More

    ಕ್ಯಾಟ್​ಫಿಶ್ ಸಾಕಣೆದಾರರ ವಿರುದ್ಧ ಕ್ರಮ

    ಬೀದರ್: ರಾಜ್ಯದಲ್ಲಿ ಆಫ್ರಿಕನ್ ಕ್ಯಾಟ್ಫಿಶ್ ಸಾಕಣೆ ನಿಷೇಧಿಸಿದ್ದರೂ ಜಿಲ್ಲೆಯಲ್ಲಿ ಕೆಲವರು ಸಾಕಣೆ ಮಾಡುತ್ತಿರುವ ದೂರುಗಳು ಬಂದಿವೆ. ನಿಷೇಧಿತ ಮೀನುಗಳ ಸಾಕಣೆಯಲ್ಲಿ ತೊಡಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಗೋವಿಂದರಡ್ಡಿ ಎಚ್ಚರಿಕೆ ನೀಡಿದರು.

    ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಮೀನುಗಾರಿಕೆ, ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕಾರಂಜಾ ಜಲಾಶಯದ ಮರಖಲ್ ಮತ್ತು ರಂಜೋಳ ಖೇಣಿ ವ್ಯಾಪ್ತಿಯಲ್ಲಿ ಅಕ್ರಮವಾಗಿ 10 ಹೊಂಡಗಳನ್ನು ನಿಮರ್ಿಸಿ ಕ್ಯಾಟ್ಫಿಶ್ ಸಾಕಣೆ ಮಾಡುತ್ತಿರುವ ದೂರುಗಳಿವೆ. ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡುವಂತೆ ಮೀನುಗಾರಿಕೆ ಉಪ ನಿದರ್ೇಶಕರಿಗೆ ಸೂಚಿಸಿದರು.

    ಕನರ್ಾಟಕ ನೀರಾವರಿ ನಿಗಮ, ಮೀನುಗಾರಿಕೆ, ಕಂದಾಯ, ಗ್ರಾಪಂ ಅಧಿಕಾರಿಗಳು ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕಾರಂಜಾ ಜಲಾಶಯದ ಹಿನ್ನೀರು ಬಳಸಿ ಸಕರ್ಾರಿ ಅಥವಾ ಖಾಸಗಿ ಪಟ್ಟಾ ಜಮೀನುಗಳಲ್ಲಿ ಹೊಂಡ ನಿಮರ್ಿಸಿರುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಹೊಂಡಗಳಲ್ಲಿನ ಕ್ಯಾಟ್ಫಿಶ್ ನಾಶಗೊಳಿಸಬೇಕು ಎಂದರು.

    ಜಿಪಂ ಸಿಇಒ ಶಿಲ್ಪಾ ಎಂ., ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಸಹಾಯಕ ಆಯುಕ್ತ ಮಹ್ಮದ್ ನಯೀಮ್ ಮೋಮಿನ್, ತಹಸೀಲ್ದಾರ್ ಅಣ್ಣಾರಾವ ಪಾಟೀಲ್, ಸಣ್ಣ ನೀರಾವರಿ ಕಾರ್ಯಪಾಲಕ ಅಭಿಯಂತರ ಸುರೇಶ ಮೇದಾ, ಮೀನುಗಾರಿಕೆ ಉಪ ನಿದರ್ೇಶಕ ಮಲ್ಲೇಶ ಬಡಿಗೇರ, ಡಿವೈಎಸ್ಪಿ ಕೆ.ಎಂ. ಸತೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts