More

    ಗದಗ: ಲಕ್ಕುಂಡಿಯಲ್ಲಿ ಕ್ರೀಡಾ ಸ್ಪರ್ಧೆ

    ಗದಗ: ಸತತ ಪ್ರಯತ್ನದಿಂದ ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಬಹುದು ಎಂದು ಅಂತರಾಷ್ಟ್ರೀಯ ಕ್ರೀಡಾಪಟು, ಅರ್ಜುನ ಪ್ರಶಸ್ತಿ ವಿಜೇತ ಡಾ. ಸಿ. ಹೊನ್ನಪ್ಪಗೌಡ ಹೇಳಿದರು.
    ಲಕ್ಕುಂಡಿಯ ಬಿ.ಎಚ್​.ಪಾಟೀಲ ಕಾಲೇಜು ಮೈದಾನದಲ್ಲಿ ಶನಿವಾರ ಜರುಗಿದ ವಿವಿಧ ಕ್ರೀಡಾಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಕಬ್ಬಡ್ಡಿ ಮತ್ತು ಕುಸ್ತಿ ಕ್ರೀಡೆಗಳು ಮಣ್ಣಿನ ಗುಣರ್ದಂ ಹೊಂದಿವೆ. ಅಂತರಾಷ್ಟ್ರೀಯ ಮಾನ್ಯತೆ ಪಡೆದಿವೆ. ಗ್ರಾಮೀಣ ಪ್ರತಿಭೆಗಳು ಸೂಕ್ತ ತರಬೇತಿ ಪಡೆದು ಕ್ರೀಟಡೆಯಲ್ಲಿ ಸಾಧನೆ ಮಾಡಬೇಕು ಎಂದರು.
    ಲಕ್ಕುಂಡಿಯ ಪಾರಂಪರಿಕ ಗ್ರಾಮದಲ್ಲಿ ಅರ್ಥರ್ಪೂಣ ಉತ್ಸವ ನಡೆಯುತ್ತಿದೆ. ನಮ್ಮ ಪಾರಂರಿಕ ಆಟಗಳಾದ ಕುಸ್ತಿ, ಕಬ್ಬಡ್ಡಿ ಹಮ್ಮಿಕೊಂಡು ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಇದು ನಮ್ಮ ಸಂಸತಿ, ಸಂಪ್ರದಾಯ ಉಳಿಸಿ ಬೆಳೆಸುವ ಉತ್ಸವವಾಗಿದೆ ಎದು ಉಮೇಶಗೌಡ ಪಾಟೀಲ ಹೇಳಿದರು.
    ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಕುಸ್ತಿಪಟು ಪ್ರೇಮಾ ಹುಚ್ಚಣ್ಣವರ, ಸಿ. ಹಿನ್ನಪ್ಪಗೌಡ ಅವರನ್ನು ಸನ್ಮಾನಿಸಲಾಯಿತು. ಎಸ್ಪಿ ಬಾಬಾಸಾಬ ನೇಮಗೌಡ, ಕೀಡಾ ಅಧಿಕಾರಿ ವಿಠಲ ಜಾಬಗೌಡರ, ಗ್ರಾಪಂ ಅಧ್ಯೆ ಲಲಿತಾ ಗದುಗಿನ ಉಪಾಧ್ಯಕ್ಷ ಸಿದ್ದು ಮುಳಗುಂದ ಇತರರು ಇದ್ದರು.

    ಪ್ರಶಸ್ತಿ ವಿಜೇತರು:
    ಕುಸ್ತಿಯ 61 ಕೆಜಿ ವಿಭಾಗದಲ್ಲಿ “ಕುಮಾರ ಪ್ರಶಸ್ತಿ’ಯನ್ನು ದಾನೇಶ ಲೋಕಾಪುರ, ಬಸವರಾಜ ಕುರಡಗಿ ಹಾಗೂ ಪ್ರವಿಣ ಹಾದಿ ಕ್ರಮವಾಗಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಪ್ರಶಸ್ತಿ ಮತ್ತು 50 ಕೆಜಿ ವಿಭಾಗದಲ್ಲಿ “ಕಿಶೋರಿ ಪ್ರಶಸ್ತಿ’ಯನ್ನು ಸೋನಿಯಾ ಜಾಧವ್​, ಶ್ವೇತಾ ಜಾಧವ್​ ಹಾಗೂ ವರಲಕ್ಷಿ$್ಮ ಕದಡಿ ವಿಜೇತರಾಗಿ ಕ್ರಮವಾಗಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಪ್ರಶಸ್ತಿ ಪಡೆದರು. 53 ಕೆಜಿ ಮಹಿಳೆಯರ ವಿಭಾಗದಲ್ಲಿ ಶಹಿದಾ ಬೇಗಂ ಬಳಿಗಾರ, ಶ್ವೇತಾ ಬಿನ್ನಾಳ ಮತ್ತು ಜಾನವಿ ಕುರಗೋಡ ಕ್ರಮವಾಗಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದು ವಿಜೇತರಾದರು.

    ರಂಗೋಲಿಯಲ್ಲಿ ವಿಜೇತರು:
    ರೇನುಕಾ ಪಾಟೀಲ ಪ್ರಥಮ, ವಿಜಲಕ್ಷಿ$್ಮ ಹೊಸಮನಿ ದ್ವೀತಿಯ ಹಾಗೂ ಲಕ್ಷಿ$್ಮ ಗುಡಿಸಿಲಮನಿ ತೃತೀಯ ಸ್ಥಾನ

    ಅಡುಗೆ ಸ್ಪರ್ಧೆ:
    ಬೆಂಕಿ ಇಲ್ಲದೇ ಅಡುಗೆ ಮಾಡುವ ಸ್ಪರ್ಧೆಯಲ್ಲಿ ವಿಜಯಲಕ್ಷಿ$್ಮ ಕರೆಕಲ್​, ಪ್ರೀತಿ ಬೂದಿಹಾಳ ಹಾಗೂ ಶೋಭಾ ಸುರಕೋಡ್​ ಕ್ರಮವಾಗಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ.

    ಬಾಕ್ಸ್​:
    ಕುಸ್ತಿಯಲ್ಲಿ ರಾಜ್ಯ, ರಾಷ್ಟ್ರೀಯ ಮಟ್ಟದ 60 ಪುರುಷರು, 22 ಮಹಿಳೆಯರು ಹಾಗೂ ಕಬ್ಬಡ್ಡಿಯಲ್ಲಿ 18 ಮಹಿಳಾ ತಂಡ ಸೇರಿ 30ಕ್ಕೂ ಹೆಚ್ಚು ಪುರುಷ ತಂಡಗಳು ಭಾಗವಹಿಸಿವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts