More

    ಗದಗ: ನಗರಸಭೆ ಮುಂಭಾಗ ಕಾಂಗ್ರೆಸ್ ಪ್ರತಿಭಟನೆ.

    ಗದಗ

    ನಗರಸಭೆ ಆಡಳಿತದಲ್ಲಿ ಗೊಂದಲ, ಗುಂಪುಗಾರಿಕೆ, ಭಿನ್ನಮತ ತಲೆದೂರಿದ್ದು, ಸಮರ್ಪಕ ಆಡಳಿತ ನಡೆಸಲು ಆಡಳಿತ ಪಕ್ಷ ವಿಫಲವಾಗಿದೆ ಎಂದು ಎಂದು ಆರೋಪಿಸಿ, ಅಧ್ಯಕ್ಷೆ ಉಷಾ ದಾಸರ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಸದಸ್ಯರು ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿದರು.
    ನಗರಸಭೆ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಸದಸ್ಯರು, ರಸ್ತೆ ತಡೆದು ಆಡಳಿತ ಪಕ್ಷದ ವಿರುದ್ಧ ದಿಕ್ಕಾರ ಕೂಗಿದರು. ಈ ವೇಳೆ ಕೆಲಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತು. ಈ ವೇಳೆ ಪೊಲೀಸ್ ಇಲಅಖೆ ಮಧ್ಯಪ್ರವೇಶಿಸಿ ಸಂಚಾರ ಸುಗಮಗೊಳಿಸಿದರು.
    ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ರಮೇಶ್ ಸುಣಗಾರ್ ಅವರಿಗೆ ಮನವಿ ಸಲ್ಲಿಸಿದ ಸದಸ್ಯರು, ಆಡಳಿತ ಪಕ್ಷವಾಗಿರುವ ಬಿಜೆಪಿಯಲ್ಲಿ ಒಕ್ಕೂಟ ಇರದ ಹಿನ್ನೆಲೆ ಅಽಕಾರಿ, ಸಿಬ್ಬಂದಿಗಳು ಕಾರ್ಯಾಲಯದಲ್ಲಿ ಹಾಜರಿರುವುದಿಲ್ಲ. ಇದರಿಂದ ಸಾಮಾನ್ಯ ಜನರಿಗೆ ಅನಾನೂಕೂಲವಾಗುತ್ತಿದೆ. ಫಾರ್ಮ್ ನಂ ೩, ಕಟ್ಟಡ ಪರವಾನಿಗೆ, ಫುಡ್ ಲೈಸೆನ್ಸ್ , ಇತರೆ ಸೌಲಭ್ಯ ಪಡೆಯುವುದು ದುಸ್ತರವಾಗಿದೆ. ನಗರಸಭೆ ಕಮದಾಯ ಇಲಾಖೆಯು ನಿಷ್ಕರೀಯಗೊಂಡಿದೆ. ೨೪/೭ ನಿರಂತರ ನೀರು ಪೂರೈಕೆ ಸಿಬ್ಬಂದಿಗಳಿಗೆ ವೇತನ ನೀಡಿಲ್ಲ. ಈ ಎಲ್ಲ ಕಾರಣದಿಂದ ಸಾರ್ವಜನಿಕರಿಗೆ ಸೌಲಭ್ಯ ಒದಗಿಸಲು ಆಡಳಿತ ಪಕ್ಷ ವಿಫಲವಾಗಿದೆ. ಜಿಲ್ಲಾಽಕಾರಿಗಳು ಮಧ್ಯ ಪ್ರವೇಶಿಸಿ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಕೆಲಸ ಮಾಡಬೇಕಿದೆ. ಇಲ್ಲವಾದರೆ ಪ್ರತಿಭಟನೆ ನಿರಂತರವಾಗಿರಲಿದೆ’ ಎಂದು ಮನವಿ ಸಲ್ಲಿಸಿದರು. ಅಧ್ಯಕ್ಷೆ ಉಷಾ ದಾಸರ ರಾಜೀನಾಮೆ ಸಲ್ಲಿಸಬೇಕು’ ಒತ್ತಾಯಿಸಿದರು.
    ಮನವಿ ಸ್ವೀಕರಿಸಿದ ಪೌರಾಯುಕ್ತರು, ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತರುವುದಾಗಿ ತಿಳಿಸಿದರು. ತದನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಪ್ರತಿಪಕ್ಷ ನಾಯಕ ಎಲ್.ಡಿ. ಚಂದಾವರಿ ಸೇರಿದಂತೆ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts