More

    ನ್ಯೂ ಇಯರ್​ಗೆ ಬೆಂಗಳೂರಿಗರಿಗೆ ನಶೆ ಏರಿಸಲು ಬಂದಿದ್ದ ಡ್ರಗ್​ ಫೆಡ್ಲರ್​​ ಅರೆಸ್ಟ್​

    ಬೆಂಗಳೂರು: ಕಳೆದ ವರ್ಷಕ್ಕೆ ವಿದಾಯ ಹೇಳುತ್ತಾ, ಹೊಸ ವರ್ಷವನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಚರಿಸುವ ಶುಭ ಸಮಯವಾಗಿದೆ. ಜನರು ಸಂತೋಷದಾಯಕ ಸಂದರ್ಭವನ್ನು ಉಡುಗೊರೆಗಳು, ಅದ್ದೂರಿ ಹಬ್ಬಗಳು, ಪಾರ್ಟಿಗಳು ಮತ್ತು ಹೆಚ್ಚಿನವುಗಳೊಂದಿಗೆ ಬರಮಾಡಿಕೊಳ್ಳುತ್ತಾರೆ. ಇದೀಗ ಹೊಸ ವರ್ಷ ಹೊಸ ವರ್ಷಕ್ಕೆ ಕಾಲಿಡಲು ಸಿಲಿಕಾನ್ ಸಿಟಿ ಸಜ್ಜಾಗುತ್ತಿದ್ದ ಸಿಲಿಕಾನ್​ ಸಿಟಿ ಮಂದಿಗೆ ನಶೆ ಏರಿಸಲು ಬಂದಿದ್ದ ಡ್ರಗ್ಸ್ ಮಾರಾಟಗಾರನನ್ನು ಪೊಲೀಸರು ಬಂಧಿಸಿದ್ದಾರೆ.

    ಬ್ಯುಸಿನೆಸ್ ವೀಸಾ ಮೇಲೆ ಬೆಂಗಳೂರಿಗೆ ಬಂದು ರಾಮಮೂರ್ತಿನಗರದಲ್ಲಿ ನೆಲೆಸಿದ್ದ ಆಫ್ರಿಕಾ ಮೂಲದ ಲಿಯೋನಾರ್ಡ್ ಎಂಬ ಆರೋಪಿ ಹೊಸ ವರ್ಷಕ್ಕೆ ಮತ್ತೇರಿಸಲು ಅಪಾರ ಪ್ರಮಾಣದ ಡ್ರಗ್ಸ್​ ತಂದಿದ್ದ. ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.

    ಲಿಯೋನಾರ್ಡ್ ಓಕ್ವುಡಿಲಿ ಬಂಧಿತ ಆರೋಪಿ. ಬಂಧಿತನಿಂದ 21 ಕೋಟಿ ಮೌಲ್ಯದ 16 ಕೆಜಿ ಎಂಡಿಎಂಎ, 500 ಗ್ರಾಂ ಕೊಕೆನ್ ಜಪ್ತಿ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ 21 ಕೋಟಿ ಮೌಲ್ಯದ ಡ್ರಗ್ಸ್​ ಜಪ್ತಿ ಮಾಡಿ ಆಫ್ರಿಕಾ ಮೂಲದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯು ಬೆಡ್​ಶೀಟ್​​ ಕವರ್​​, ಸೋಪ್​​ ಬಾಕ್ಸ್​​​ ಹಾಗೂ ಚಾಕೊಲೇಟ್​ ಬಾಕ್ಸ್​ನಲ್ಲಿ ಡ್ರಗ್ಸ್​ ಸಾಗಾಟ ಮಾಡುತ್ತಿದ್ದ. ಹೊಸ ವರ್ಷಕ್ಕೆ ರೇವ್ ಪಾರ್ಟಿಗೆ ಡ್ರಗ್ಸ್ ಸಾಗಿಸಲು ಮುಂದಾಗಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ದಿನಕ್ಕೆ ನಾಲ್ಕು ಗಂಟೆಗೂ ಹೆಚ್ಚು ಕಾಲ ಫೋನ್ ಬಳಸುತ್ತೀರಾ? ನಿಮ್ಮ ಆರೋಗ್ಯಕ್ಕೆ ಇದೆ ಅಪಾಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts