More

    ಕೋವಿಡ್ ಕೇರ್ ಸೆಂಟರ್ ಶೀಘ್ರ ಆರಂಭ

    ಬೋರಗಾಂವ: ಕರೊನಾ ಸಮಯದಲ್ಲಿ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಶ್ರಮಿಸುತ್ತಿದೆ. ಅಗತ್ಯವಿರುವ ಸ್ಥಳಗಳಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸುವ ಬಗ್ಗೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದ್ದು, ಬೋರಗಾಂವ ಪಟ್ಟಣದಲ್ಲೂ ಶೀಘ್ರ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

    ಪಟ್ಟಣದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆ, ಸರ್ಕಾರಿ ಬಾಲಕರ ವಸತಿ ನಿಲಯ ಹಾಗೂ ಮದರಸಾಗಳಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರೊಂದಿಗೆ ಗುರುವಾರ ಭೇಟಿ ನೀಡಿ ಮಾತನಾಡಿದ ಅವರು, ಮದರಸಾದಲ್ಲಿ 10 ಆಕ್ಸಿಜನ್ ಹಾಗೂ 10 ನಾನ್ ಆಕ್ಸಿಜನ್ ಬೆಡ್‌ಗಳಿವೆ. ಆಕ್ಸಿಜನ್ ಕೊರತೆಯಾಗಿದ್ದು, ಜಿಲ್ಲಾ ಆರೋಗ್ಯಾಧಿಕಾರಿ, ತಾಲೂಕು ವೈದ್ಯಾಧಿಕಾರಿ, ತಹಸೀಲ್ದಾರ್ ಜತೆ ಚರ್ಚಿಸಿ, ಶೀಘ್ರ ಅಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲಾಗುವುದು. ನುರಿತ ವೈದ್ಯರ ತಂಡದ ಮಾರ್ಗದರ್ಶನದಂತೆ ಸೋಂಕಿತರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲು ಪ್ರಯತ್ನಿಸಲಾಗುವುದು ಎಂದರು.

    ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಬೋರಗಾಂವ ಪಟ್ಟಣದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸುವ ಅಗತ್ಯವಿದೆ. ಆರೋಗ್ಯ ಕೇಂದ್ರಕ್ಕೆ ಔಷಧಗಳ ಪೂರೈಕೆ ಮಾಡಲಾಗಿದ್ದು, ಕರೊನಾ ನಿಯಂತ್ರಣ ಕ್ರಮಗಳ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು. ಮುಖ್ಯಾಧಿಕಾರಿ ಪಿ.ಬಿ.ದೇವಮಾನೆ, ಆರೋಗ್ಯಾಧಿಕಾರಿ ಸಂದೇಶ ರಾವಳುಕೇದಾರಿ, ದ್ವಿತೀಯ ದರ್ಜೆ ಸಹಾಯಕ ಪೋಪಟ್ ಕುರಳೆ, ದಾದಾ ಭಾದುಲೆ, ಪಪಂ ಸದಸ್ಯ ಬಾಬಾಸಾಬ ಚೌಗುಲೆ, ಮೀನಾ ಭಾದುಲೆ, ಬಿಸ್ಮಿಲ್ಲಾ ಅಪರಾಜ್, ವಿಷ್ಣು ತೋಡಕರ, ರಾಣಿ ಬೇವಿನಕಟ್ಟಿ, ಮಹಪತಿ ಖೋತ, ಪಂಡಿತ ಹಿರೇಮಣಿ, ಶಿವಾಜಿ ಭೋರೆ, ಉದಯ ಅಮ್ಮಣ್ಣವರ, ಪರ್ವೇಜ್ ಅಪರಾಜ್, ಆರ್.ಎಸ್.ಪಚಂಡಿ, ಶೇಶು ಐದಮಾಳೆ, ಕಾಕಾಸಾಬ ವಾಘಮೋಡೆ, ಜಯಪಾಲ ಫಿರಗಣ್ಣವರ, ಜಮೀಲ್ ಅತ್ತಾರ್, ಗುಲಾಬ್ ಅಪರಾಜ್, ಅಯೂಬ್ ಮಕಾನದಾರ್, ಚಾಂದಸಾಬ ಸನದಿ ಇದ್ದರು.

    ಕರೊನಾ ಸೋಂಕಿತರಿಗೆ ಅಗತ್ಯ ಚಿಕಿತ್ಸೆ

    ತೆಲಸಂಗ: ಸ್ಥಳೀಯ ಗ್ರಾಪಂ ವತಿಯಿಂದ ಬಿಸಿಎಂ ವಸತಿ ನಿಲಯದಲ್ಲಿ ಕರೊನಾ ಸೋಂಕಿತರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಜನರು ಭಯಪಡಬಾರದು ಎಂದು ತಾಪಂ ಇಒ ರವಿ ಬಂಗಾರೆಪ್ಪನವರ ಹೇಳಿದರು. ಗ್ರಾಮದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಖಾಸಗಿ ವೈದ್ಯರು, ವಿವಿಧ ಇಲಾಖೆ ಸಿಬ್ಬಂದಿ ಮತ್ತು ಕರೊನಾ ಸೇನಾನಿಗಳೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಪಂ ಮಟ್ಟದಲ್ಲಿ ಜನರಿಗೆ ಸಮಸ್ಯೆಯಾಗದಂತೆ ಪಿಡಿಒಗಳು ವ್ಯವಸ್ಥೆ ಮಾಡಬೇಕು. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಲಸಿಕೆ ಪಡೆಯಬೇಕು ಎಂದರು. ಪಿಡಿಒ ಭೀರಪ್ಪ ಕಡಂಗಂಚಿ, ಗ್ರಾಮ ಲೆಕ್ಕಾಧಿಕಾರಿ ಬಿ.ಜಿ.ಇರಕರ್, ಡಾ.ವಾಸಂತಿ, ಡಾ.ಎಸ್.ಐ.ಇಂಚಗೇರಿ, ಡಾ.ಬಿ.ಎಸ್.ಕಾಮನ, ಡಾ.ರಾಜಶೇಖರ ಪೂಜಾರಿ, ಡಾ.ಉದಯ ಅಯಾಚಿತ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts