More

    ಕ್ಷಮೆ ಇರಲಿ, ಲಾಕ್ ಡೌನ್ ಅನಿವಾರ್ಯ

    ಗದಗ: ಕರೊನಾ ವೈರಸ್ ಹರಡುವಿಕೆ ತಡೆಗಟ್ಟುವ ಸಲುವಾಗಿ ಹೇರಲಾಗಿರುವ ಮೊದಲ ಹಂತದ ಲಾಕ್ ಡೌನ್​ಗಿಂತ ಎರಡನೇ ಹಂತದ ಲಾಕ್ ಡೌನ್ ಕಠಿಣವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

    ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರೊನಾ ವೈರಸ್ ತಡೆಗಟ್ಟಲು ವ್ಯಾಪಾರಸ್ಥರು, ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

    ಸಾರ್ವಜನಿಕರು ಜೀವ ಹಾಗೂ ಜೀವನಕ್ಕಾಗಿ ಶಿಸ್ತು ಕಾಪಾಡಿಕೊಳ್ಳಬೇಕು ಎಂದು ಹೇಳಿದರು. ದೇಶ ಸಂಕಷ್ಟದಲ್ಲಿರುವಾಗ ಕಿರಾಣಿ, ದಿನಸಿಗಾಗಿ ಮುಗಿಬೀಳುವುದು ಸರಿಯಲ್ಲ. ದಯವಿಟ್ಟು ಕ್ಷಮೆ ಇರಲಿ, 2ನೇ ಹಂತದ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಎಂದರು.

    ಸಮಾಜದ ರಕ್ಷಣೆಗಾಗಿ ದುಡಿಯುತ್ತಿರುವ ವೈದ್ಯರು, ಪೊಲೀಸರು, ಇತರೆ ಸಿಬ್ಬಂದಿ ಕಾರ್ಯಕ್ಕೆ ಬೆಲೆ ಕೊಡಬೇಕು. ಇನ್ನು 15 ದಿನ ಮನೆಯಲ್ಲಿ ಇರಲು ಆಗಲ್ಲ ಅಂದರೆ ಹೇಗೆ? ಎಲ್ಲ ಕೆಲಸವನ್ನು ಡಿಸಿ, ಎಸ್ಪಿ, ಮಾಡಲಿ ಅಂದರೆ ಆಗುವ ಮಾತಲ್ಲ. ಮುಂದಿನ ಲಾಕ್ ಡೌನ್ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

    ಡಿಸಿ, ಎಸ್ಪಿ, ಅವರಿಗೆ ಕಠಿಣ ಕ್ರಮ ತೆಗೆದುಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಅದಕ್ಕಾಗಿ ಎಲ್ಲರೂ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

    ದೇಶಕ್ಕೊಂದು ಚಿಂತೆ ಹತ್ತಿದರೆ ಇಲ್ಲಿನ ಜನರಿಗೆ ಏನು ತಿನ್ನಬೇಕು ಅನ್ನುವ ಚಿಂತೆ ಶುರುವಾಗಿದೆ. ದಿನಸಿ, ನಾನ್​ವೆಜ್​ಗಾಗಿ ಜನರು ಮುಗಿಬೀಳುವುದನ್ನು ನೋಡಿದರೆ ಇವರಿಗೆ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಬೆಳ್ಳಂಬೆಳಗ್ಗೆ ಟಿವಿ ಆನ್ ಮಾಡಿದರೆ ಗದಗನಲ್ಲಿ ಮಾಂಸಕ್ಕಾಗಿ ಜನರು ಮುಗಿಬಿದ್ದಿರುವ ಸುದ್ದಿ ಪ್ರಸಾರ ಆಗುತ್ತಿರುತ್ತದೆ. ಇಂತಹ ಸಮಯದಲ್ಲಿ ಜನರು ಸ್ವಯಂ ನಿರ್ಬಂಧ ಹೇರಿಕೊಳ್ಳಬೇಕು ಎಂದು ಹೇಳಿದರು.

    ಜಿಲ್ಲೆಯಲ್ಲಿ ಲಾಕ್ ಡೌನ್ ಬಿಗಿಗೊಳಿಸಿ ಅಂತ ಜಿಲ್ಲಾಧಿಕಾರಿ, ಎಸ್ಪಿಗೆ ಸೂಚನೆ ನೀಡಿದ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು, ಯಾವುದೇ ಲಾಬಿಗೆ ಮಣಿಯಬೇಡಿ ಎಂದರು. ವ್ಯಾಪಾರಸ್ಥರ ಜತೆ ಸಭೆ ಮಾಡಿ ಕಟ್ಟುನಿಟ್ಟಿನ ಲಾಕ್ ಡೌನ್ ಮಾಡಬೇಕು ಎಂದು ಜಿಲ್ಲಾಡಳಿತಕ್ಕೆ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts