More

    ಖಾಂಡ್ಯಾಳಿಯಲ್ಲಿ ಧರೆ ಕುಸಿತ

    ಕಾರವಾರ: ಕಾಳಿ ನದಿ ತಟದಲ್ಲೇ ಇರುವ ಕೆರವಡಿ ಗ್ರಾಮ ಖಾಂಡ್ಯಾಳಿ ಮಜರೆಯಲ್ಲಿ ಧರೆ ಕುಸಿಯುತ್ತಿದ್ದು, ಗುಡ್ಡದ ಮೇಲಿರುವ ಕುಟುಂಬವೊಂದು ಆತಂಕದಲ್ಲಿ ದಿನ ಕಳೆಯುವಂತಾಗಿದೆ.

    ಸುರೇಶ ರಾಮಾ ಪಾಗಿ ಅವರ ಕುಟುಂಬ ಕಳೆದ 34 ವರ್ಷದಿಂದ ನದಿಯ ಪಕ್ಕದ ಸ್ವಂತ 2 ಗುಂಟೆ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸವಿದೆ. ಆದರೆ, ಕಳೆದ ವರ್ಷ ಕಾಳಿ ನದಿ ಉಕ್ಕಿ ಹರಿದಿದ್ದರಿಂದ ಹಾಗೂ ಕಳೆದ ಜುಲೈ 9 ರಂದು ಕಾಳಿ ನದಿ ಉಕ್ಕಿ ಬಂದಾಗಿನಿಂದ ಗುಡ್ಡ ಕುಸಿಯಲಾರಂಬಿಸಿದೆ. ಮನೆಯ ಎದುರಿನ ನೆಟ್ಟ ತೆಂಗಿನ ಮರಗಳು ಈಗಾಗಲೇ ಕಿತ್ತು ಬಿದ್ದಿವೆ. ದಿನದಿಂದ ಯಾವುದೇ ಕ್ಷಣದಲ್ಲೂ ಮನೆಯವರೆಗೂ ಬಂದು ಮನೆಯೂ ಕುಸಿಯುವ ಪರಿಸ್ಥಿತಿ ಇದೆ.

    ಕುಟುಂಬ ಈಗಾಗಲೇ ಗ್ರಾಪಂಗೆ ಅರ್ಜಿ ನೀಡಿದ್ದು, ಗ್ರಾಪಂ ಪಿಡಿಒ ಹಾಗೂ ನೋಡಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಶಾಲೆಯ ಕೋಣೆಯೊಂದನ್ನು ಕುಟುಂಬದ ವಾಸ್ತವ್ಯಕ್ಕೆ ಮಾಡಿಕೊಟ್ಟಿದ್ದಾರೆ. ಅಗತ್ಯ ಇದ್ದಲ್ಲಿ ಊಟದ ವ್ಯವಸ್ಥೆಯನ್ನೂ ಮಾಡುವ ಭರವಸೆ ನೀಡಿದ್ದಾರೆ. ಆದರೆ, ಕುಟುಂಬ ಮನೆ ಬಿಟ್ಟು ಎರಡು ಕಿಮೀ ದೂರದ ಶಾಲೆಗೆ ಹೋಗಬೇಕಿದೆ. ಇದರಿಂದ ಮನೆಯ ಹಿಂದಿನ ಅರಣ್ಯ ಜಾಗದಲ್ಲಿ ಸುರಕ್ಷಿತವಾಗಿ ಮನೆ ಕಟ್ಟಿಕೊಳ್ಳಲು ಅವಕಾಶ ನೀಡಬೇಕು ಎಂಬುದು ಕುಟುಂಬದ ಆಗ್ರಹ.

    ಸುರೇಶ ರಾಮಾ ಪಾಗಿ ಅವರ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದು, ಅವರಿಗೆ ಇರಲು ಸರ್ಕಾರಿ ಕಟ್ಟಡದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇನ್ನು ಅರಣ್ಯ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಅವಕಾಶ ನೀಡಬೇಕು ಎಂಬ ಬೇಡಿಕೆ ಈಡೇರಿಸುವ ಅಧಿಕಾರ ನಮಗಿಲ್ಲದ ಕಾರಣ ತಹಸೀಲ್ದಾರರಿಗೆ ಪತ್ರ ಬರೆದು ತಿಳಿಸಲಾಗಿದೆ. | ಪ್ರವೀಣಾ ಎಂ.ಗವಾಸ್ ಕೆರವಡಿ ಗ್ರಾಪಂ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts