಿಸುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಸ್ವಯಂಸೇವಕರಿಗೆ ಪುಷ್ಪ ಎರಚಿ ಸ್ವಾಗತ ಕೋರಿದರು.

    ಮಧ್ಯಾಹ್ನ 3.30ಕ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಪ್ರಾರಂಭವಾದ ಪಥ ಸಂಚಲನ ಹಳೇ ಬಸ್ ನಿಲ್ದಾಣ, ಕೋಟೆ ಓಣಿ, ರಾಜಬೀದಿ, ಕದಂಬ ನಗರ, ಕುರಬಗೇರಿ ದ್ವಾರಬಾಗಿಲು, ಫ್ರೆಂಡ್ಸ್ ಸರ್ಕಲ್, ಭಗತ್​ಸಿಂಗ್ ವೃತ್ತ, ಮಾಸೂರು ರಸ್ತೆ, ಶಿವಾಜಿ ನಗರದ ಮೂಲಕ ಆಗಮಿಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನಕ್ಕೆ ಬಂದು ಮುಕ್ತಾಯವಾಯಿತು.

    ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ತಮ್ಮ ಬೆಂಬಲಿಗರೊಂದಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಸ್ವಯಂಸೇವಕರ ಪಥ ಸಂಚಲನಕ್ಕೆ ಪುಷ್ಪಾರ್ಪಣೆ ಮಾಡಿದರು. ರಾಣೆಬೆನ್ನೂರ ಶಾಸಕ ಅರುಣಕುಮಾರ ಪೂಜಾರ ಗಣವೇಷ ಧರಿಸಿ ಗಮನ ಸೆಳೆದರು. ಮಾಜಿ ಶಾಸಕ ಶಿವರಾಜ ಸಜ್ಜನರ, ರಾಮಣ್ಣ ಮಳಗಿ ಇತರರು ಭಾಗವಹಿಸಿದ್ದರು.

    ಬಿಗಿ ಪೊಲೀಸ್ ಬಂದೋಬಸ್ತ್: ಪಟ್ಟಣದಲ್ಲಿ ಆರ್​ಎಸ್​ಎಸ್ ಪ್ರಮುಖರ ಮೇಲೆ ಅನ್ಯಕೋಮಿನವರು ಹಲ್ಲೆ ನಡೆಸಿದ್ದರಿಂದ ಪಥ ಸಂಚಲನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಬಿಗಿ ಭದ್ರತೆ ಒದಗಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts