More

    ಗದಗ: ಪಂಚಾಯಿತಿ ವರ್ಸಸ್​ ಎಂಎಸ್​ಐಎಲ್​

    ಶಿವಾನಂದ ಹಿರೇಮಠ ಗದಗ
    ಮದ್ಯ ಮಾರಾಟ ವಿಷಯವಾಗಿ ತಾಲೂಕಿನ ಸೊರಟೂರು ಗ್ರಾಮದಲ್ಲಿ ಸ್ಥಳಿಯ ಪಂಚಾಯಿತಿ ಮತ್ತು ಎಂಎಸ್​ಐಎಲ್​ ಜಿದ್ದಿಗೆ ಬಿದ್ದು ಹೋರಾಟಕ್ಕೆ ಇಳಿದಿವೆ. ಎಂಎಸ್​ಐಎಲ್​ ಸ್ಥಗಿತಗೊಳಿಸುವಂತೆ ಪಂಚಾಯಿತಿ ಸದಸ್ಯರು ತಾಕೀತು ಮಾಡಿದರೆ, ನಿಮ್ಮಪ್ಪಣೆ ನಮಗೇನು ಅಗತ್ಯವಿಲ್ಲ ಎಂದು ಎಂಎಸ್​ಐಎಲ್​ ಸ್ಪಷ್ಟಪಡಿಸಿದೆ. ಹೀಗಾಗಿ ಸೊರಟೂರು ಗ್ರಾಪಂ ಮತ್ತು ಪಂಚಾಯಿತಿ ನಡುವೆ ಶೀತಲ ಸಮರ ಶುರುವಾಗಿದ್ದು, ಗಂಡ ಹೆಂಡಿರ ನಡುವೆ ಕೂಸು ಬಡವಾದಂತೆ ಗ್ರಾಮದ ಯುವಕರು ದುಷ್ಟ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅನೇಕ ಕುಟುಂಬಗಳು ಬೀದಿಗೆ ಬಂದಿವೆ.
    ಸೊರಟೂರು ಗ್ರಾಮದಲ್ಲಿ ಇತ್ತಿಚೆಗೆ ಸ್ಥಳಿಯ ನಿವಾಸಿ ಶಿವಾನಂದ ಮಾದನ್ನವರ ಎಂಬುವರ ಖಾಸಗಿ ಕಟ್ಟಡದಲ್ಲಿ ಎಂಎಸ್​ಐಎಲ್​ ಆರಂಭವಾಗಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಹಾಗೂ ಪಂಚಾಯತಿಯ ಸದಸ್ಯರು ಎಂಎಸ್​ಐಎಲ್​ ಸ್ಥಗಿತಗೊಳಿಸುವಂತೆ ಸೂಚಿಸಿದ್ದರು. ಆದರೆ, ಮದ್ಯದಂಗಡಿ ಮಾಲೀಕರು ಪಂಚಾಯಿತಿ ಸದಸ್ಯರ ಮಾತನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಹೀಗಾಗಿ ಎಂಎಸ್​ಐಎಲ್​ ಗೆ ಮುತ್ತಿಗೆ ಹಾಕಿ ಪ್ರತಿಭಟನಾ ಟನೆಗಳು ಜರುಗಿದವು. ತದನಂತರ ಈ ಬಗ್ಗೆ ವಿಶೇಷ ಗ್ರಾಮ ಸಭೆ ಜರುಗಿಸಿ ಗ್ರಾಮದ ಮಹಿಳೆಯರು, ಸ್ತ್ರೀ ಶಕ್ತಿ ಸಂಗಳು ಹಾಗೂ ಸಾರ್ವಜನಿಕರು ಎಂಎಸ್​ಐಎಲ್​ ಅನ್ನು ನಿಷೇಧಿಸುವಂತೆ ಠರಾವು ಪಾಸು ಮಾಡಿಸಿದ್ದರು. ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಆದರೂ ಎಂಎಸ್​ಐಎಲ್​ ಮುಂದುವರಿಸಲಾಗಿದೆ.
    =====
    ಎಂಎಸ್​ಐಎಲ್​ ವಾದ:
    – ಗ್ರಾಮದಲ್ಲಿ ಕದ್ದು ಮುಚ್ಚಿ ಹಲವು ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ.
    – ಶಾಲಾ ಕಾಲೇಜು ಸಮೀಪದಲ್ಲೇ ಹಲವರು ಮದ್ಯ ಮಾರಾಟ ಮಾಡುತ್ತಾರೆ.
    – ಅಕ್ರಮ ಮದ್ಯ ಮಾರಾಟಗಾರರಿಗೆ ಎಂಎಸ್​ಐಎಲ್​ ನಿಂದ ನಷ್ಟ ಆಗುತ್ತಿದ್ದು, ಉದ್ದೇಶಪೂರ್ವಕ ತಡೆ ನೀಡುತ್ತಿದ್ದಾರೆ.
    – ಅಕ್ರಮ ಮದ್ಯ ಮಾರಾಟಕ್ಕೆ ಗದಗ ನಗರದ ಕೆಲ ಬಾರ್​ ಮಾಲೀಕರ ಬೆಂಬಲವಿದೆ. ಅವರ ಲಾಬಿ ಇರುವ ಕಾರಣ ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡುವ ಹುನ್ನಾರ ನಡೆದಿದೆ.
    – ಸರ್ಕಾರದ ನಿಯಮಾವಳಿಗಳ ಅನುಸಾರವೇ ಎಂಎಸ್​ಐಎಲ್​ ಆರಂಭಿಸಿದ್ದೇವೆ.
    – ಗ್ರಾಮದಲ್ಲಿರುವ ಅಕ್ರಮ ಮದ್ಯ ಮಾರಾಟಗಾರರ ಮೇಲೆ ಕ್ರಮ ಜರುಗಿಸಬೇಕು.
    =====
    ಪಂಚಾಯಿತಿ ವಾದ:
    – ಸ್ಥಳಿಯ ಗ್ರಾಪಂ ಅನುಮತಿ ಪಡೆಯದೇ ಎಂಎಸ್​ಐಎಲ್​ ಆರಂಭಿಸಿದ್ದು ಅಪರಾದ.
    – ಗ್ರಾಮದಲ್ಲಿ ಎಂಎಸ್​ಐಎಲ್​ ಆರಂಭಕ್ಕೆ ಅನುಮತಿ ನೀಡಲು ಗ್ರಾಪಂ ಠರಾವು ಅಗತ್ಯವಿದೆ.
    – ಎಂಎಸ್​ಐಎಲ್​ಗೆ ಅನುಮತಿ ನೀಡುವ ಮುಂಚೆ ಅಬಕಾರಿ ಇಲಾಖೆಯು ಸ್ಥಳಿಯ ಗ್ರಾಪಂ ಗೆ ನೋಟಿಸ್​ ಮೂಲಕ ತಿಳಿಸಲು ವಿಲವಾಗಿದೆ.
    – ಸಾರಾಯಿ ಮುಕ್ತ ಗ್ರಾಮ ಎಂದು ಘೋಷಣೆ ಮಾಡಿದ್ದರು ಕೂಡ ಎಂಎಸ್​ಐಎಲ್​ ಕಾರ್ಯನಿರ್ವಹಿಸುತ್ತಿರುವುದು ಅಕ್ಷಮ್ಯ ಅಪರಾಧ.

    ===
    ಬಾಕ್ಸ್​:
    ಧರ್ಮಸ್ಥಳ ಶ್ರೀ ಮಂಜುನಾಥ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಸಂಬಂಧಿಸಿದ ಮಹಿಳಾ ಗಾರ್ಮೆಂಟ್​ ಒಂದು ಸ್ಥಳಿಯ ಶಿವಾನಂದ ಮಾದನ್ನವರ್​ ಎಂಬುವರ ಖಾಸಗಿ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿದ್ದು, ಅದೇ ಕಟ್ಟದಲ್ಲಿ ಎಂಎಸ್​ಐಎಲ್​ ಆರಂಭವಾಗಿದೆ. ಈ ಹಿನ್ನೆಲೆ ಗ್ರಾಮದ ಮಹಿಳೆಯರ ಆಕ್ರೋಶಕ್ಕೂ ಕಾರಣವಾಗಿ ಗ್ರಾಮದ ಹಿರಿಯರಿಗೆ ದೂರು ಸಲ್ಲಿಸಲಾಗಿತ್ತು. ಹಿರಿಯರ ಮದ್ಯಸ್ಥಿಕೆಯಲ್ಲಿ ಸಭೆ ನಡೆದು ಅಧಿಕೃತ ಮತ್ತು ಅನಧಿಕೃತ ಮದ್ಯ ಮಾರಾಟಕ್ಕೆ ತಡೆ ನೀಡುವಂತೆ ಗ್ರಾಪಂ ಗೆ ಸೂಚಿಸಿದ್ದರು. ಈ ಹಿನ್ನೆಲೆ ಸಾರಾಯಿ ಮುಕ್ತ ಗ್ರಾಮ ಎಂದು ಗ್ರಾಪಂ ಇತ್ತೀಚೆಗೆ ಘೋಷಿಸಿದೆ. ಆದರೆ, ಗ್ರಾಪಂ ನಿರ್ಧಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದೇ ವಿಪರ್ಯಾಸ.
    ===

    ಕೋಟ್​:
    ಗ್ರಾಮದ ಕ್ಷೇಮಾಭಿವೃದ್ಧಿ, ಹಿತಚಿಂತನೆ ಮುಖ್ಯ. ಗ್ರಾಪಂ ವಿರುದ್ಧ ಎಂಎಸ್​ಐಎಲ್​ ನಡೆದುಕೊಂಡರೆ ಉಗ್ರ ಹೋರಾಟ ಮುಂದುವರಿಸಬೇಕಾಗುತ್ತದೆ.
    -ಎಂ. ಏಕಲಾಸಪುರ ಸೊರಟೂರು ಗ್ರಾ.ಪಂ ಅಧ್ಯಕ್ಷ.
    ==
    ಕೋಟ್​:
    ಗ್ರಾಮದಲ್ಲಿ ಕದ್ದುಮುಚ್ಚಿ ಮಾರುತ್ತಿದ್ದ ಮದ್ಯ ಮಾರಾಟಗಾರರಿಗೆ ಎಂಎಸ್​ಐಎಲ್​ ಕಾರ್ಯಾರಂಭದಿಂದ ಬಹುದೊಡ್ಡ ಪೆಟ್ಟು ಬಿದ್ದಿದೆ ಎನ್ನಲಾಗಿದೆ. ಅದಕ್ಕಾಗಿ ಎಂಎಸ್​ಐಎಲ್​ ಸ್ಥಗಿತಗೊಳಿಸುವಂತೆ ಕೆಲವರು ಹುನ್ನಾರ ನಡೆಸಿದ್ದಾರೆ. ನಮ್ಮದು ಸಕ್ರಮ ವ್ಯವಹಾರ.
    – ಶಿವಾನಂದ ಮಾದನ್ನವರ, ಎಂಎಸ್​ಐಎಲ್​ ಗೆ ಕಟ್ಟಡ ಬಾಡಿಗೆ ನೀಡಿದ ಮಾಲೀಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts