More

    ಕ್ಯಾನ್ಸರ್ ಮುಕ್ತಕ್ಕೆ ಅರಿವು ಅಗತ್ಯ

    ಸುರಪುರ: ಸಾರ್ವಜನಿಕರು ಪ್ರತಿ ಮೂರು ವರ್ಷಕ್ಕೊಮ್ಮೆ ಕ್ಯಾನ್ಸರ್ ತಪಾಸಣೆಗೊಳಪಡಬೇಕು. ಪುರುಷ ಮತ್ತು ಮಹಿಳೆಯರಲ್ಲಿ ಹಾಗೂ ಹದಿಹರೆಯದ ಬಾಲಕಿಯರಲ್ಲಿ ಕ್ಯಾನ್ಸರ್ ಲಕ್ಷಣಗಳು ಕಂಡುಬರುತ್ತವೆ. ಇದನ್ನು ತಡೆಯಲು ಚಿಕಿತ್ಸೆ ಮತ್ತು ಜಾಗೃತಿ, ತಿಳಿವಳಿಕೆ ಅಗತ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪ ನಾಯಕ ಹೇಳಿದರು.

    ನಗರದ ಬಾಲಕರ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಕ್ಯಾನ್ಸರ್ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕ್ಯಾನ್ಸರ್, ಹೃದಯ, ಥೈರಾಡ್, ಡಯಾಬಿಟಿಕ್ಗಳ ರೋಗ ತಪಾಸಣೆಗೆ ತಾಲೂಕಿನ 42 ಸಮುದಾಯ ಆರೋಗ್ಯ ಕೇಂದ್ರ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿಹಳ್ಳಿಯಲ್ಲೂ ಎನ್ಸಿಡಿ ತಪಾಸಣೆ, ಅಧಿಕ ಮತ್ತು ಕಡಿಮೆ ರಕ್ತದೊತ್ತಡ, ಡಯಾಬಿಟಿಕ್, ಥೈಯಾರ್ಡ್, ಇರುವುದನ್ನು ಇ ಸ್ಕ್ರೀನಿಂಗ್ ಮಾಡಲಾಗುತ್ತಿದೆ ಎಂದರು.

    ದೇಶದಲ್ಲಿ 13ಲಕ್ಷ ಜನರಲ್ಲಿ ವಿವಿಧ ರೀತಿಯ ಕ್ಯಾನ್ಸರ್ ರೋಗಗಳು ಕಂಡುಬರುತ್ತಿವೆ. 10ಜನರಲ್ಲಿ 1ಕ್ಯಾನ್ಸರ್ ರೋಗ ಕಂಡುಬರುತ್ತದೆ. ಪ್ರತಿವರ್ಷ ಕ್ಯಾನ್ಸರ್ನಿಂದ ಶೇ.12ರಷ್ಟು ಜನರು ಸಾವನ್ನಪ್ಪುತ್ತಿದ್ದಾರೆ. ತಂಬಾಕು ಸೇವನೆಯಿಂದ ಕ್ಯಾನ್ಸರ್, ವಾಯುಮಾಲಿನ್ಯದಿಂದ ಶ್ವಾಸಕೋಶ ಕ್ಯಾನ್ಸರ್, ಅಲರ್ಜಿ ಕ್ಯಾನ್ಸರ್, ಲಂಗ್ ಕ್ಯಾನ್ಸರ್ ರೋಗಗಳು ಕಾಣಿಸಿಕೊಳ್ಳುತ್ತಿವೆ. ತಕ್ಷಣವೇ ಕಿದ್ವಾಯಿ, ಎಸ್ಜಿಸಿ ಆಸ್ಪತ್ರೆಯ ವೈದ್ಯರನ್ನು ಕಂಡು ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದು ರೋಗದಿಂದ ಮುಕ್ತಿ ಹೊಂದಬೇಕು ಎಂದು ತಿಳಿಸಿದರು.

    13 ರಿಂದ 19ವರ್ಷದೊಳಗೆ ಕ್ಯಾನ್ಸರ್ ಒಳಗಾದವರಿಗೆ ಎಚ್ಇಬಿ ಚುಚ್ಚುಮದ್ದು ನೀಡುವುದರಿಂದ ನಿವಾರಣೆ ಮಾಡಬಹುದು. ಇಂಜೆಕ್ಸನ್ ಖಾಸಗಿ ಆಸ್ಪತ್ರೆಯಲ್ಲಿ ದೊರೆಯುತ್ತದೆ. 45 ವರ್ಷದ ನಂತರ ಮುಟ್ಟು ನಿಂತ ಬಳಿಕ ಕ್ಯಾನ್ಸರ್ ಗಡ್ಡೆ ಆರಂಭವಾಗುತ್ತದೆ. ಸೋಂಕು ನಿಯಂತ್ರಿಸಲು ಚಿಕಿತ್ಸೆ ಪಡೆಯಬೇಕು. ಗರ್ಭಧಾರಣೆಯ ಒಂದು ಗಂಟೆಯೊಳಗೆ ಸ್ತನದಿಂದ ಹಾಲು ತೆಗೆಯಬೇಕು. ತಾಯಂದಿರುವ ಸ್ತನ ಕ್ಯಾನ್ಸರ್ನಿಂದ ಮುಕ್ತರಾಗಲು ಜಾಗೃತಿ ವಹಿಸಬೇಕು ಎಂದು ತಿಳಿಸಿದರು.

    ಪ್ರೌಢಶಾಲೆಯ ಮುಖ್ಯಶಿಕ್ಷಕ ಯಲ್ಲಪ್ಪ ಕಾಡ್ಲೂರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರೋಗ್ಯ ಅಧಿಕಾರಿ ರಾಜಶೇಖರ, ಔಷಧತಜ್ಞ ಶಾಂತಕುಮಾರ, ಬಿಎಚ್ಒ ಮಲ್ಲಪ್ಪ, ದೈಹಿಕ ಶಿಕ್ಷಕ ಲಕ್ಷ್ಮಣ ಬಿರಾದಾರ, ವಸಂತ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts