More

    ಗಡಿ ಭಾಗದಲ್ಲಿ ಹೆಚ್ಚಿದ ಭದ್ರತೆ

    ನಗರ: ಜಿಲ್ಲೆಯ ಪ್ರಮುಖ ಗಡಿ ಮಾರ್ಗವಾದ ಹುಲಿಕಲ್ ಮತ್ತು ನಾಗೋಡಿಯಲ್ಲಿ ಒಳಬರುವ ವಾಹನಗಳ ತಪಾಸಣೆ ತೀವ್ರವಾಗಿದೆ.

    ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಗಡಿಭಾಗದಲ್ಲಿ ಭದ್ರತೆ ಮತ್ತು ತಪಾಸಣೆ ಕೈಗೊಳ್ಳಲಾಗಿದೆ. ವಾಹನ ದಟ್ಟಣೆ ಇರುವ ಹುಲಿಕಲ್​ನಲ್ಲಿ ತೀವ್ರ ನಿಗಾ ವಹಿಸಲಾಗಿತ್ತು. ಪಾಸಿಟಿವ್ ಕೇಸ್ ಪತ್ತೆಯಾದ ನಂತರ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.

    ಶಿವಮೊಗ್ಗ ಜಿಲ್ಲಾದ್ಯಂತ 17 ಚೆಕ್​ಪೋಸ್ಟ್​ಗಳಿದ್ದು ಅದರಲ್ಲಿ ಹೊಸನಗರ ತಾಲೂಕಿನ ನಗರ ಪೊಲೀಸ್​ಠಾಣಾ ವ್ಯಾಪ್ತಿಯ ಕೊಲ್ಲೂರು ಘಾಟ್ ಮಾರ್ಗ ಮತ್ತು ಹುಲಿಕಲ್ ಘಾಟ್ ಮಾರ್ಗದ ಚೆಕ್​ಪೋಸ್ಟ್​ನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಾಗುತ್ತಿದೆ.

    ಚೆಕ್​ಪೋಸ್ಟ್​ನಲ್ಲಿ ಓರ್ವ ಎಎಸ್​ಐ, ತಲಾ ಇಬ್ಬರು ಕಾನ್ಸ್​ಟೇಬಲ್, ಆರೋಗ್ಯ ಸಿಬ್ಬಂದಿ ಮತ್ತು ಹೋಂಗಾರ್ಡ್ಸ್ ನಿಯೋಜಿಸಲಾಗಿದೆ. ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ ಬರುವ ವಾಹನಗಳನ್ನು ಪಾಸ್ ಇದ್ದರೆ ಮಾತ್ರ ಒಳಬಿಡಲಾಗುತ್ತಿದೆ.

    ಕರೊನಾ ವಿರುದ್ಧದ ಹೋರಾಟದಲ್ಲಿ ತಾಲೂಕಿನ 2 ಪ್ರಮುಖ ಚೆಕ್​ಪೋಸ್ಟ್​ಗಳಾದ ಮಾಸ್ತಿಕಟ್ಟೆ -ಹುಲಿಕಲ್ ಮತ್ತು ನಾಗೋಡಿ ಚೆಕ್​ಪೋಸ್ಟ್​ಗಳಲ್ಲಿ ಸಿಬ್ಬಂದಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲೂ ಪಾಸಿಟಿವ್ ಬಂದಿರುವ ಕಾರಣ ತಪಾಸಣೆ ತೀವ್ರಗೊಳಿಸಲಾಗಿದೆ ಎಂದು ಸಿಪಿಐ ಗುರಣ್ಣ ಹೆಬ್ಬಾಳ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts