More

    ಗಬ್ಬೆದ್ದು ನಾರುತ್ತಿರುವ ಮೂತ್ರಾಲಯ

    ಕೊಡೇಕಲ್ : ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾಗಿರುವ ಪಟ್ಟಣಕ್ಕೆ ನಿತ್ಯ ಕೆಲಸ-ಕರ‍್ಯಕ್ಕಾಗಿ ಸುತ್ತಲಿನ ಗ್ರಾಮಸ್ಥರು ಬಂದು ಹೋಗುತ್ತಾರೆ. ಆದರೆ ಹೀಗೆ ಬರುವ ಜನರಿಗೆ ಗ್ರಾಮದಲ್ಲಿ ಸೂಕ್ತವಾದ ಸಾರ್ವಜನಿಕ ಶೌಚಗೃಹ ಮತ್ತು ಮೂತ್ರಾಲಯ ಇಲ್ಲದೆ ಬಯಲೇ ಆಶ್ರಯಿಸುವಂತಾಗಿದೆ.

    ಸರ್ಕಾರಿ ಆಸ್ಪತ್ರೆ, ನಾಡಕಚೇರಿ ಮತ್ತು ಬ್ಯಾಂಕ್ ಸೇರಿ ಇನ್ನಿತರ ಕಚೇರಿ ಹೊಂದಿರುವ ಕೊಡೇಕಲ್‌ನಲ್ಲಿ ಹಲವು ವರ್ಷಗಳ ಹಿಂದೆ ಗ್ರಾಮದ ಬಸ್ ನಿಲ್ದಾಣದ ಬಳಿ ಪುರುಷರಿಗಾಗಿ ನಿರ್ಮಿಸಿದ್ದ ಸಾರ್ವಜನಿಕ ಮೂತ್ರಾಲಯ ಸಮರ್ಪಕ ನಿರ್ವಹಣೆ ಇಲ್ಲದೆ ಉಪಯೋಗ ಅಷ್ಟೇ ಅಲ್ಲ ಕಾಲಿಡದಂತ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನಿತ್ಯ ಕೆಲಸ-ಕರ‍್ಯ ನಿಮಿತ್ತ ಮತ್ತು ದೇವಸ್ಥಾನಕ್ಕೆ ಬರುವ ಜನರು ಬಯಲೇ ಆಶ್ರಯಿಸಬೇಕಾಗಿರುವುದು ಅನಿವಾರ್ಯವಾಗಿದೆ.

    ಕೆಲ ವರ್ಷಗಳ ಹಿಂದೆ ಗ್ರಾಪಂನಿAದ ಪುರುಷರಿಗಾಗಿ ಈ ಮೂತ್ರಾಲಯ ನಿರ್ಮಿಸಲಾಗಿದೆ. ಇದರಿಂದಾಗಿ ಅನುಕೂಲ ಕೂಡ ಆಗಿತ್ತು. ಆದರೆ ದಿನ ಕಳೆದಂತೆ ನಿರ್ವಹಣೆ ಇಲ್ಲದ ಕಾರಣ ಗಬ್ಬೆದ್ದು ನಾರುತ್ತಿದೆ. ಹೀಗಾಗಿ ಈ ರಸ್ತೆ ಮಾರ್ಗವಾಗಿ ಹೋಗುವವರು ಮೂಗು ಮುಚ್ಚಿಕೊಂಡೇ ಹೋಗಬೇಕಾಗಿದೆ. ಮಹಿಳೆಯರಿಗಾಗಿ ನಿರ್ಮಿಸಿದ್ದ ಮೂತ್ರಾಲಯ ಸ್ಥಿತಿಯಂತು ಹೇಳತೀರದಾಗಿದ್ದು, ಇದರಿಂದ ತೀವ್ರ ತೊಂದರೆ ಅನುಭವಿಸಬೇಕಾಗಿದೆ.

    ನಿತ್ಯ ಪಟ್ಟಣಕ್ಕೆ ಆಗಮಿಸುವ ಪುರುಷ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಶೌಚಗೃಹ ಮತ್ತು ಮೂತ್ರಾಲಯ ನಿರ್ಮಿಸಬೇಕಾಗಿದೆ. ಹೀಗಾಗಿ ಸಂಬAಧಿಸಿದ ಅಧಿಕಾರಿಗಳು ಗಮನ ಹರಿಸಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗೆ ಸ್ಪಂದಿಸಬೇಕೆAಬುದು ಗ್ರಾಮಸ್ಥರ ಒತ್ತಾಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts