More

    ಗಂಡಸಿ ಹ್ಯಾಂಡ್‌ಪೋಸ್ಟ್‌ನಲ್ಲಿ ಭವ್ಯ ಸ್ವಾಗತ

    ಅರಸೀಕೆರೆ: ಜೆಡಿಎಸ್ ವತಿಯಿಂದ ಆಯೋಜಿಸಿದ್ದ ಪಂಚರತ್ನ ರಥಯಾತ್ರೆಗೆ ಗಂಡಸಿ ಹ್ಯಾಂಡ್‌ಪೋಸ್ಟ್ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಅಭೂತಪೂರ್ವ ಸ್ವಾಗತ ಕೋರಲಾಯಿತು.
    ತಂಡೋಪತಂಡವಾಗಿ ಸೇರಿದ್ದ ಜನಸ್ತೋಮ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿ ಪಕ್ಷದ ಮುಖಂಡರ ಪರ ಜಯಘೋಷ ಮೊಳಗಿಸುವ ಮೂಲಕ ಜೆಡಿಎಸ್‌ಗೆ ಜೈ ಎನ್ನುವ ಸಂದೇಶ ರವಾನಿಸಿದರು. ಅಭಿಮಾನಿಗಳ ಪುಳಕ ಕಂಡ ಎಚ್‌ಡಿಕೆ ಕ್ಷಣಕಾಲ ಭಾವುಕರಾಗಿದ್ದರು. ನಾಗರಹಳ್ಳಿ ಗ್ರಾಮಸ್ಥರು ಪ್ರೀತಿಪೂರ್ವಕವಾಗಿ ಜೋಡೆತ್ತುಗಳನ್ನು ಉಡುಗೊರೆಯಾಗಿ ನೀಡಿದರು.
    ನೆರೆದಿದ್ದ ಅಪಾರ ಜನಸ್ತೋಮ ಉದ್ದೇಶಿಸಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಅನ್ನದಾತನ ಮಕ್ಕಳು ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಲು ಎಲ್ಲ ರೀತಿಯ ಅವಕಾಶ ಮಾಡಿಕೊಡುವ ಆಶಾಭಾವನೆ ಹೊಂದಿದ್ದು ಪಕ್ಷ ನಿರ್ಧರಿಸುವ ಅಭ್ಯರ್ಥಿಗೆ ಮತ ಹಾಕುವ ಮೂಲಕ ಗೆಲುವಿಗೆ ಮುನ್ನುಡಿ ಬರೆಯಬೇಕು ಎಂದು ಮನವಿ ಮಾಡಿದರು.
    ಜಿಪಂ ಮಾಜಿ ಸದಸ್ಯ ಬಾಣಾವರ ಅಶೋಕ್, ತಾಪಂ ಮಾಜಿ ಸದಸ್ಯ ಹೊಸೂರು ಗಂಗಾಧರ್, ಮುಖಂಡರಾದ ಕೇಶವಮೂರ್ತಿ, ಸಹಕಾರ ಮಹಾಮಂಡಳಾಧ್ಯಕ್ಷ ಪುಟ್ಟಸ್ವಾಮಿ, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಚಂದ್ರಶೇಖರ್ ಇದ್ದರು. ಗಂಡಸಿ ಹಾಗೂ ಮುದುಡಿ ಗ್ರಾಮದಲ್ಲಿಯೂ ರಥಯಾತ್ರೆಗೆ ಭವ್ಯ ಸ್ವಾಗತ ದೊರೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts