More

    ಗಂಟಲ ದ್ರವ ಸಂಗ್ರಹ ಸಂಚಾರಿ ಕೇಂದ್ರಕ್ಕೆ ಚಾಲನೆ

    ಧಾರವಾಡ: ಕರೊನಾ ನಿಯಂತ್ರಣಕ್ಕಾಗಿ ಗಂಟಲ ದ್ರವ ಮಾದರಿಗಳನ್ನು ಹೆಚ್ಚು ಸಂಖ್ಯೆಯಲ್ಲಿ ಪರೀಕ್ಷೆಗೆ ಒಳಪಡಿಸುವ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲಾಧಿಕಾರಿ ದೀಪಾ ಚೋಳನ್ ಇಚ್ಛಾಶಕ್ತಿಯೊಂದಿಗೆ ರೂಪಿಸಿರುವ ಗಂಟಲ ದ್ರವ ಸಂಗ್ರಹಣೆ ಸಂಚಾರಿ ಕೇಂದ್ರ (ಮೊಬೈಲ್ ಸ್ವಾಬ್ ಕಲೆಕ್ಷನ್ ಸೆಂಟರ್)ಗೆ ಸಚಿವ ಜಗದೀಶ ಶೆಟ್ಟರ್ ಶುಕ್ರವಾರ ಚಾಲನೆ ನೀಡಿದರು.

    ಕೇಂದ್ರದ ಕಾರ್ಯ ವಿಧಾನ, ಮಾದರಿ ಸಂಗ್ರಹಕ್ಕೆ ಅನುಸರಿಸುವ ಪದ್ಧತಿಗಳು, ಆರೋಗ್ಯ ಮುಂಜಾಗ್ರತೆ ಕ್ರಮಗಳನ್ನು ಸಚಿವರು ಪರಿಶೀಲಿಸಿದರು.

    ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಸಿ.ಎಂ. ನಿಂಬಣ್ಣವರ, ಶಂಕರ ಪಾಟೀಲ ಮುನೇನಕೊಪ್ಪ, ಪ್ರಸಾದ ಅಬ್ಬಯ್ಯ, ವಿ.ಪ. ಸದಸ್ಯರಾದ ಪ್ರದೀಪ ಶೆಟ್ಟರ್, ಶ್ರೀನಿವಾಸ ಮಾನೆ, ಎಸ್.ವಿ. ಸಂಕನೂರ, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಪಂ ಸಿಇಒ ಡಾ. ಬಿ.ಸಿ. ಸತೀಶ, ಡಿಎಚ್​ಒ ಡಾ. ಯಶವಂತ ಮದೀನಕರ, ಜಿಲ್ಲಾ ಆರ್​ಸಿಎಚ್ ಅಧಿಕಾರಿ ಡಾ. ಎಸ್.ಎಂ. ಹೊನಕೇರಿ, ಐಎಂಎ ಅಧ್ಯಕ್ಷ ಡಾ. ಸಂದೀಪ ಪ್ರಭು, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts