More

    ಗಡಿಭಾಗದ ಗ್ರಾಮಗಳಿಗೆ ಶಾಸಕಿ ಭೇಟಿ 

    ಕೆಜಿಎಫ್: ಳೆದ ಒಂದು ವಾರದಿಂದ ಆನೆ ದಾಳಿಯಿಂದ ನಾಶವಾಗಿರುವ ತಿರುಮಲಹಳ್ಳಿ, ಬ್ಯಾಟರಾಯನಹಳ್ಳಿ, ಲಕ್ಕನನಾಯಕನಹಳ್ಳಿ, ಘಟ್ಟಮಾದಮಂಗಲ ವ್ಯಾಪ್ತಿಯ ರಾಗಿ, ಭತ್ತ, ಟೊಮ್ಯಾಟೊ ಮೆಕ್ಕೆಜೊಳ ತೋಟಗಳಿಗೆ ಗುರುವಾರ ಶಾಸಕಿ ಎಂ.ರೂಪಕಲಾ ಭೇಟಿ ನೀಡಿ ರೈತರನ್ನು ಸಂತೈಸಿದರು.

    ಅರಣ್ಯ ಅಧಿಕಾರಿಗಳ ವಿರುದ್ಧ ರೈತರ ದೂರು: ತಾಲೂಕಿನಲ್ಲಿ ಬಿದ್ದಿರುವ ಮಳೆಯಿಂದ ಉತ್ತಮ ಫಸಲು ಬಂದಿದ್ದು ಕೊಯ್ಲು ಮಾಡುವ ಸಂದರ್ಭದಲ್ಲಿ ಆನೆಗಳು ಬಂದು ನಾಶಪಡಿಸಿವೆ. ಆದರೆ, ಇದುವರೆಗೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಂದಾಜು ಪಟ್ಟಿ ತಯಾರು ಮಾಡಲಿಲ್ಲ. ಗ್ರಾಮಗಳಿಗೆ ಆಗಮಿಸುವ ಅಧಿಕಾರಿಗಳು ಜೀಪ್‌ನಿಂದ ಕೆಳಗಿಳಿಯದೆ ಪಟಾಕಿ ಸಿಡಿಸಿ ಹೊರಟು ಬಿಡುತ್ತಾರೆ ಎಂದು ಅಧಿಕಾರಿಗಳ ವಿರುದ್ಧ ರೈತರು ದೂರಿದರು.

    ಅರಣ್ಯ ಅಧಿಕಾರಿಗಳ ತರಾಟೆ: ನಷ್ಟ ಪರಿಶೀಲನೆ ನಡೆಸಲು ಗ್ರಾಮಗಳಿಗೆ ಭೇಟಿ 1 ಗಂಟೆ ಕಳೆದರೂ ಸ್ಥಳಕ್ಕೆ ಆಗಮಿಸಲು ಅರಣ್ಯ ಅಧಿಕಾರಿ ವೇಣು ವಿಳಂಬ ಮಾಡಿದ್ದರಿಂದ ನಿಮಗೆ ರೈತರ ಬಗ್ಗೆ ಕಾಳಜಿ ಇಲ್ಲದಿರುವುದು ಎದ್ದು ಕಾಣುತ್ತದೆ. ಕರೊನಾ ನಡುವೆಯೂ ರೈತರು ಅಲ್ಪ-ಸ್ವಲ್ಪ ಜಮೀನಿನಲ್ಲಿ ಉತ್ತಮ ಬೆಳೆ ಬೆಳೆದಿದ್ದರು. ಆದರೆ ಆನೆ ದಾಳಿಯಿಂದ ಲಕ್ಷಾಂತರ ರೂ. ನಷ್ಟವಾಗಿದೆ. ನಷ್ಟದ ಅಂದಾಜು ಪಟ್ಟಿ ತಯಾರು ಮಾಡಿಲ್ಲವೇಕೆ ಎಂದು ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    ತಾಲೂಕು ಪಂಚಾಯಿತಿ ಅಧ್ಯಕ್ಷೆ ಸುನಂದಮ್ಮರಾಮಕೃಷ್ಣರೆಡ್ಡಿ, ತಹಸೀಲ್ದಾರ್ ರಮೇಶ್, ನಾರಾಯಣಮೂರ್ತಿ, ಮುನಿಕೃಷ್ಣಪ್ಪ, ಸದಸ್ಯರಾದ ಬಾಬು, ಅಲ್ಲಿಕಲ್ಲು ಬಾಬುರೆಡ್ಡಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts