More

    ಗದಗ: ಮಾತಿನ ಚಕಮಕಿ, ಮಧ್ಯಂತರ ವಪರಿಹಾರಕ್ಕೆ ಆಗ್ರಹ(ಭಾಗ೪)

    ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ವಡವಿ ಹೊಸರು ಗ್ರಾಮಕ್ಕೆ ಭೇಟಿ ನೀಡಿದ ಕೇಂದ್ರ ಬರ ಅದ್ಯಯನ ತ‌ಡವು ಮೆಣಸಿನಕಾಯಿ ಬೆಳೆ ನಾಶದ ಕುರಿತು ಮಾಹಿತಿ ಪಡೆಯಿತು. ಈ ವೇಳೆ ಬೆಳೆ ವಿಮೆ ಕುರತು ಗ್ರಾಮಸ್ಥರು, ಅಧಿಕಾರಿ ಹಾಗೂ ಗ್ರಾಪಂ ಸದಸ್ಯರ ನಡುವೆ ಸಣ್ಣಮಟ್ಟದ ಮಾತಿನ ಚಕಮಕಿ ನಡೆದ ಸನ್ನಿವೇಶ ಜರುಗಿತು.

    ಮಳೆ ಅಭಾವ ಸಂಭವಿಸಿದರೂ ಗ್ರಾಪಂ ಸದಸ್ಯರು ವಿಮೆ ಅಧಿಕಾರಿಗಳನ್ನು ಕರೆಸಿ ಬೆಳೆ ಸಮೀಕ್ಷೆ ನಡೆಸಿಲ್ಲ ಎಂದು ದೂರಿದರು. ಜಮೀನಿನಲ್ಲಿ ಬೆಳೆ ನಾಶವಾದರೂ ಶೇ.80 ರಷ್ಟು ಬೆಳೆ ಕಾಳು ಕಟ್ಟಿದೆ ಎಂದು ವಿಮೆ ಕಂಪನಿಯವರು ಸಮೀಕ್ಷೆ ಮಾಡುತ್ತಾರೆ. ಹೊಲಗದ್ದೆಗೆ ಬಂದು ವಿಮೆ ಕಂಪನಿಯವರು ಸಮೀಕ್ಷೆ ನಡೆಸಿಲ್ಲ ಎಂದು ಆರೋಪಿಸದರು., ಗ್ರಾಪಂ ಸದಸ್ಯರಿಗೂ ರೈತರ ಬಗ್ಗೆ ಕಳಕಳಿ ಇಲ್ಲ ಎಂದು ದೂರಿದರು.

    ಸಂಪೂರ್ಣ ಬೆಳೆ ನಾಶ ಆಗಿದ್ದರಿಂದ ಆದಷ್ಟು ಬೇಗ ಬೆಳೆ ಪರಿಹಾರ ವಿತರಿಸುವಂತೆ ಮತ್ತು ಮಧ್ಯಂತರ ತುರ್ತು ಪರಿಹಾರ ನೀಡುವಂತೆ ರೈತರು ಮನವಿ ಮಾಡಿದರು.

    ಜಿಲ್ಲಾಧಿಕಾರಿಗಳು ಮಾತನಾಡಿ, ಜಿಲ್ಲೆಗೆ ಈ ಬಾರಿ ಅತ್ಯಧಿಕ ಬೆಳೆ ವಿಮೆ ಲಭಿಸಲಿದ್ದು, ಇನ್ನೊಂದು ತಿಂಗಳ ಒಳಗಾಗಿ ವಿಮೆ ರೈತರ ಖಾತೆಗೆ ಜಮೆ ಆಗಲಿದೆ ಎಂದು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts