More

    ಕ್ಷೇತ್ರದ ಅಭಿವೃದ್ಧಿ ಜವಾಬ್ದಾರಿ ನಿರ್ವಹಿಸಿ

    ಹಿರೇಕೆರೂರ: ರಾಜ್ಯ ಸರ್ಕಾರ ಸರ್ವಜ್ಞ ಪ್ರಾಧಿಕಾರಕ್ಕೆ ಸದಸ್ಯರನ್ನು ನೇಮಕ ಮಾಡಿದ್ದು, ಈ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಲು ಸರ್ವಜ್ಞ ಪ್ರಾಧಿಕಾರ ಸದಸ್ಯರು ಅತ್ಯಂತ ಜವಬ್ದಾರಿಯಿಂದ ಕಾರ್ಯಪ್ರವೃತ್ತರಾಗಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

    ಪಟ್ಟಣದ ಶಾಂತಿನಿಕೇತನದ ರಾಷ್ಟ್ರಕವಿ ಕುವೆಂಪು ಸಭಾಂಗಣದಲ್ಲಿ ಸರ್ವಜ್ಞ ಸ್ಮಾರಕ ಸಮಿತಿ ವತಿಯಿಂದ ಮಂಗಳವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

    ಸರ್ವಜ್ಞ ಪ್ರಾಧಿಕಾರಕ್ಕೆ ಸರ್ಕಾರ ಸದಸ್ಯರನ್ನು ನಿಯೋಜನೆಗೊಳಿಸಿದ್ದು, ಬಾಡ, ಕಾಗಿನೆಲೆಯಲ್ಲಿ ಅಭಿವೃದ್ಧಿಪಡಿಸಿದ ಮಾದರಿಯಲ್ಲಿ ತಾಲೂಕಿನ ಅಬಲೂರು, ಮಾಸೂರು ಹಾಗೂ ಹಿರೇಕೆರೂರು ಅಭಿವೃದ್ಧಿಯಾಗಬೇಕು. ಪಟ್ಟಣದ ಶ್ರೀ ದುರ್ಗಾದೇವಿ ಬೃಹತ್ ಕೆರೆಯ ಮಧ್ಯಭಾಗದಲ್ಲಿ ಸುಮಾರು ನೂರು ಅಡಿ ಎತ್ತರದ ಸರ್ವಜ್ಞ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡಲಾಗುವುದು ಎಂದರು.

    ಸರ್ವಜ್ಞ ಸ್ಮಾರಕ ಸಮಿತಿ ಉಪಾಧ್ಯಕ್ಷ ಲಿಂಗರಾಜ ಚಪ್ಪರದಳ್ಳಿ, ಸರ್ವಜ್ಞ ಪ್ರಾಧಿಕಾರ ಸದಸ್ಯರಾದ ಹ.ಮು.ತಳವಾರ, ಎಮ್​ಹೆಚ್.ಹರವಿಶೆಟ್ಟರ, ನಾಗರಾಜ ಕುರುವತ್ತೇರ, ಶಂಕರಪ್ಪ ಗೌಡ್ರ, ನಾಗರಾಜ ಹಿರೇಮಠ, ಮೃತ್ಯುಂಜಯ ಕೆಂಬಿ, ಎಸ್.ಎಸ್.ಪಾಟೀಲ್, ಮುಖಂಡರಾದ ಎಮ್​ವಿ.ಹೊಂಬರಡಿ, ಯು.ಎಸ್.ಕಳಗೊಂಡದ, ರವಿಶಂಕರ ಬಾಳಿಕಾಯಿ, ಅಶೋಕ ಜಾಡಬಂದಿ, ಎಸ್.ವೀರಭದ್ರಯ್ಯ ಇದ್ದರು.ಸರ್ವಜ್ಞ ಸ್ಮಾರಕ ಸಮೀತಿ ಗೌರವ ಕಾರ್ಯದರ್ಶಿ ಡಾ.ಎಸ್.ಬಿ.ಚನ್ನಗೌಡರ, ಉಪನ್ಯಾಸಕಿ ರೂಪಾ ಚೌಡಣ್ಣನವರ, ಪತ್ರಕರ್ತ ನಾಗರಾಜ ಕುರುವತ್ತೇರ ನಿರ್ವಹಿಸಿದರು.

    ಬೆಳೆ ಸಮೀಕ್ಷೆ ಉತ್ಸವ
    ಮುಂಬರುವ ದಿನಗಳಲ್ಲಿ ಬೆಳೆ ಸಮೀಕ್ಷೆ ಉತ್ಸವ ಪ್ರಾರಂಭಿಸಲಾಗುವುದು. ಆ ಮೂಲಕ ರೈತರು ತಾವು ಬಿತ್ತಿದ ಹೊಲಗದ್ದೆಗಳಲ್ಲಿ ನಿಂತು ನಿಮ್ಮ ಫೋಟೊ ಹಾಗೂ ಬೆಳೆ ಫೋಟೊ ಅಪ್ಲೋಡ್ ಮಾಡುವ ಮೂಲಕ ಬೆಳೆ ವಿಮೆಯನ್ನು ಪಡೆಯಲು ಸಹಕಾರಿಯಾಗುತ್ತದೆ ಅಷ್ಟೇ ಅಲ್ಲದೆ ಸ್ವಾಭಿಮಾನಿ ರೈತರ ಸುವರ್ಣ ಅವಕಾಶ ಯೋಜನೆಯನ್ನು ಜಾರಿಗೆ ತರಲಾಗುವುದು ರೈತರು ಬಹುಬೆಳೆ ಬೆಳೆ ಪದ್ಧತಿ ಅಳವಡಿಸಿಕೊಳ್ಳ ಬೇಕು ಎಂದು ಸಚಿವ ಬಿ.ಸಿ.ಪಾಟೀಲ ಸೂಚಿಸಿದರು.

    ಯೂರಿಯಾ ಗೊಬ್ಬರದ ಕೊರತೆ ಇಲ್ಲ
    ಹಾವೇರಿ ಜಿಲ್ಲೆಯಲ್ಲಿ ಇದುವರೆಗೂ 46,339 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರವನ್ನು ರೈತರಿಗೆ ವಿತರಿಸಲಾಗಿದೆ ಹೆಚ್ಚಿನ ರೀತಿಯಲ್ಲಿ ಯೂರಿಯಾ ಗೊಬ್ಬರವನ್ನು ಬೆಳೆಗಳಿಗೆ ನೀಡುವುದರಿಂದ ಭೂಮಿ ವಿಷವಾಗುತ್ತಿದೆ ಎಂದು ಎಚ್ಚರಿಸುವ ಮೂಲಕ ಒಂದು ಬಾರಿ 1 ಎಕರೆಗೆ 43 ಕೆ.ಜಿ ಯೂರಿಯಾ ಗೊಬ್ಬರ ನೀಡುವಂತೆ ರೈತರಿಗೆ ಪಾಟೀಲ ಮನವಿ ಮಾಡಿದರು.

    ಕೃಷಿ ಸಚಿವ ಬಿ.ಸಿ.ಪಾಟೀಲರ ಸತತ ಪ್ರಯತ್ನ ಹಾಗೂ ಒತ್ತಡದ ಪ್ರಯತ್ನದ ಫಲವಾಗಿ, ಸರ್ವಜ್ಞ ಪ್ರಾಧಿಕಾರ ಸಂಪೂರ್ಣ ರಚನೆಯಾಗಿದೆ 8 ಜನರನ್ನು ಪ್ರಾಧಿಕಾರಕ್ಕೆ ಸದಸ್ಯರನ್ನಾಗಿ ನೇಮಕ ಮಾಡಲಾಗಿದ್ದು, ಪಟ್ಟಣದಲ್ಲಿ ಸರ್ವಜ್ಞ ಭವನ ನಿರ್ವಿುಸುವುದಕ್ಕೆ ಮುಂದಾಗಬೇಕು.
    ಎಸ್.ಎಸ್.ಪಾಟೀಲ ಸರ್ವಜ್ಞ ಸ್ಮಾರಕ ಸಮಿತಿ ಅಧ್ಯಕ್ಷ, ಸರ್ವಜ್ಞ ಪ್ರಾಧಿಕಾರದ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts