More

    ಕೋವಿಡ್ ಸವಾಲು ಎದುರಿಸಿದ ತೃಪ್ತಿ, ನಿರ್ಗಮಿತ ಎಡಿಸಿ ಡಾ.ಜಗದೀಶ್ ಕೆ.ನಾಯಕ್ ಅನಿಸಿಕೆ, ಜಿಲ್ಲಾಡಳಿತದಿಂದ ಬೀಳ್ಕೊಡುಗೆ

    ಬೆಂಗಳೂರು ಗ್ರಾಮಾಂತರ: ಕೋವಿಡ್ ಮೊದಲ ಅಲೆ ವೇಳೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಿವಾಸಿ ಭಾರತೀಯರ ಸುರಕ್ಷತೆ ಸವಾಲನ್ನು ಎದುರಿಸಿದ್ದು ನನ್ನ ಸೇವಾವಧಿಯಲ್ಲಿ ಮರೆಯಲಾರದ ಕ್ಷಣ ಎಂದು ಗ್ರಾಮಾಂತರ ಜಿಲ್ಲೆ ಅಪರ ಜಿಲ್ಲಾಧಿಕಾರಿಯಾಗಿದ್ದ ಡಾ.ಜಗದೀಶ್ ಕೆ.ನಾಯಕ್ ಹೇಳಿದರು.

    ದೇವನಹಳ್ಳಿ ತಾಲೂಕು ಜಿಲ್ಲಾಡಳಿತಭವನದಲ್ಲಿ ಬುಧವಾರ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಕೋವಿಡ್ ಮೊದಲ ಅಲೆ ವೇಳೆ ಪ್ರತಿದಿನ ಸಾವಿರಾರು ಅನಿವಾಸಿ ಭಾರತೀಯರು ತವರಿಗೆ ಮರಳುತ್ತಿದ್ದರು, ಅವರನ್ನು ಕ್ಯಾರಂಟೈನ್ ಮಾಡುವುದು, ಸೋಂಕಿತರಿಗೆ ತ್ವರಿತವಾಗಿ ಚಿಕಿತ್ಸೆ ಕೊಡಿಸುವುದು ಸೇರಿ ಪ್ರತಿ ಕರ್ತವ್ಯವೂ ಸವಾಲಾಗಿತ್ತು. ಅದನ್ನು ಸಮರ್ಥವಾಗಿ ಎದುರಿಸಿದ ತೃಪ್ತಿ ಇದೆ ಎಂದು ನೆನಪು ಮಾಡಿಕೊಂಡರು.

    3 ಡಿಸಿಗಳೊಂದಿಗೆ ಕರ್ತವ್ಯ: 2 ವರ್ಷದ ಸೇವಾವಧಿಯಲ್ಲಿ ಕರೀಗೌಡ, ಪಿ.ಎನ್.ರವೀಂದ್ರ ಹಾಗೂ ಪ್ರಸ್ತುತ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅರೊಂದಿಗೆ ಕರ್ತವ್ಯ ನಿರ್ವಹಿಸಿದ್ದೇನೆ, ಎಲ್ಲರೂ ನನ್ನಗೆ ಸಂಪೂರ್ಣ ಸಹಕಾರ ನೀಡಿದರು. ಜತೆಗೆ ನಿಕಟಪೂರ್ವ ಉಸ್ತುವಾರಿ ಸಚಿವ ಆರ್.ಅಶೋಕ್ ಹಾಗೂ ಎಂಟಿಬಿ ನಾಗರಾಜ್ ಅವರು ಎಲ್ಲ ವಿಷಯದಲ್ಲೂ ಬೆನ್ನುಲುಬಾಗಿ ನಿಂತಿದ್ದರು ಎಂದರು.

    ಕಂದಾಯ ಇಲಾಖೆಯಷ್ಟೆ ಅಲ್ಲದೆ ಎಲ್ಲ ಇಲಾಖೆಗಳಿಗೆ ಸಂಬಂಧಪಟ್ಟ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ಅಧಿಕಾರಿ ವರ್ಗದೊಂದಿಗೆ ಸೌಹಾರ್ದಯುತ ಸಂಬಂಧದಿಂದ ಮಾತ್ರ ಯಾವುದೇ ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಸಾಧ್ಯವಾಗುತ್ತದೆ ಎಂಬುದು ಈ ನನ್ನ ಸೇವಾವಧಿಯಲ್ಲಿ ಅನುಭವಕ್ಕೆ ಬಂದಿದೆ ಎಂದರು.

    ಸಲಹೆ ಸೂಚನೆ ಪಡೆದಿದ್ದೇನೆ: ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಅನೇಕ ಸಂದರ್ಭಗಳಲ್ಲಿ ಜಗದೀಶ್ ಅವರಿಂದ ಸಾಕಷ್ಟು ಸಲಹೆ ಸೂಚನೆಗಳನ್ನು ಪಡೆದಿದ್ದೇನೆ, ಅಧಿಕಾರಿಗಳೊಂದಿಗೆ ಸಮನ್ವಯತೆ ಮೂಲಕ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು.

    ಕಾರ್ಯವೈಖರಿಗೆ ಸಿಇಒ ಮೆಚ್ಚುಗೆ: ನಾಲ್ಕೈದು ಎಡಿಸಿಗಳ ಜತೆ ಕರ್ತವ್ಯ ನಿರ್ವಹಿಸಿದ್ದೇನೆ, ಅದರಲ್ಲಿ ಜಗದೀಶ್ ಅವರ ಕಾರ್ಯವೈಖರಿ ಬಹಳ ಮೆಚ್ಚುಗೆಯಾಯಿತು ಎಂದು ಜಿಪಂ ಸಿಇಒ ಎಂ.ಆರ್.ರವಿಕುಮಾರ್ ಹೇಳಿದರು. ಎಲ್ಲರೊಂದಿಗೆ ಆತ್ಮೀಯವಾಗಿ ನಡೆದುಕೊಂಡು ಅಷ್ಟೇ ಚುರುಕಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜಿಲ್ಲೆಯ ಸೇವೆಯಿಂದ ಬಿಡುಗಡೆಯಾದರೂ ಮುಂದಿನ ಅವರ ಸರ್ಕಾರಿ ಸೇವೆ ಹೀಗೆ ಮುಂದುವರಿಯಲಿ ಎಂದು ಆಶಿಸಿದರು.

    ಭಾವುಕರಾದ ಜಗದೀಶ್: ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಭಾವುಕರಾದ ಜಗದೀಶ್.ಕೆ.ನಾಯಕ್ ಅವರು ಎಲ್ಲರಿಗೂ ಭಾವಪೂರ್ಣ ಕೃತಜ್ಞತೆ ಅರ್ಪಿಸಿದರು. ಅಧಿಕಾರಿ ಹಾಗೂ ಸಿಬ್ಬಂದಿ ಕಣ್ಣಾಲಿಗಳು ತುಂಬಿ ಬಂದವು.

    ಅಧಿಕಾರ ಹಸ್ತಾಂತರ: ನೂತನ ಅಪರ ಜಿಲ್ಲಾಧಿಕಾರಿ ವಿಜಯಾ ಈ. ರವಿಕುಮಾರ ಅವರಿಗೆ ಕರ್ನಾಟಕ ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿ ಕಂಪನಿ ಲಿಮಿಟೆಡ್(ಕೆ-ರೈಡ್)ಗೆ ವಿಶೇಷ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿರುವ ಡಾ. ಜಗದೀಶ್ ಕೆ.ನಾಯಕ ಅಧಿಕಾರ ಹಸ್ತಾಂತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts