More

    ಕ್ರೀಡಾಕೂಟಗಳಿಂದ ಪ್ರತಿಭೆ ಗುರುತಿಸಲು ಸಾಧ್ಯ

    ದಾಂಡೇಲಿ: ಕ್ರೀಡೆಯಿಂದ ಸೌಹಾರ್ದತೆ ನೆಲೆಸಲು ಹಾಗೂ ಕ್ರೀಡಾಕೂಟಗಳಿಂದ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಲು ಸಾಧ್ಯ ಎಂದು ರೋಟರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್. ವಿಶ್ವನಾಥ ಶೆಟ್ಟಿ ಹೇಳಿದರು.
    ನಗರದ ಕಲಾಶ್ರೀ ಸಂಸ್ಥೆ ನೇತೃತ್ವದಲ್ಲಿ ಡಿಎಸ್​ಎಫ್​ಎ ಕ್ರೀಡಾ ಮೈದಾನದಲ್ಲಿ ಆಯೋಜಿಸಿರುವ ‘ಕಲಾಶ್ರೀ ಟ್ರೋಫಿ-2020’ ಕ್ರಿಕೆಟ್ ಪಂದ್ಯಾವಳಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
    ನಗರಸಭೆ ಸದಸ್ಯ ಮೋಹನ ಹಲವಾಯಿ ಮಾತನಾಡಿ, ಕ್ರೀಡಾಕೂಟದಲ್ಲಿ ಭಾಗವಹಿಸುವಿಕೆ ಮುಖ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಕಲಾಶ್ರೀ ಸಂಸ್ಥೆ ಅಧ್ಯಕ್ಷ ಎಸ್. ಪ್ರಕಾಶ ಶೆಟ್ಟಿ ಮಾತನಾಡಿ, ಪಂದ್ಯಾವಳಿಯಲ್ಲಿ ನಗರ ಮಟ್ಟದಲ್ಲಿ ದಾಂಡೇಲಿ ತಾಲೂಕಿನ 12, ಹಳಿಯಾಳದಿಂದ 1, ಜೊಯಿಡಾದಿಂದ 2 ಮತ್ತು ಈ ತಾಲೂಕುಗಳ ಗ್ರಾಮೀಣ ಭಾಗದಿಂದ 20 ತಂಡಗಳು ಹಾಗೂ ಇತರ ಭಾಗಗಳಿಂದ 8 ತಂಡಗಳು ಭಾಗವಹಿಸಿದ್ದು ಮಾ. 22ರಂದು ಅಂತಿಮ ಪಂದ್ಯ ನಡೆಯಲಿದೆ ಎಂದರು.
    ನಗರಸಭೆ ಸದಸ್ಯ ದಶರಥ ಬಂಡಿವಡ್ಡರ, ಶಿರಸಿ ಅರ್ಬನ್ ಬ್ಯಾಂಕ್ ನಿರ್ದೇಶಕ ಟಿ.ಎಸ್. ಬಾಲಮಣಿ, ಪಂದ್ಯಾವಳಿ ಸಂಚಾಲಕ ಶಿರಾಜ ಲೋಹಾನಿ, ಇತರರು ಇದ್ದರು.
    ಕಲಾಶ್ರೀ ಸಂಸ್ಥೆಯ ಬಿ.ಎನ್. ವಾಸರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಸುರೇಶ ಕಾಮತ್ ನಿರೂಪಿಸಿದರು. ಮಿಥುನ ನಾಯಕ ವಂದಿಸಿದರು. ಉದಯ ಶೆಟ್ಟಿ, ದೀಪಕ ನಾಯಕ, ಸಂದೀಪ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts