More

    ಕ್ವಾರಂಟೈನ್ ಪಾಲಿಸದಿದ್ದರೆ ಮನೆ ಸೀಲ್​ಡೌನ್

    ಕಾರವಾರ: ಹೊರ ಊರುಗಳಿಂದ ಬಂದವರು ಹೋಂ ಕ್ವಾರಂಟೈನ್ ನಿಯಮಗಳನ್ನು ಸರಿಯಾಗಿ ಪಾಲಿಸದಿದ್ದರೆ ಮನೆಯನ್ನೇ ಸೀಲ್​ಡೌನ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಎಚ್ಚರಿಸಿದ್ದಾರೆ.

    ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಅವರು ಪತ್ರಕರ್ತರ ಜತೆ ಸಂವಾದ ನಡೆಸಿದರು. ಹೊರ ಊರುಗಳಿಂದ ಜಿಲ್ಲೆಗೆ ಬರುವವರನ್ನು ನಾವು ಬೇಡ ಎನ್ನಲು ಸಾಧ್ಯವಿಲ್ಲ. ನಮಗೂ ಸಾಕಷ್ಟು ಬೇರೆ ಕಾರ್ಯಗಳಿವೆ. ಅವರನ್ನು ಕಾಯಲು ಪ್ರತಿ ಮನೆಗೊಬ್ಬ ಪೊಲೀಸರನ್ನು ನೇಮಿಸಲು ಸಾಧ್ಯವಿಲ್ಲ. ಹೊರ ಊರುಗಳಿಂದ ಬಂದ ನಂತರ ಕರೊನಾ ಲಕ್ಷಣಗಳಿದ್ದರೆ ಮಾಹಿತಿ ನೀಡಬೇಕು. ಹೊರಗಿನಿಂದ ಬಂದವರು ಮಾತ್ರವಲ್ಲ ಅವರ ಮನೆಯವರು ಹೊರಗಡೆ ಓಡಾಡಬಾರದು. ಆರೋಗ್ಯ ಸಮೀಕ್ಷೆಯ ವೇಳೆ ಸಮರ್ಪಕವಾಗಿ ಮಾಹಿತಿ ನೀಡಬೇಕು. ಆಗ ಮಾತ್ರ ಜಿಲ್ಲೆಯಲ್ಲಿ ಕರೊನಾ ನಿಯಂತ್ರಣ ಸಾಧ್ಯ ಎಂದು ಹೇಳಿದ್ದಾರೆ.

    ಸಮರ್ಪಕವಾಗಿ ಮಾಹಿತಿ ನೀಡದೇ ಕರೊನಾ ಹರಡುವಿಕೆಗೆ ಕಾರಣರಾದಲ್ಲಿ ಆ ಮನೆ ಹಾಗೂ ಸುತ್ತಲಿನ ಪ್ರದೇಶವನ್ನು ಸೀಲ್​ಡೌನ್ ಮಾಡಬೇಕಾಗುತ್ತದೆ. ಇದರಿಂದ ಮನೆಯವರಿಗೆ ಮಾತ್ರವಲ್ಲ ಸುತ್ತಮುತ್ತಲಿನವರಿಗೂ ತೊಂದರೆಯಾಗಲಿದೆ. ಇದರಿಂದ ಪ್ರತಿಯೊಬ್ಬ ನಾಗರಿಕರಿಗೂ ಈ ಬಗ್ಗೆ ಕಾಳಜಿ ಇರಲೇಬೇಕು. ಹಾಗೆಂದು ಅಕ್ಕಪಕ್ಕದಲ್ಲಿ ಯಾರಾದರೂ ಬರುತ್ತಾರೆ ಎಂದರೆ ಬಹಿಷ್ಕಾರ ಹಾಕುವುದು. ಪ್ರತಿಭಟನೆ ನಡೆಸುವುದೂ ಸೂಕ್ತವಲ್ಲ ಎಂದರು. ಎಸ್​ಪಿ ಶಿವಪ್ರಕಾಶ ದೇವರಾಜು ಮಾತನಾಡಿ, ಜಿಲ್ಲೆಯಲ್ಲಿ 22 ಕಂಟೇನ್ಮೆಂಟ್ ಜೋನ್​ಗಳಿವೆ. ಅದರಲ್ಲಿ 14 ಕ್ವಾರಂಟೈನ್ ಕೇಂದ್ರಗಳೇ ಆಗಿದ್ದು, ಐದು ಗ್ರಾಮಗಳಿವೆ. ಉಳಿದವು ನಗರ ಪ್ರದೇಶದ ವಿವಿಧ ಕಾಲನಿಗಳಾಗಿವೆ ಎಂದು ಮಾಹಿತಿ ನೀಡಿದರು.

    ರೋಗ ಲಕ್ಷಣ ಇದ್ದರಷ್ಟೇ ಗಂಟಲ ಮಾದರಿ ಸಂಗ್ರಹ
    ಕಾರವಾರ:
    ಕರೊನಾ ಪ್ರಯೋಗಾಲಯ ಪರೀಕ್ಷೆಯ ಕುರಿತು ಸರ್ಕಾರದಿಂದ ಪರಿಷ್ಕೃತ ಶಿಷ್ಟಾಚಾರದ ನಿಯಮದ ಸುತ್ತೋಲೆ ಬಂದಿದೆ. ರೋಗ ಲಕ್ಷಣ ಇರುವವರ ಗಂಟಲ ದ್ರವದ ಮಾದರಿ ಮಾತ್ರ ತೆಗೆಯಲಾಗುತ್ತಿದೆ ಎಂದು ಡಿಸಿ ಡಾ.ಹರೀಶ ಕುಮಾರ ತಿಳಿಸಿದ್ದಾರೆ. ರೋಗ ಲಕ್ಷಣ ರಹಿತರು ಹೆಚ್ಚು ಜನರಿಗೆ ರೋಗ ಹರಡುವುದಿಲ್ಲ ಎನ್ನುವುದು ಅನುಭವದ ಮೂಲಕ ತಿಳಿದು ಬಂದಿದೆ. ಸದ್ಯ ಜಿಲ್ಲೆಯಲ್ಲಿ ಕರೊನಾ ಸೋಂಕಿತ ಬಹುತೇಕ ಜನರು ರೋಗ ಲಕ್ಷಣ ರಹಿತರೇ ಆಗಿದ್ದಾರೆ.ಮುಂಬೈನಿಂದ ಬರುತ್ತಿರುವವರಲ್ಲಿ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಪರೀಕ್ಷೆ ಮಾಡಿದರೆ ಕರೊನಾ ಸೋಂಕು ಕಂಡುಬರುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts