More

    ಕ್ರೀಡಾಕೂಟದಲ್ಲಿ ಮಿಂಚಿದ ಸ್ಪರ್ಧಿಗಳು

    ಧಾರವಾಡ: ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ನಗರದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ 2ನೇ ದಿನವಾದ ಶನಿವಾರ, ನಗರದ ವಿವಿಧ ಕಡೆಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಯಿತು.

    ಅಥ್ಲೆಟಿಕ್ಸ್: ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ 400 ಮೀಟರ್ ಓಟದಲ್ಲಿ ಉತ್ತರ ಕನ್ನಡದ ಭಾಸ್ಕರ ವಿ. ನಾಯ್ಕ (ಪ್ರಥಮ), ವಿಜಯಪುರದ ಎ.ಬಿ. ಸಿಂದಗಿ, (ದ್ವಿತೀಯ), ಶಿವಮೊಗ್ಗದ ಕಾನಪ್ಪ ಪಿ. (ತೃತೀಯ) ಸ್ಥಾನ ಪಡೆದರು.

    10,000 ಮೀ. ಓಟದಲ್ಲಿ ಹಾಸನದ ಚಂಗಪ್ಪ. ಎ.ಬಿ (ಪ್ರ), ಕಲಬುರ್ಗಿಯ ಉಮೇಶ ಸದ್ಲಾಪುರ (ದ್ವಿ), ಕೊಡಗಿನ ರಾಘವೇಂದ್ರ (ತೃ), 400 ಮೀ. ಅಡೆತಡೆ ಓಟದಲ್ಲಿ ಚಾಮರಾಜನಗರದ ಪ್ರಭಾಕರ್ (ಪ್ರ), ಮೈಸೂರಿನ ಶಿವರಾಮ (ದ್ವಿ), ಹಾವೇರಿಯ ನಾಗರಾಜ ಬಸವಾಡ್ಕರ್ (ತೃ) ಸ್ಥಾನ ಪಡೆದರು.

    ಉದ್ದ ಜಿಗಿತ ಸ್ಪರ್ಧೆಯಲ್ಲಿ ರಾಯಚೂರಿನ ಚನ್ನಬಸಪ್ಪ (ಪ್ರ), ಸಚಿವಾಲಯದ ಪ್ರಭಾಕರ್ (ದ್ವಿ), ಶಿವಮೊಗ್ಗದ ಕಾನಪ್ಪ (ತೃ), ಚಕ್ರ ಎಸೆತದಲ್ಲಿ ಉತ್ತರ ಕನ್ನಡದ ಸಂತೋಷ ನಾಯಕ (ಪ್ರ), ವಿಜಯಪುರದ ಆರ್.ಎಂ. ಚವ್ಹಾಣ (ದ್ವಿ), ಬೆಳಗಾವಿಯ ಆರ್.ಆರ್.ಮುಜಾವರ (ತೃ) ಸ್ಥಾನ ಪಡೆದಿದ್ದಾರೆ.

    ಮಹಿಳಾ ವಿಭಾಗ: ಜಾವಲಿನ್ ಎಸೆತದಲ್ಲಿ ದಕ್ಷಿಣ ಕನ್ನಡದ ಭಾಗೀರಥಿ ರೈ (ಪ್ರ), ಶಿವಮೊಗ್ಗದ ರೂಪಾ ಟಿ.ಸಿ. (ದ್ವಿ), ಗದಗದ ಸಾವಿತ್ರಿ ಮಡೆಪ್ಪನವರ (ತೃ), 35ರಿಂದ 45 ವರ್ಷ ವಿಭಾಗದ ಗುಂಡು ಎಸೆತದಲ್ಲಿ ಉತ್ತರ ಕನ್ನಡದ ಯಮುನಾ ನಾಯಕ (ಪ್ರ), ಸಚಿವಾಲಯದ ಪ್ರಫುಲಾಕುಮಾರಿ ಎಸ್. (ದ್ವಿ), ಚಿತ್ರದುರ್ಗದ ವೀಣಾ ಜಿ.ಎಸ್ (ತೃ) ಸ್ಥಾನ ಪಡೆದರು.

    35ರಿಂದ 45 ವರ್ಷ ವಿಭಾಗದ ಚಕ್ರ ಎಸೆತದಲ್ಲಿ ಉತ್ತರ ಕನ್ನಡದ ಯಮುನಾ ನಾಯಕ್ (ಪ್ರ), ಸಚಿವಾಲಯದ ಪ್ರಫುಲಾಕುಮಾರಿ ಎಸ್ (ದ್ವಿ), ಶಿವಮೊಗ್ಗದ ಸುಮರಾಣಿ (ತೃ), ಉದ್ದ ಜಿಗಿತದಲ್ಲಿ ದಕ್ಷಿಣ ಕನ್ನಡದ ದೀಪಿಕಾ (ಪ್ರ), ಧಾರವಾಡದ ನಯನಾ ನಾಯ್ಕ (ದ್ವಿ), ದಕ್ಷಿಣ ಕನ್ನಡದ ಸೌಮ್ಯ ಕೆ. (ತೃ) ಸ್ಥಾನ ಪಡೆದರು.

    ಕುಸ್ತಿ ಸ್ಪರ್ಧೆ: 55 ಕೆಜಿ ತೂಕದ ಪುರುಷರ ವಿಭಾಗದಲ್ಲಿ ಬೆಳಗಾವಿಯ ಪಿ.ವೈ. ಪಾಟೀಲ (ಪ್ರ), ಮೈಸೂರಿನ ಚಿಕ್ಕಪುಟ್ಟ ಗೌಡ (ದ್ವಿ), 60 ಕೆಜಿ ವಿಭಾಗದಲ್ಲಿ ಹಾವೇರಿಯ ಎಂ.ಎಸ್. ಬ್ಯಾಹಟ್ಟಿ (ಪ್ರ), ಧಾರವಾಡದ ಜಗದೀಶ ವಿರಕ್ತಮಠ (ದ್ವಿ), ಬೆಳಗಾವಿಯ ಎಸ್.ಕೆ. ಬಟಕಂಡೆ (ತೃ), 63 ಕೆಜಿ ವಿಭಾಗದಲ್ಲಿ ಹಾವೇರಿಯ ಸುರೇಶ ಹುಲಿಮನಿ (ಪ್ರ), ಬೆಳಗಾವಿಯ ರಮೇಶ .ಎನ್ (ದ್ವಿ), 67 ಕೆಜಿ ವಿಭಾಗದಲ್ಲಿ ಧಾರವಾಡದ ರವೀಂದ್ರ ಅಲ್ಲಾಪುರ (ಪ್ರ), ಹಾವೇರಿಯ ಸಿದ್ದಪ್ಪ ನಾಗಮ್ಮನವರ (ದ್ವಿ), ಚಿಕ್ಕಮಗಳೂರಿನ ಕಣಿವೆಹಳ್ಳಿ ಮಂಜಪ್ಪ (ತೃ) ಸ್ಥಾನ ಪಡೆದಿದ್ದಾರೆ.

    ಮಹಿಳೆಯರ ವಿಭಾಗದ 53 ಕೆಜಿ ವಿಭಾಗದಲ್ಲಿ ತುಮಕೂರಿನ ಲತಾ ಎಂ.ಆರ್. (ಪ್ರ), 55 ಕೆಜಿ ವಿಭಾಗದಲ್ಲಿ ಬೆಳಗಾವಿಯ ನಿರ್ಮಲ ಎಸ್ ಜಿ.(ಪ್ರ), 65 ಕೆಜಿ ವಿಭಾಗದಲ್ಲಿ ವಿಜಯಪುರದ ನಂದಾ ತಿಕೋಟ (ಪ್ರ), 68 ಕೆಜಿ ವಿಭಾಗದಲ್ಲಿ ದಾವಣಗೆರೆಯ ಮಂಜಮ್ಮ (ಪ್ರ) ಸ್ಥಾನ ಪಡೆದಿದ್ದಾರೆ.

    ದೇಹದಾರ್ಢ್ಯ ಸ್ಪರ್ಧೆ: 65 ಕೆಜಿ ವಿಭಾಗದಲ್ಲಿ ಉಡುಪಿಯ ಅರುಣಕುಮಾರ ಎಚ್.ಆರ್. (ಪ್ರ), ಉತ್ತರ ಕನ್ನಡದ ದೀಪಕ ಗಾಂವಕರ (ದ್ವಿ), ಮಂಡ್ಯದ ಪರಮೇಶ ಎಸ್. (ತೃ), 70 ಕೆಜಿ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರದ ವಿನಯ ಎಂ.ಜಿ. (ಪ್ರ), ಶಿವಮೊಗ್ಗದ ಚಂದ್ರಶೇಖರ ಎಚ್.(ದ್ವಿ), ಬಳ್ಳಾರಿಯ ಸೋಮಶೇಖರ (ತೃ), 75 ಕೆಜಿ ವಿಭಾಗದಲ್ಲಿ ಉತ್ತರ ಕನ್ನಡದ ರಾಜೇಶ ಮಡಿವಾಳ (ಪ್ರ), ಉಡುಪಿಯ ಅಶ್ವಿನಿ (ದ್ವಿ), ಚಿಕ್ಕಮಗಳೂರಿನ ಗೋವಿಂದ (ತೃ) ಸ್ಥಾನ ಪಡೆದರು.

    ಭಾರ ಎತ್ತುವ ಸ್ಪರ್ಧೆ: 55 ಕೆಜಿ ವಿಭಾಗದಲ್ಲಿ ಬಾಗಲಕೋಟೆಯ ಮೈತ್ರಿ ಎಚ್. ಬಿ. (ಪ್ರ), 61 ಕೆಜಿ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ದೀಪಕ ಗೌಡರ (ಪ್ರ) ಸ್ಥಾನ, 67 ಕೆಜಿ ವಿಭಾಗದಲ್ಲಿ ಬಳ್ಳಾರಿಯ ಸೋಮಶೇಖರ ಕೆ. (ಪ್ರ), ಗುರುರಾಜ್ (ದ್ವಿ), ಧಾರವಾಡದ ಪವನ್ ರಾನಕೆ (ತೃ) ಹಾಗೀ 73 ಕೆಜಿ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅನಿಲ್ ನಾಯಕ್ (ಪ್ರ), ತುಮಕೂರಿನ ಮಹೇಶ ಎಂ. (ದ್ವಿ), ಬಳ್ಳಾರಿಯ ಹನುಮಪ್ಪ ಎಚ್. (ತೃ) ಸ್ಥಾನ ಪಡೆದಿದ್ದಾರೆ.

    ಸಾಂಸ್ಕೃತಿಕ ಸ್ಪರ್ಧೆ: ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಕರ್ನಾಟಕ ಲಘು ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ 78 ಸ್ಪರ್ಧಾಳುಗಳು ಭಾಗವಹಿಸಿದ್ದರು. ಡಯಟ್ ಕಚೇರಿಯ ನೇಯ್ಗೆ ಸಭಾಂಗಣದಲ್ಲಿ ಭರತ ನಾಟ್ಯ, ಓಡಿಸ್ಸಿ ಹಾಗೂ ಕಥಕ್, ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಜಾನಪದ ಗೀತೆ ವೈಯಕ್ತಿಕ ಸ್ಪರ್ಧೆಗಳು,ಡಾ.ಮಲ್ಲಿಕಾರ್ಜುನ ಮನಸೂರ ಕಲಾ ಭವನದಲ್ಲಿ ನಾಟಕಗಳ ಸ್ಪರ್ಧೆಗಳು ನಡೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts