More

    ಕ್ರಿಕೆಟ್ ತರಬೇತಿ ಶಿಬಿರ- ಗುರಿ ತಲುಪಲು ಶಿಸ್ತು-ಶ್ರದ್ಧೆ ಅತ್ಯಗತ್ಯ 

    ದಾವಣಗೆರೆ: ಜೀವನದಲ್ಲಿ ಬಯಸಿದ ಗುರಿ ತಲುಪಲು ಎಲ್ಲರಲ್ಲೂ ಶಿಸ್ತು ಬೇಕು. ಗುರು ತೋರಿದ ದಾರಿ ಜತೆಗೆ ಶ್ರದ್ಧೆ, ನಿಷ್ಠೆಯಿಂದ ಪ್ರಯತ್ನಿಸಿದಲ್ಲಿ ಗುರಿಯನ್ನು ಸುಲಭವಾಗಿ ತಲುಪಬಹುದು ಎಂದು ದಾವಣಗೆರೆ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹೇಳಿದರು.
    ದಾವಣಗೆರೆ ಕ್ರಿಕೆಟ್ ಅಕಾಡೆಮಿ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 22ನೇ ವರ್ಷದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರದ ಸಮಾರೋಪದಲ್ಲಿ ಶಿಬಿರದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
    ಮೊದಲೆಲ್ಲ ಕ್ರಿಕೆಟ್‌ನಲ್ಲಿ ಹೆಚ್ಚಿನ ತರಬೇತಿ ಪಡೆಯಲು ಬೆಂಗಳೂರು ಅಥವಾ ಮೈಸೂರಿಗೆ ಹೋಗಬೇಕಿತ್ತು. ಅದು ದುಬಾರಿಯಾಗಿದ್ದ ಕಾರಣ ಪಾಲಕರು ಪ್ರತಿಭಾವಂತ ಕ್ರೀಡಾಪಟುಗಳನ್ನು ಕಳುಹಿಸಿಕೊಡಲು ಹಿಂಜರಿಯುತ್ತಿದ್ದರು. ಆದರೆ ಈಗ ದಾವಣಗೆರೆಯಲ್ಲಿ ಕ್ರೀಡಾ ಪ್ರಾಧಿಕಾರದ ತರಬೇತುದಾರರಿಂದಲೇ ಅತ್ಯುತ್ತಮ ತರಬೇತಿ ಸಿಗುತ್ತಿದೆ. ದಾವಣಗೆರೆಯಲ್ಲಿ ಉತ್ತಮ ಪ್ರತಿಭೆಗಳು ಹೊರಬರಲಿ ಎಂದು ಆಶಿಸಿದರು.
    ತರಬೇತುದಾರರಾದ ಪಿ.ವಿ.ನಾಗರಾಜ್, ಬಿಸಿಸಿಐ ಕೋಚ್ ಗೋಪಾಲಕೃಷ್ಣ, ಕೆಎಸ್‌ಸಿಎ ಕೋಚ್ ತಿಮ್ಮೇಶ್, ಉಮೇಶ್ ಸಿರಿಗೆರೆ, ಶ್ರೀಕುಮಾರ್, ಹಿರಿಯ ಕ್ರಿಕೆಟ್ ಪಟು ಮಂಜುನಾಥ, ಕ್ರಿಕೆಟ್ ಪ್ರೋತ್ಸಾಹಕ ಶಾಮನೂರು ತಿಪ್ಪೇಶ್, ಕಿರಿಯ ತರಬೇತುದಾರ ವೆಂಕಟೇಶ್, ಹೇಮಂತ್ ಹಾಗೂ ಪಾಲಕರು, ಶಿಬಿರಾರ್ಥಿಗಳು ಇದ್ದರು.
    ——————–

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts