More

    ಕೋಸ್ಟ್​ಗಾರ್ಡ್ ವಶಕ್ಕೆ ಎರಡು ಬೋಟ್

    ಕಾರವಾರ: ಬುಲ್ ಟ್ರಾಲ್ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಎರಡು ಬೋಟ್​ಗಳನ್ನು

    ಕೋಸ್ಟ್​ಗಾರ್ಡ್ ಅಧಿಕಾರಿಗಳು ಶುಕ್ರವಾರ ವಶಕ್ಕೆ ಪಡೆದು ಬೈತಖೋಲಕ್ಕೆ ತಂದು ಮೀನುಗಾರಿಕೆ ಇಲಾಖೆಗೆ ಒಪ್ಪಿಸಿದ್ದಾರೆ. ಮಲ್ಪೆಯ ಸದಾನಂದ ಸಾಲ್ಯಾನ್ ಅವರಿಗೆ ಸೇರಿದ ಕಾತ್ಯಾಯನಿ ಹಾಗೂ ಶಶಿಕಲಾ ಅವರಿಗೆ ಸೇರಿದ ವೀರ ಮಾರುತಿ ಎಂಬ ಹೆಸರಿನ ಬೋಟ್​ಗಳು ಶುಕ್ರವಾರ ಕಾರವಾರ ತೀರದಿಂದ 12 ನಾಟಿಕಲ್ ಮೈಲ್ ಒಳಗಡೆ ಪ್ರದೇಶಕ್ಕೆ ಬಂದು ನಿಷೇಧಿತ ಬುಲ್ ಟ್ರಾಲ್ (ಎರಡು ದೋಣಿಗಳ ನಡುವೆ ಬಲೆ ಕಟ್ಟಿ ಮೀನುಗಾರಿಕೆ ನಡೆಸುವ ವಿಧಾನ) ಮಾಡುತ್ತಿದ್ದವು ಎನ್ನಲಾಗಿದೆ.

    ‘ಬೋಟ್​ಗಳ ದಾಖಲೆಗಳನ್ನು ಈಗಾಗಲೆ ವಶಕ್ಕೆ ಪಡೆಯಲಾಗಿದೆ. ಅವುಗಳು ಹಿಡಿದ ಮೀನಿನ ಒಟ್ಟು ಮೌಲ್ಯದ 5 ಪಟ್ಟು ದಂಡ ವಿಧಿಸಲಾಗುವುದು’ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರತೀಕ ಶೆಟ್ಟಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts