More

    ಕೊಳಚೆ ನೀರಿನಿಂದ ರೋಗ ಭೀತಿ

    ಮುಂಡರಗಿ: ಪಟ್ಟಣದ ಕಡ್ಲೇಪೇಟೆ ಓಣಿಯ ಶ್ರೀ ದುರ್ಗಾದೇವಿ ದೇವಸ್ಥಾನ ಭಾಗದಲ್ಲಿ ಗಲೀಜು ನೀರು ಸಂಗ್ರಹವಾಗಿ ದುರ್ನಾತ ಬೀರುವ ಹೊಂಡ ನಿರ್ವಣವಾಗಿದೆ.

    ಎರಡ್ಮೂರು ವರ್ಷ ಗಳಿಂದ ಇದೇ ರೀತಿಯ ಅವ್ಯವಸ್ಥೆ ಇದ್ದರೂ ಯಾರೊಬ್ಬರೂ ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಬಗೆಹರಿಸಿಲ್ಲ. ರಸ್ತೆ, ಚರಂಡಿ ಇಲ್ಲದ ಕಾರಣ ಈ ಭಾಗದ ಹತ್ತಾರು ಮನೆಗಳ ಗಲೀಜು ನೀರು ಒಂದೆಡೆ ಬಂದು ನಿಲ್ಲುತ್ತಿದೆ. ಜನ ಸಂಚಾರಕ್ಕೂ ಆಸ್ಪದ ಇಲ್ಲದಂತಾಗಿದೆ. ಗಲೀಜು ನೀರಿನ ತುದಿಯಲ್ಲಿ ಸಾಲಾಗಿ ಕಲ್ಲುಗಳನ್ನು ಹಾಕಲಾಗಿದ್ದು ಕಲ್ಲುಗಳ ಮೇಲೆ ನಡೆದು ಮನೆ ತಲುಪುವ ಸ್ಥಿತಿ ನಿರ್ವಣವಾಗಿದೆ. ಅದೆಷ್ಟೋ ಸಲ ಮಕ್ಕಳು, ವೃದ್ಧರು ಗಲೀಜು ನೀರಿನಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಮಳೆಗಾಲದಲ್ಲಿ ಗಲೀಜು ನೀರು ಹೆಚ್ಚು ಸಂಗ್ರಹವಾಗಿ ಗಬ್ಬು ವಾಸನೆ ಬೀರುವುದರ ಜತೆಗೆ ಸೊಳ್ಳೆಗಳ ಕಾಟ ಹೆಚ್ಚಾಗಿ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಕುರಿತು ಹಲವಾರು ಸಲ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸಮಸ್ಯೆ ಬಗೆಹರಿಸದಿದ್ದರೆ ಜನರೆಲ್ಲರೂ ಸೇರಿ ಪುರಸಭೆ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿಜಯಕುಮಾರ ರಾಟಿ, ಸ್ಥಳೀಯರಾದ ಗುಡದಪ್ಪ ಬೀಸನಳ್ಳಿ, ರಸುಲ್​ಸಾಬ್ ಡಾಲಾಯತಿ, ಮುನ್ನಾಬಿ ಡಂಬಳ, ಅಕ್ಕಮ್ಮ ಮೆದಕನಾಳ, ಹಸನಸಾಬ್ ಬಿಸನಳ್ಳಿ, ಮುನ್ನಾಬಿ ಹಾರೋಗೇರಿ ಇತರರು ಎಚ್ಚರಿಸಿದ್ದಾರೆ.

    ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಲಾಗುತ್ತದೆ. ಮುಖ್ಯಾಧಿಕಾರಿ ಅವರು ಅನಾರೋಗ್ಯದಿಂದ ರಜೆ ಇದ್ದಾರೆ. ಅವರ ಗಮನಕ್ಕೆ ತಂದು ಅಲ್ಲಿನ ಸಮಸ್ಯೆಯನ್ನು ಸರಿಪಡಿಸುವುದರ ಮೂಲಕ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ.

    | ರಮೇಶ ಹೊಸಮನಿ ಪ್ರಭಾರಿ ಮುಖ್ಯಾಧಿಕಾರಿ

    ಗಲೀಜು ನೀರು ಒಂದೆಡೆ ನಿಂತು ಜನರಿಗೆ ಆಗುವ ಸಮಸ್ಯೆ ಬಗೆಹರಿಸುವಂತೆ ಅನೇಕ ಬಾರಿ ಅಧಿಕಾರಿಗಳಿಗೆ ಹೇಳಿದರೂ ಸ್ಪಂದಿಸುತ್ತಿಲ್ಲ. ಚುನಾಯಿತ ಸದಸ್ಯರ ಮಾತಿಗೆ ಪುರಸಭೆ ಅಧಿಕಾರಿಗಳು ಗೌರವ ಕೊಡುತ್ತಿಲ್ಲ. ಜನರೊಂದಿಗೆ ಸೇರಿ ಪ್ರತಿಭಟನೆ ಮಾಡಿ ಕೆಲಸ ಮಾಡಿಸಿಕೊಳ್ಳುವ ಸ್ಥಿತಿ ಬಂದಿದೆ.

    | ನಿರ್ಮಲಾ ಕೊರ್ಲಹಳ್ಳಿ 11ನೇ ವಾರ್ಡ್ ಸದಸ್ಯೆ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts