More

    ಕ್ವಾರಂಟೈನ್​ಗೆ ಅಡ್ಡಿಪಡಿಸಿದವರ ವಿರುದ್ಧ ದೂರು

    ಶಿರಸಿ: ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್ ಮಾಡುವ ವೇಳೆ ತಾಲೂಕಿನ ಕಲ್ಲಿ ಶಾಲೆಯ ಪ್ರಾಚಾರ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಇಬ್ಬರ ವಿರುದ್ಧ ಬನವಾಸಿ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ. ಶಿರಸಿಯ ಕೆಎಚ್​ಬಿ ಕಾಲನಿಯ ಸುಧಾಕರ ಜೋಗಳೇಕರ ಹಾಗೂ ನಾಗಸೇನ ಜೋಗಳೇಕರ ಆರೋಪಿಗಳು. ‘ನಾವು ಬಿಎಸ್ಪಿ ನಾಯಕರು, ವಸತಿ ಶಾಲೆಯಲ್ಲಿ ನಾವು ಇರುವುದಿಲ್ಲ, ನಮ್ಮನ್ನು ಮನೆಗೆ ಕಳುಹಿಸಿ’ ಎಂದು ಗಲಾಟೆ ಮಾಡಿದ್ದರು. ಜತೆ, ಎರಡು ದಿನದಿಂದ ಹಗಲು ರಾತ್ರಿ ಕ್ವಾರಂಟೈನ್ ನಡೆಸಲು ಶ್ರಮಿಸುತ್ತಿರುವ ಶಾಲೆ ಪ್ರಾಚಾರ್ಯರು, ಸಿಬ್ಬಂದಿ ಮೇಲೆ ಆರೋಪಿತರು ದರ್ಪ ತೋರಿಸಿದ್ದಲ್ಲದೇ, ಗಂಟಲ ದ್ರವ ತೆಗೆಯಲು ಬಂದ ವೈದ್ಯರ ಜತೆಗೂ ಈ ಆರೋಪಿತರು ಗಲಾಟೆ ಮಾಡಿದ್ದರು. ಈ ಬಗ್ಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
    ಕ್ವಾರಂಟೈನ್ ಕೇಂದ್ರದಲ್ಲಿದ್ದವರ ಓಡಾಟ: ಕಾರವಾರ ತಾಲೂಕಿನ ಬಾಡ ಕ್ವಾರಂಟೈನ್ ಕೇಂದ್ರದಲ್ಲಿದ್ದವರು ಹೊರಗೆ ಓಡಾಡುತ್ತಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು. ಮಹಾದೇವ ದೇವಸ್ಥಾನ ಸಮೀಪ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಹಾಸ್ಟೆಲ್​ನಲ್ಲಿ ಕ್ವಾರಂಟೈನ್ ಕೇಂದ್ರ ತೆರೆಯಲಾಗಿದೆ. ಮುಂಬೈ ಮತ್ತು ಇನ್ನಿತರ ಕಡೆಗಳಿಂದ ಬಂದ 18 ಜನರನ್ನು ಇರಿಸಲಾಗಿದೆ. ಆದರೆ, ಅಲ್ಲಿದ್ದ ಕೆಲವರು ಬೆಳಗ್ಗೆ ಕಾಂಪೌಂಡ್ ಗೋಡೆಯ ಮೇಲೆ ಬಂದು ಕೂರುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು. ಸಿಪಿಐ ಸಂತೋಷ ಶೆಟ್ಟಿ, ತಹಸೀಲ್ದಾರ್ ರಾಮಚಂದ್ರ ಕಟ್ಟಿ ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮಾತುಕತೆ ನಡೆಸಿದರು. 24 ಗಂಟೆ ಪೊಲೀಸ್ ಬಂದೋಬಸ್ತ್ ಹಾಕಲಾಗುವುದು. ಕ್ವಾರಂಟೈನ್​ನಲ್ಲಿದ್ದವರಿಗೂ ಸೂಕ್ತ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದ ನಂತರ ಸ್ಥಳೀಯರು ಪ್ರತಿಭಟನೆ ಕೈಬಿಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts