More

    ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುತ್ತಿರುವ ಕೆಎಲ್‌ಇ ಆಸ್ಪತ್ರೆ ಕಾರ್ಯ ಸ್ತುತ್ಯಾರ್ಹ

    ಬೆಳಗಾವಿ: ಇಂದು ಭಯವೇ ಒಂದು ದೊಡ್ಡ ರೋಗವಾಗಿದೆ. ಅದನ್ನು ಎದುರಿಸುವ ಶಕ್ತಿ ಇರಬೇಕು. ಇಂದಿನ ವೈದ್ಯಕೀಯ ತಂತ್ರಜ್ಞಾನದಿಂದಾಗಿ ಎಲ್ಲ ರೋಗಗಳಿಗೂ ಪರಿಹಾರಾತ್ಮಕ ಚಿಕಿತ್ಸೆ ಇದೆ. ಧೈರ್ಯ ಕಳೆದುಕೊಳ್ಳದೇ, ಧನಾತ್ಮಕ ಮನಸ್ಸಿನಿಂದ ಚಿಕಿತ್ಸೆ ಪಡೆದರೆ ಎಲ್ಲವೂ ಗುಣಮುಖವಾಗಲಿದೆ ಎಂದು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಹೇಳಿದರು.
    ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಬುಧವಾರ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ಚಿಕ್ಕಮಕ್ಕಳ ಕ್ಯಾನ್ಸರ್ ವಿಭಾಗ ಏರ್ಪಡಿಸಿದ್ದ ಜಾಗೃತಿ ಸಮಾರಂಭದಲ್ಲಿ ಮಾತನಾಡಿದರು.
    ಆರಂಭದಲ್ಲೇ ಕ್ಯಾನ್ಸರ್ ಪತ್ತೆ ಮಾಡಿ, ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದರೆ ಗುಣಪಡಿಸಬಹುದು. ಮಕ್ಕಳ ಭವಿಷ್ಯಕ್ಕೋಸ್ಕರ ಸಕಾಲಕ್ಕೆ ಚಿಕಿತ್ಸೆ ನೀಡಲು ಪಾಲಕರು ಸಹಕರಿಸಬೇಕು. ತುರ್ತು ಸಂದರ್ಭದಲ್ಲಿ ವೈದ್ಯರು ಪೋಲಿಸರಿಗೆ ಸಹಕಾರ ನೀಡುತ್ತಿದ್ದಾರೆ. ಎಲ್ಲ ಮಕ್ಕಳಿಗೂ ಚಿಕಿತ್ಸೆ ಲಭಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಕೆಎಲ್‌ಇ ಆಸ್ಪತ್ರೆ ಕಳಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
    ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ದಯಾನಂದ ಮಾತನಾಡಿ, ಕ್ಯಾನ್ಸರನಿಂದ ಮಕ್ಕಳು ಬಳಲುತ್ತಿದ್ದರೆ ಅತ್ಯಧಿಕ ಸಮಸ್ಯೆ ಎದುರಿಸವವರು ಪಾಲಕರು. ಅವರು ಧನಾತ್ಮಕವಾಗಿರುವುದು ಮುಖ್ಯ. ಎಲ್ಲಿಯೇ ಹೋದರು ಚಿಕ್ಕ ಮಕ್ಕಳ ಕ್ಯಾನ್ಸರ್ ತಜ್ಞರ ಕಾರ್ಯ ಬಹಳ ಮುಖ್ಯವಾಗಿದೆ ಎಂದರು.
    ಹಿರಿಯ ಚಿಕ್ಕಮಕ್ಕಳ ತಜ್ಞವೈದ್ಯರಾದ ಡಾ.ವಿ.ಡಿ.ಪಾಟೀಲ ಮಾತನಾಡಿ, ಮುಂಚಿನಂತೆ ಈಗ ಇಲ್ಲ. ವೈದ್ಯವಿಜ್ಞಾನ ಸಾಕಷ್ಟು ಮುಂದೆವರೆದಿದೆ. ತಂತ್ರಜ್ಞಾನದಿಂದ ಸೂಕ್ತ ಚಿಕಿತ್ಸೆ ಇದೆ. ಚಿಕಿತ್ಸೆಯು ಮೊದಲು ಕಷ್ಟ ಎನಿಸಿದರೂ ನಂತರ ರೂಢಿಯಾಗಿ ಗುಣಮುಖವಾಗುತ್ತದೆ. ಆರ್ಥಿಕವಾಗಿ ದುರ್ಬಲರಾದವರಿಗೆ ಸಂಘಸಂಸ್ಥೆಗಳು ಇನ್ನಷ್ಟು ಸಹಾಯ ಕಲ್ಪಿಸಲಿ ಎಂದು ಆಶಯ ವ್ಯಕ್ತಪಡಿಸಿದರು.
    ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎನ್.ಎಸ್ ಮಹಾಂತಶೆಟ್ಟಿ, ಚಿಕ್ಕಮಕ್ಕಳ ಕ್ಯಾನ್ಸರ್ ತಜ್ಞವೈದ್ಯ ಡಾ. ಅಭಿಲಾಷಾ ಎಸ್ ಮಾತನಾಡಿದರು. ಈ ಸಂದರ್ಭದಲ್ಲಿ ಡಾ.ರೂಪಾ ಬೆಲ್ಲದ, ಡಾ. ಆರಿಫ್ ಮಾಲ್ದಾರ, ಡಾ.ತನ್ಮಯಾ ಮೆಟಗುಡ್, ಡಾ.ಮೀನಾಕ್ಷಿ ಬಿ.ಆರ್, ಎಸ್.ವಿ.ವಿರಗಿ ಸೇರಿದಂತೆ ಇತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts