More

    ಗದಗಿನ ಸ್ಮಶಾನ, ಬಿಲ್ವಪತ್ರಿಯ ತಾಣ

    ಗದಗ: ಲಿಂಗಾಯತ ಪ್ರಗತಿಶೀಲ ಸಂಘದಿಂದ ಹಿಂದು ರುದ್ರಭೂಮಿಯಲ್ಲಿ ಬಿಲ್ವಪತ್ರಿ ಸಸಿ ನೆಡುವ ಕಾರ್ಯ ಹಮ್ಮಿಕೊಂಡಿರುವ ಕಾರ್ಯ ಶ್ಲಾಘನೀಯ ಎಂದು ತೋಂಟದಾರ್ಯಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

    ನಗರದ ಹಿಂದು ರುದ್ರಭೂಮಿಗೆ ಭಾನುವಾರ ಭೇಟಿ ನೀಡಿ ಬಿಲ್ವಪತ್ರಿ ಸಸಿಗಳನ್ನು ನೆಟ್ಟು ಅವರು ಮಾತನಾಡಿದರು. ‘ಮಾನವ ಜನ್ಮದಲ್ಲಿ ಹುಟ್ಟು ಸಾವು ಸಹಜ ಕ್ರಿಯೆಗಳಾಗಿವೆ. ಜನನ ಮತ್ತು ಮರಣದ ಮಧ್ಯದಲ್ಲಿರುವ ಸಾರ್ಥಕತೆಯ ಬದುಕಿನ ಆಧಾರದ ಮೇಲೆ ಕರ್ಮಫಲ ಸಿಗಲಿದೆ. ಸಾವಿನ ನಂತರದ ಸ್ಥಾನವೇ ಮೋಕ್ಷವಾಗಿದೆ. ರುದ್ರಭೂಮಿಯಲ್ಲಿ 51 ಬಿಲ್ವ ಪತ್ರಿಯ ಸಸಿಗಳನ್ನು ನೆಟ್ಟು ಪವಿತ್ರ ತಾಣವನ್ನಾಗಿಸುತ್ತಿರುವುದು ಸಂತಸ ಮೂಡಿಸಿದೆ’ ಎಂದರು.

    ರಾಜ್ಯ ಸರ್ಕಾರದ ಸಹಾಯ, ಜನಪ್ರತಿನಿಧಿಗಳ ಮತ್ತು ಸದ್ಭಕ್ತರ ಸಹಕಾರ ಮತ್ತು ಪ್ರೋತ್ಸಾಹದಿಂದ ರುದ್ರಭೂಮಿ ಪ್ರಗತಿಯ ಹಾದಿಯಲ್ಲಿದೆ. ಭವಿಷ್ಯದಲ್ಲಿ ಇನ್ನೂ ಬೆಳವಣಿಗೆ ಕಾಣಬೇಕಾಗಿದೆ ಎಂದರು.

    ತೋಂಟದಾರ್ಯ ಮಠದ ಶವ ವಾಹನ ಸಮಿತಿಯ ಅಧ್ಯಕ್ಷ ಈಶಣ್ಣ ಮುನವಳ್ಳಿ, ಪ್ರಶಾಂತ ತಂಬ್ರಳ್ಳಿಮಠ, ಈರಣ್ಣ ಮುದಗಲ್ಲ ಮಾತನಾಡಿದರು. ಗಂಗಣ್ಣ ಕೋಟಿ, ಶಿವಯ್ಯ ನಾಲತ್ವಾಡಮಠ, ವಿ.ಎಚ್. ದೇಸಾಯಿಗೌಡರ, ಬಾಲಚಂದ್ರ ಭರಮಗೌಡರ, ಎ.ಎಸ್. ಚಟ್ಟಿ, ವೀರೇಶ ನಾರಾಯಣಪೂರ, ಪಿ.ವಿ. ಮರಿಗೌಡರ, ಕಳಕಪ್ಪ ರೇವಡಿ, ಶೇಖಪ್ಪ ಅರಳಿ, ಈರಣ್ಣ ಮುದಗಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts