More

    ಗದಗ ಜಿಲ್ಲೆಯಲ್ಲಿ ಗಾಂಜಾ ಘಾಟು ಜೋರು

    ಗದಗ: ಗದಗ-ಬೆಟಗೇರಿ ಸೇರಿ ಜಿಲ್ಲೆಯಲ್ಲಿ ಗಾಂಜಾ ಘಾಟು ಜೋರಾಗಿದೆ. ಯುವಕರು ದುಶ್ಚಟಕ್ಕೆ ದಾಸರಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

    ಇತ್ತೀಚೆಗೆ ಪೊಲೀಸ್ ಅಧಿಕಾರಿಗಳು ಗಾಂಜಾ ಮಾರಾಟ ಮಾಡುವವರ ಮೇಲೆ ದಾಳಿ ಮಾಡಿ ದಂಧೆಕೋರರ ಹೆಡೆಮುರಿ ಕಟ್ಟುತ್ತಿದ್ದಾರೆ. ಗದಗ ಬೆಟಗೇರಿ ಅವಳಿ ನಗರದಲ್ಲಿ ಗಾಂಜಾ ಮಾಫಿಯಾ ಎಗ್ಗಿಲ್ಲದೆ ಸಾಗಿದ್ದು ಇದರ ಕರಾಳಹಸ್ತ ಶಾಲಾ ಕಾಲೇಜ್ ಆವರಣಕ್ಕೂ ಚಾಚಿದೆ. ಅಭ್ಯಾಸ ಮಾಡಲು ಸ್ನೇಹಿತರ ರೂಂ, ಮನೆ ಮತ್ತಿತರ ಕಡೆಗೆ ತೆರಳುತ್ತೇನೆಂದು ಹೇಳಿ ಹೋಗುವ ಮಕ್ಕಳು ದುಶ್ಚಟಗಳ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ.

    ಮೆಡಿಕಲ್, ಇಂಜಿನಿಯರಿಂಗ್, ಡಿಪ್ಲೊಮಾ, ಐಟಿಐ, ಬಿಎಡ್, ಪದವಿ ಹಾಗೂ ಪದವಿ ಪೂರ್ವ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜ್​ಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ ಯುವಕರು ಗಾಂಜಾ ಚಟಕ್ಕೆ ಅಂಟಿಕೊಳ್ಳುತ್ತಿರುವುದು ಪಾಲಕರಲ್ಲಿ ಆತಂಕ ಮೂಡಿಸಿದೆ.

    ಗಾಂಜಾ ಸ್ಪಾಟ್​ಗಳು: ರಾಜೀವಗಾಂಧಿ ನಗರದ ಬಳಿ ಇರುವ ಹೊಸ ಹುಡ್ಕೋ ಹಿಂಭಾಗ, ಭೀಷ್ಮ ಕೆರೆ ಸುತ್ತಮುತ್ತ, ಸೆಟಲ್​ವೆುಂಟ್, ಡಿಸಿ ಆಫೀಸ್ ಹಿಂಭಾಗದಲ್ಲಿರುವ ಹುಡ್ಕೋ ಕಾಲನಿ, ಜಿಮ್್ಸ ಸುತ್ತಮುತ್ತ, ಕಳಸಾಪುರ ರಸ್ತೆ, ಬಳಗಾನೂರ ರಸ್ತೆ, ಹಾತಲಗೇರಿ ರಸ್ತೆ, ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ, ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಮತ್ತು ಅದರ ಸುತ್ತಮುತ್ತ, ಹೊರವಲಯದಲ್ಲಿರುವ ರೈಲ್ವೆ ಸೇತುವೆ ಕೆಳಭಾಗ ಮತ್ತಿತರ ಸ್ಥಳಗಳು ಗಾಂಜಾ

    ಸೇದುವ ಸ್ಪಾಟ್​ಗಳಾಗಿವೆ.

    ಬಾಂಗ್ ಶೂಟ್ ನಿರಂತರ!: ಗಾಂಜಾ ಸೇದುವ ಚಟಕ್ಕೆ ದಾಸರಾಗಿರುವ ವಿದ್ಯಾರ್ಥಿಗಳು ಮತ್ತು ಹದಿಹರೆಯದವರು ನಗರದ ಹೊರವಲಯದ ನಿರ್ಜನ ಪ್ರದೇಶಕ್ಕೆ ತೆರಳಿ ಚಿಲುಮೆ ಮೂಲಕ ಬಾಂಗ್​ಶೂಟ್ ಹೊಡೆಯುತ್ತಾರೆ. ಪ್ಲಾಸ್ಟಿಕ್ ಬಾಟಲ್ ತೆಗೆದುಕೊಂಡು ಅದಕ್ಕೆ ಮೇಲೊಂದು, ಕೆಳಗೊಂದು ರಂಧ್ರ ಕೊರೆಯಲಾಗುತ್ತದೆ. ಕೆಳ ರಂಧ್ರಕ್ಕೆ ಗಾಂಜಾ ತುಂಬಿರುವ ಚಿಲುಮೆ ಸೇರಿಸಲಾಗುತ್ತದೆ. ರಂಧ್ರ ಹಾಕಿರುವ ಬಾಟಲ್​ಗೆ ನೀರು ತುಂಬಿಸಲಾಗುತ್ತದೆ. ಮೇಲಿನ ರಂಧ್ರವನ್ನು ಬೆರಳಿನಿಂದ ಮುಚ್ಚಿ ಚಿಲುಮೆ ಮೂಲಕ ನೀರಿನಲ್ಲಿ ಸೋಸಿ ಬಂದ ಗಾಂಜಾ ಹೊಗೆಯನ್ನು ಸೇವಿಸಲಾಗುತ್ತದೆ. ಇದಕ್ಕೆ ಬಾಂಗ್​ಶೂಟ್ ಎಂದು ಕರೆಯಲಾಗುತ್ತದೆ.

    ಖಾಕಿ ಪಡೆಯ ಕಣ್ಗಾವಲು: ಜಿಲ್ಲಾ ಪೊಲೀಸ್ ಇಲಾಖೆ ಗಾಂಜಾ ಮಾರಾಟ ದಂಧೆಗೆ ಕಡಿವಾಣ ಹಾಕಲು ಜಿಲ್ಲೆಯ ಐದು ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ಯಾಚರಣೆ ಮೂಲಕ 8 ಮಂದಿಯನ್ನು ಬಂಧಿಸಿ 1,11,900 ರೂ. ಮೌಲ್ಯದ 4 ಕೆಜಿ 509 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬೆಟಗೇರಿ ಠಾಣೆಯಲ್ಲಿ ಒಬ್ಬನನ್ನು ಬಂಧಿಸಿ 22200 ರೂ. ಮೌಲ್ಯದ 220 ಗ್ರಾಂ ಗಾಂಜಾ, ಗದಗ ಗ್ರಾಮೀಣ ಠಾಣೆಯಲ್ಲಿ 25700 ರೂ ಮೌಲ್ಯದ 257 ಗ್ರಾಂ, ಶಿರಹಟ್ಟಿ 23000 ರೂ. ಮೌಲ್ಯದ 230 ಗ್ರಾಂ, ಲಕ್ಷೆ್ಮೕಶ್ವರ ಠಾಣೆಯಲ್ಲಿ 36000 ರೂ. ಮೌಲ್ಯದ 3 ಕೆಜಿ 600 ಗ್ರಾಂ ಹಾಗೂ ಗಜೇಂದ್ರಗಡ ಠಾಣೆಯ 5 ಸಾವಿರ ರೂ. ಮೌಲ್ಯದ 202 ಗ್ರಾಂ ಗಾಂಜಾ ವನ್ನು ವಶಪಡಿಸಿಕೊಳ್ಳಲಾಗಿದೆ. ಬೆಟಗೇರಿ ಠಾಣೆ ವ್ಯಾಪ್ತಿಯಲ್ಲಿ ಬೆಟಗೇರಿ ಸೆಟಲ್ ಮೆಂಟ್ ನಿವಾಸಿ ಬಾಲಪ್ಪ ಹರಣಶಿಕಾರಿ, ಶಹರ ಠಾಣೆಯಲ್ಲಿ ಚಾಂದ್ ಸಾಬ ಕವಲೂರ, ಶಿರಹಟ್ಟಿ ಠಾಣೆಯಲ್ಲಿ ಮಹದೇವಕ್ಕ ದೇವಪ್ಪ ಕಂಬಳಿ, ದೇವಪ್ಪ ಪುಟ್ಟಪ್ಪ ಕಂಬಳಿ, ಗದಗ ಗ್ರಾಮೀಣ ಠಾಣೆಯಲ್ಲಿ ಗದಗ ಸೆಟಲ್ ಮೆಂಟ್ ನಿವಾಸಿ ಮೀನಾಕ್ಷಿ ಮುತಗಾರ, ಬಬಿತಾ ಬೇಲೇರಿ ಹಾಗೂ ಲಕ್ಷೆ್ಮೕಶ್ವರ ಠಾಣೆಯಲ್ಲಿ ದಯಾನಂದ ಬಸಾಪೂರ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts