More

    ಗದಗ ಜಿಲ್ಲೆಯಲ್ಲಿ 114 ಜನರಿಗೆ ಸೋಂಕು

    ಗದಗ: ಜಿಲ್ಲೆಯಲ್ಲಿ ಗುರುವಾರ 114 ಜನರಿಗೆ ಸೋಂಕು ತಗುಲಿದ್ದು, 151 ಜನರು ಸೋಂಕಿನಿಂದ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಒಬ್ಬ ಸೋಂಕಿತ ಮೃತಪಟ್ಟಿದ್ದಾನೆ.

    ಕೋವಿಡ್- 19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು: ಗದಗ- ಬೆಟಗೇರಿ ನಗರಸಭೆ ವ್ಯಾಪ್ತಿಯ ವೀರನಾರಾಯಣ ದೇವಸ್ಥಾನದ ಹತ್ತಿರ, ವಕ್ಕಲಗೇರಿ ಓಣಿ, ಸಾಲ ಓಣಿ, ಶರಣಬಸವೇಶ್ವರ ನಗರ, ಟೆಂಗಿನಕಾಯಿ ಬಜಾರ, ಬನಶಂಕರಿ ಬಡಾವಣೆ, ಅಂಬಾಭವಾನಿ ದೇವಸ್ಥಾನ ಹತ್ತಿರ, ಕಳಸಾಪುರ, ಕಟಗೇರಿ ಓಣಿ, ಹುಡ್ಕೋ ಕಾಲನಿ, ಕೆ.ಎಚ್.ಬಿ. ಕಾಲನಿ, ಟರ್ನಲ್ ಪೇಟೆ, ಮುಳಗುಂದ ನಾಕಾ, ಪುಟ್ಟರಾಜನಗರ, ನೇಕಾರ ಕಾಲನಿ, ರಂಗಪ್ಪಜ್ಜನ ಮಠದ ಹತ್ತಿರ, ವಕೀಲ ಚಾಳ, ಅಬ್ಬಿಗೇರಿ ಕಾಂಪೌಂಡ್, ಗಂಜಿ ಬಸವೇಶ್ವರ ವೃತ್ತ, ಜಿಲ್ಲಾ ಕ್ರೀಡಾಂಗಣದ ಹತ್ತಿರ, ಪಂಚಾಕ್ಷರಿ ನಗರ, ಗೌಡರ ಓಣಿ, ಸಿದ್ಧಲಿಂಗ ನಗರ, ಆರ.ಕೆ.ನಗರ, ಖಾನತೋಟ, ಜಿಲ್ಲಾ ಸಮೀಕ್ಷಣಾಧಿಕಾರಿಗಳ ಕಚೇರಿ, ಹುಲಕೋಟಿ, ಚಿಂಚಲಿ, ಮಲ್ಲಸಮುದ್ರ, ಮುಳಗುಂದ, ಬಿಂಕದಕಟ್ಟಿ, ನೀರಲಗಿ. ನರಗುಂದದ ಎನ್.ಎಚ್.ಟಿ. ಮಿಲ್, ಶಿರೋಳ ಆಸ್ಪತ್ರೆ ಹತ್ತಿರ, ಕೊಣ್ಣೂರ, ಶಿರೋಳ. ರೋಣ ಪಟ್ಟಣದ ಸಿಂಡಿಕೇಟ್ ಬ್ಯಾಂಕ ಹತ್ತಿರ, ಯಾವಗಲ್, ಹೊಳೆಆಲೂರ, ಮೆಣಸಗಿ, ಬೆಳವಣಕಿ, ಮುಶಿಗೇರಿ, ಹಿರೇಮಣ್ಣೂರ. ಶಿರಹಟ್ಟಿ, ನವನಗರ, ಲಕ್ಷ್ಮೇಶ್ವರದ ಬಸ್ತಿ ಬಣ.

    ಮುಂಡರಗಿಯ ಎ.ಬಿ. ನಗರ, ಯಕ್ಲಾಸಪುರ, ಕಲಕೇರಿ, ಡಂಬಳ, ಹಮ್ಮಿಗಿ, ಬರದೂರ, ಬೂದಿಹಾಳ, ಗಜೇಂದ್ರಗಡದ ಹಿರೇಮನಿ ಪ್ಲಾಟ್​ನಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ಗದಗ- ಬೆಟಗೇರಿಯ 84 ವರ್ಷದ ಪರುಷ ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts