More

    ಕ್ಯಾತೆಗೆ ಕಾನೂನು ಮೂಲಕವೇ ಉತ್ತರ

    ಧಾರವಾಡ: ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ವಿಚಾರವಾಗಿ ಈಗಾಗಲೇ ನ್ಯಾಯಾಲಯದಲ್ಲಿ ಗೆಲುವು ಸಾಧಿಸಲಾಗಿದೆ. ಈ ವಿಷಯದಲ್ಲಿಯ ಕಿರಿಕಿರಿಗಳೆಲ್ಲ ಈಗ ಮುಗಿದ ಅಧ್ಯಾಯ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ಮಹದಾಯಿ ವಿಚಾರವಾಗಿ ಗೋವಾ ಮೇಲ್ಮನವಿ ಸಲ್ಲಿಸಿದ ಕುರಿತು ನಗರದಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಷಯವಾಗಿ ಕರ್ನಾಟಕದ ಕಾಂಗ್ರೆಸ್ ನಾಯಕರು ಗೋವಾದ ಕಾಂಗ್ರೆಸ್ ನಾಯಕರಿಗೆ ಪಿತೂರಿ ಮಾಡಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ದೂರಿದರು.

    ನ್ಯಾಯಾಲಯದಲ್ಲಿ ಕರ್ನಾಟಕದ ಪರವಾಗಿ ತೀರ್ಪು ಬಂದಿದೆ. ಯೋಜನೆ ಅನುಷ್ಠಾನಕ್ಕೆ 500 ಕೋಟಿ ರೂ. ಮೀಸಲಿಟ್ಟಿದ್ದೇವೆ. ಇನ್ನೇನಿದ್ದರೂ ಕಾಮಗಾರಿ ಆರಂಭಿಸುವುದಷ್ಟೇ ಎಂದು ಹೇಳಿದರು.

    ಗೋವಾ ಮತ್ತೆ ಕ್ಯಾತೆ ತೆಗೆದರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಅವರಿಗೆ ಕಾನೂನು ಮೂಲಕವೇ ಉತ್ತರ ಕೊಡುತ್ತೇವೆ. ಈ ಬಗ್ಗೆ ಗೋವಾ ಮುಖ್ಯಮಂತ್ರಿ ಜತೆ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ ಎಂದರು.

    ರ್ಚಚಿಸುತ್ತೇವೆ

    ಮಹದಾಯಿ ವಿಚಾರವಾಗಿ ಗೋವಾ ಮೇಲ್ಮನವಿ ಸಲ್ಲಿಸಿದ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಅಧ್ಯಕ್ಷ ನಳೀನ್​ಕುಮಾರ್ ಕಟೀಲ್, ಈ ಕುರಿತು ನಾನು, ಸಚಿವ ಪ್ರಲ್ಹಾದ ಜೋಶಿ ಸೇರಿ ಕೇಂದ್ರದ ಮುಖಂಡರೊಂದಿಗೆ ರ್ಚಚಿಸುತ್ತೇವೆ. ಚರ್ಚೆಯ ಮೂಲಕ ಇತ್ಯರ್ಥಪಡಿಸಿಕೊಳ್ಳುತ್ತೇವೆ. ಗೋವಾ ಮುಖಂಡರೊಂದಿಗೂ ಮಾತನಾಡುತ್ತೇವೆ ಎಂದರು.

    ಸಿಎಂ ಜತೆ ಮಾತನಾಡುತ್ತೇನೆ

    ಮಾಜಿ ಸಚಿವ ವಿನಯ ಕುಲಕರ್ಣಿ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಕಟೀಲ್, ಇದು ಕೇವಲ ಊಹಾಪೋಹ. ಮಾಧ್ಯಮಗಳು ಬಿಂಬಿಸಿದ ವದಂತಿ. ವಿನಯ ಕುಲಕರ್ಣಿ ಪಕ್ಷ ಸೇರ್ಪಡೆ ವಿಚಾರವಾಗಿ ನನ್ನನ್ನು ಸಂಪರ್ಕ ಮಾಡಿಲ್ಲ. ಪಕ್ಷಕ್ಕೆ ಸೇರುವ ವಿಚಾರ ಸದ್ಯಕ್ಕಿಲ್ಲ. ಆ ವಿಷಯ ಬಂದಾಗ ನೋಡೋಣ ಎಂದು ಕಟೀಲ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts