More

    ಕೋಚಿಮುಲ್‌ಗೆ ರೈತರೇ ಬೆನ್ನೆಲುಬು

    ಕೋಲಾರ: ರೈತರು ಜಿಲ್ಲಾ ಹಾಲು ಒಕ್ಕೂಟದ ಬೆನ್ನೆಲುಬು, ಕರೊನಾ ಸಂದರ್ಭದಲ್ಲಿ ಹೈನುಗಾರಿಕೆಗೆ ಯಾವುದೇ ತೊಂದರೆಯಾಗದಂತೆ ಗುಣಮಟ್ಟದ ಹಾಲನ್ನು ಸಕಾಲಕ್ಕೆ ಸರಬರಾಜು ವಾಡಿದ್ದರಿಂದ ಬಟಾವಡೆಗೆ ತೊಂದರೆಯಾಗಲಿಲ್ಲ ಎಂದು ಹಾಲು ಒಕ್ಕೂಟದ ನಿರ್ದೇಶಕ ಡಿ.ವಿ.ಹರೀಶ್ ಹೇಳಿದರು.

    ತಾಲೂಕಿನ ಮಣಿಟ್ಟದ ಹಾಲು ಉತ್ಪಾದಕರ ಸಹಕಾರ ಸಂದ ಬಿಎಂಸಿ ಟಕವನ್ನು ಶುಕ್ರವಾರ ಉದ್ಘಾಟಿಸಿ ವಾತನಾಡಿ, ರೈತರ ಪರಿಶ್ರಮದಿಂದ ಲಾಕ್‌ಡೌನ್ ಸಂದರ್ಭದಲ್ಲಿ ಜನರಿಗೆ ಹಾಲು ಒದಗಿಸಲು ಸಾಧ್ಯವಾಯಿತು ಎಂದು ಪ್ರಶಂಸಿಸಿದರು.

    ಬಿಎಂಸಿ ಟಕಕ್ಕೆ 14 ಲಕ್ಷ ರೂ. ಹಾಗೂ ಸಿವಿಲ್ ಕಾಮಗಾರಿಗೆ 1 ಲಕ್ಷ ರೂ. ಸೇರಿ ಒಟ್ಟು 15 ಲಕ್ಷ ರೂ. ವೆಚ್ಚ ವಾಡಲಾಗಿದೆ, ಹಾಲು ಉತ್ಪಾದಕರು ಶುದ್ಧ ಹಾಗೂ ಗುಣಮಟ್ಟದ ಹಾಲನ್ನು ಒಕ್ಕೂಟಕ್ಕೆ ಒದಗಿಸಿದಲ್ಲಿ ಸಂಗಳಿಗೆ ಹೆಚ್ಚಿನ ಅನುದಾನ ನೀಡಲು ಸಾಧ್ಯ ಎಂದರು.
    ಪ್ರತಿ ಹಳ್ಳಿಯಲ್ಲಿ ಮಹಿಳಾ ಸಂಗಳ ರಚನೆ ಮೂಲಕ ಹಾಲು ಒಕ್ಕೂಟದ ಪ್ರಗತಿ ಹೆಚ್ಚಿಸುವ ಪ್ರಯತ್ನ ನಡೆಸಲಾಗುತ್ತಿದೆ, ಮಹಿಳೆಯರು ಮನಸ್ಸು ವಾಡಿದಲ್ಲಿ ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವದ್ಧಿಪಡಿಸಬಹುದು.

    ಒಕ್ಕೂಟದಿಂದ ದೂರಗಾಮಿ ಯೋಜನೆ ಹಾಕಿಕೊಂಡು ತಾಲೂಕಿನಲ್ಲಿ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಗಳಿಗೆ ಸೌಲಭ್ಯ ನೀಡಲಾಗುತ್ತದೆ ಎಂದರು. ಶಿಬಿರ ಉಪವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ ವಾತನಾಡಿ, ಜಿಲ್ಲೆ ರೇಷ್ಮೆ ಮತ್ತು ಚಿನ್ನಕ್ಕೆ ಹೆಸರುವಾಸಿಯಾಗಿದ್ದು, ಪ್ರಸ್ತುತ ಹೈನಗಾರಿಕೆಯೇ ರೈತರ ಸ್ವಾವಲಂಬಿ ಜೀವನಕ್ಕೆ ಆಸರೆ ಎಂದರು.

    ಜಿಲ್ಲೆಯಲ್ಲಿ ಅಮೂಲ್ ವಾದರಿಯ ಹಾಲು ಉತ್ಪಾದಕರ ಸಹಕಾರ ಸಂಗಳನ್ನು ಸ್ಥಾಪಿಸಿ. ಬಿಎಂಸಿ ಕೇಂದ್ರಗಳ ನಿರ್ವಹಣೆ, ಸಹ ಸಂಗಳ ಹಾಲು ಶೇಖರಣೆ ಮತ್ತು ಹಾಲಿನ ಗುಣಮಟ್ಟಕ್ಕೆ ಒತ್ತು ನೀಡಬೇಕು ಎಂದರು. ಸಂದ ಅಧ್ಯಕ್ಷ ಎನ್. ಮಂಜುನಾಥಗೌಡ, ಸಿಇಒ ಜೆ.ಚಂಗಲರಾಯರೆಡ್ಡಿ, ಅಣ್ಣಿಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು, ವಿವಿಧ ಹಾಲು ಉತ್ಪಾದಕರ ಸಹಕಾರ ಸಂದ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts