More

    ಗದ್ದೆಗಿಳಿದ ಕಾನ್ವೆಂಟ್ ಮಕ್ಕಳು


    ವಿಜಯವಾಣಿ ಸುದ್ದಿಜಾಲ ಹಳಿಯಾಳ(ಉತ್ತರ ಕನ್ನಡ)

    ಪಟ್ಟಣದ ವಿಮಲ್ ವಿ. ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್ ನ 8ನೇ ತರಗತಿಯ ವಿದ್ಯಾರ್ಥಿಗಳು ಗದ್ದೆಗೆ ಇಳಿದು ಭತ್ತ ನಾಟಿ ಮಾಡುವ ಮೂಲಕ ಗಮನ ಸೆಳೆದರು.

    ವಿವಿಡಿ ಶಾಲೆಯ 40 ವಿದ್ಯಾರ್ಥಿಗಳು ಜೊಯಿಡಾ ತಾಲೂಕಿನ ಸಿಂಗರಗಾವ್ ಪಂಚಾಯಿತಿ ಭಾಗದ ದುರ್ಗಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಕೃಷಿಕರಾದ ತುಕಾರಾಮ ಗವಸ ಎಂಬುವರ ಹೊಲದಲ್ಲಿ ವ್ಯವಸಾಯದ ಮಾಹಿತಿಯನ್ನು ಪಡೆದರು. ಪ್ರಾಯೋಗಿಕವಾಗಿ ಒಂದು ಎಕರೆಯಲ್ಲಿ ಭತ್ತದ ಸಸಿಗಳನ್ನು ನಾಟಿ ಮಾಡುವುದರ ಮೂಲಕ ಕೃಷಿಯ ಪ್ರಯೋಜನ‌‌ ಪಡೆದರು.
    ಈ ಸಂದರ್ಭದಲ್ಲಿ ಶಿಕ್ಷಕರಾದ ಸಂಗೀತಾ ಮೇಲಗೇರಿ, ಮಂಜುನಾಥ ಬರ್ಕೆರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts