More

    ಗದಗ: ವಿ ಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರಿಗೆ ಅನ್ನದಾನೀಶ್ವರ ಪ್ರತಿಷ್ಠಾನ ಪುರಸ್ಕಾರ

    ಗದಗ

    ಯುವಕರು ಕಾಯಕ ಮತ್ತು ಸಮಯಕ್ಕೆ ಅತೀ ಹೆಚ್ಚು ಮಹತ್ವ ನೀಡಿದ್ದೇ ಜೀವನ ಸುಂದರಗೊಳಿಸಬಹುದು ಎಂದು ಡಾ. ವಿಜಯ ಸಂಕೇಶ್ವರ ಹೇಳಿದರು.

    ಜಿಲ್ಲೆಯ ಮುಂಡರಗಿ ಪಟ್ಟಣದ ಅನ್ನದಾನೀಶ್ವರ ಮಹಾಶಿವಯೋಗಿಗಳ 153ನೇ ಯಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಅನ್ನದಾನೀಶ್ವರ ಪ್ರತಿಷ್ಠಾನ ಪುರಸ್ಕಾರ ಸ್ವೀಕರಿಸಿ ಮಾತನಾಡಿ, ಮೀಸಲಾತಿಯಿಂದ ನಮ್ಮ ಹಕ್ಕು ಪಡೆಯಬಹುದು. ಆದರೆ, ಯುವಕರು ಕಾಯಕ ನಿಷ್ಠೆ ಅಳವಡಿಸಿಕೊಂಡರೆ ಉದ್ಯಮ ಆರಂಭಿಸಿ ನೂರಾರು ಜನರಿಗೆ ಅನ್ನಹಾಕುವ ಶಕ್ತಿ ಸೃಷ್ಟಿಸಿಕೊಳ್ಳಬಹುದು. ಯುವಕರಲ್ಲಿ ಅಂತಹ ಶಕ್ತಿ ಅಡಗಿದ್ದು, ಅದನ್ನು ಹೊರಹೊಮ್ಮಿಸಬೇಕು ಎಂದು ಡಾ. ವಿಜಯ ಸಂಕೇಶ್ವರ ಹೇಳಿದರು. ಕಾಯಕದ ಮೇಲೆ ಪ್ರೀತಿ ಮತ್ತು ವಿಶ್ವಾಸ ಇರಬೇಕು. ರಾಜಕೀಯ, ಉದ್ಯಮ, ಪತ್ರಿಕೋದ್ಯಮದಲ್ಲಿ ಕುಲಗೆಡುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ. ಪ್ರತಿನಿತ್ಯ ಒಂದಿಲ್ಲೊಂದು ಸಂದರ್ಭದಲ್ಲಿ ಹಲವು ಶ್ರೀಗಳ ಆಶಿರ್ವಾದ ಸಿಗುತ್ತಿರುವ ಕಾರಣ ರಾಜಕೀಯ, ಉದ್ಯಮ ಮತ್ತು ಪತ್ರಿಕೋದ್ಯಮದಲ್ಲಿ ಅಪವಿತ್ರವಾಗದೇ ಯಶಸ್ಸು ಸಿಕ್ಕಿದೆ. ಅದಕ್ಕೆ ನಾಡಿನ ಸಾವಿರಾರು ಶ್ರೀಗಳ ಆಶಿರ್ವಾದವೇ ಕಾರಣ ಎಂದರು

    ವೀರಶೈವ – ಲಿಂಗಾಯತ ಎರಡೂ ಒಂದೇ:
    ವೀರಶೈವ ಲಿಂಗಾಯತ ಎರಡೂ ಒಂದೆ ಎಂಬುದನ್ನು ನಾಡೋಜ ಅನ್ನದಾನೀಶ್ವರ ಶ್ರೀಗಳು ಒಳಗೊಂಡು ಹಲವು ಮಠಾಧೀಶರು ಪ್ರತಿಪಾದಿಸಿದರು. ವೀರಶೈವ ಲಿಂಗಾಯತ ಎರಡೂ ಒಂದೇ ಎಂದು ನಿಜ ಹೇಳುವ ದಿಟ್ಟತೆ ತೋರಿದ್ದರು. ನಮ್ಮ ಪತ್ರಿಕೆ ಮೂಲಕವು ಇದೇ ನಿಲುವು ಸ್ಪಷ್ಟಪಡಿಸಿದ್ದೆವು. ಶಿಕ್ಷಕ್ಕೆ ವ್ಯವಸ್ಥೆ ಉಳಿಸಿ ಬೆಳೆಸಲು ವೀರಶೈವ ಲಿಂಗಾಯತ ಮಠಗಳ ಕೊಡುಗೆ ಅಪಾರ ಎಂದ ಡಾ. ವಿಜಯ ಸಂಕೇಶ್ವರ ಬೆಳಗಾವಿಯ ಕೆ ಎಲ್, ತುಮಕೂರಿನ ಸಿದ್ದಗಂಗಾ ಹಾಗೂ ಬಾಗಲಕೋಟೆಯ ಬಸವೇಶ್ವರ ಶಿಕ್ಷಣ ಸಂಸ್ಥೆಗಳನ್ನು ಉದಾರಿಸಿದರು.

    ಬಾಕ್ಸ್:
    ಮುಂಡರಗಿ ಅನ್ನದಾನೀಶ್ವರ ಮಠದ ನಾಡೋಜ ಅನ್ನದಾನೀಶ್ವರ ಶ್ರೀಗಳು ಮಹಾನ್ ಲೇಖಕರಾಗಿದ್ದಾರೆ. 162 ಮಹಾ ಗ್ರಂಥಗಳನ್ನು ಬರೆದಿದ್ದಾರೆ. ಶ್ರೀಮಠಕ್ಕೆ ಎಲ್ಲ ಸಮುದಾಯದ ಭಕ್ತರಿದ್ದು, ಭಕ್ತರ ಕಾಣಿಕೆ, ಬೆಂಬಲದಿಂದ ಮಠಗಳು ಬೆಳೆದು ಸಮಾಜಕ್ಕೆ ಬೆಳಕಾಗುತ್ತವೆ ಎಂದು ಡಾ. ವಿಜಯ ಸಂಕೇಶ್ವರ ಹೇಳಿದರು.

    ಅಮೃತವಾಣಿ ಗ್ರಂಥವನ್ನು ವಿಜಯ ಸಂಕೇಶ್ವರ ಬಿಡುಗಡೆಗೊಳಿಸಿದರು.

    ನಾಡೋಜ ಅನ್ನದಾನೀಶ್ವರ ಶ್ರೀಗಳು, ಮಲ್ಲಿಕಾರ್ಜುನ ಶ್ರೀಗಳು, ಅಭಿನವ ರೇವಣಸಿದ್ದೇಶ್ವರ ಶ್ರೀಗಳು, ಅಧ್ಯಕ್ಷತೆ ಚೆನ್ನಮಲ್ಲ ಶ್ರೀಗಳು, ವಿರೇಶ್ವರ ಶಿವಾಚಾರ್ಯರು, ಶಂಕರ ರಾಜೇಂದ್ರ ಶ್ರೀಗಳು, ಶಿವಯೋಗಿ ಶ್ರೀಗಳು, ನರಸಾಪುರ ಶ್ರೀಗಳು., ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ, ನಿವೃತ್ತ ಪ್ರಾಚಾರ್ಯ ಪಂಚಾಕ್ಷರಯ್ಯ, ಶಿವಕುಮಾರ್ ದೇವರು, ಆಡಳಿತಾಧಿಕಾರಿ ಬಿ.ಜಿ. ಜವಳಿ, ಲಲಿತಾ ಸಂಕೇಶ್ವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts