More

    ಕೊಬ್ಬರಿಗೆ 2,500 ರೂಪಾಯಿ ಹೆಚ್ಚುವರಿ ಬೆಂಬಲ ಬೆಲೆ ಘೋಷಿಸಿ ; ಸರ್ಕಾರಕ್ಕೆ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಒತ್ತಾಯ

    ಗುಬ್ಬಿ: ನೆಡ್ ಮೂಲಕ ಕೊಬ್ಬರಿ ಖರೀದಿಗೆ ಕೇಂದ್ರ ಸರ್ಕಾರ ನೀಡುವ 10,300 ರೂಪಾಯಿ ಜತೆಗೆ ರಾಜ್ಯ ಸರ್ಕಾರ 2,500 ರೂ. ಹೆಚ್ಚುವರಿ ಬೆಂಬಲ ಬೆಲೆ ನೀಡಿದ್ದಲ್ಲಿ ಆರ್ಥಿಕ ಸಂಕಷ್ಟದಿಂದ ರೈತರು ಹೊರಬರಲು ಸಹಕಾರಿಯಾಗುತ್ತದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.

    ಎಪಿಎಂಸಿ ಆವರಣದಲ್ಲಿ ಗುರುವಾರ ನೆಡ್ ಕೊಬ್ಬರಿ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ನೆಡ್ ಕೇಂದ್ರದ ನಿಯಮಾವಳಿ ಪ್ರಕಾರ ಗುಣಮಟ್ಟದ ಕೊಬ್ಬರಿಗೆ ಹೊರಗಿನ ವರ್ತಕರೇ ನಫೆಡ್ ಬೆಲೆಗಿಂತ ಹೆಚ್ಚಿನ ದರ ನೀಡಲಿದ್ದಾರೆ. ಈ ಪರಿಸ್ಥಿತಿ ಮನಗಂಡು ರಾಜ್ಯ ಸರ್ಕಾರ ಕೂಡಲೇ 2,500 ರೂಪಾಯಿ ಹೆಚ್ಚುವರಿಯಾಗಿ ನೀಡಿ ಕೊಬ್ಬರಿ ಬೆಳೆಗಾರರಿಗೆ ನೆರವಾಗಬೇಕು ಎಂದು ಮನವಿ ಮಾಡಿದರು.

    ಬುದ್ಧಿಭ್ರಮಣೆಯಾದ ವ್ಯಕ್ತಿಯ ಕೈಗೆ ಕಲ್ಲು ಕೊಟ್ಟಂತೆ, ಬಿಜೆಪಿ ಸರ್ಕಾರ ಅಧಿಕಾರವನ್ನು ಮನಬಂದಂತೆ ಜನರ ಮೇಲೆ ಪ್ರಯೋಗಿಸುತ್ತಿದೆ. ಎಲ್ಲವನ್ನೂ ಖಾಸಗೀಕರಣಗೊಳಿಸಲು ಮುಂದಾಗಿ ವ್ಯಾಪಾರ ನಡೆಸುವ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಎಪಿಎಂಸಿ ಕಾಯ್ದೆದೆ ಹಾಗೂ ಭೂ ಸುಧಾರಣೆ ಕಾಯ್ದೆಗೆ ಜಾರಿ ಮಾಡಿರುವುದು ರೈತಾಪಿಗಳ ಸರ್ವನಾಶಕ್ಕೆ ನಾಂದಿಯಾಗಿದೆ. ಘಳಿಗೆಗೆ ಒಂದರಂತೆ ನಿರ್ಧಾರ ಕೈಗೊಳ್ಳುವ ಸರ್ಕಾರ ಶಿಕ್ಷಣ ರಂಗದಲ್ಲೂ ರಾಜಕಾರಣ ಮಾಡುವುದು ವಿಪರ್ಯಾಸ ಎಂದರು.

    ತಾಲೂಕಿನ ಉನ್ನತ ಅಧಿಕಾರಿಗಳಿಂದ ಭ್ರಷ್ಟಾಚಾರದ ಆರೋಪ ಮಾಡಲು, ಸಾರ್ವಜನಿಕರಿಂದ ಬಂದ ದೂರು ಕಾರಣ. ಈ ಬಗ್ಗೆ ಮಾಧ್ಯಮದ ಮೂಲಕ ಎಚ್ಚರಿಕೆ ನೀಡಿದ್ದೇನೆ. ಅಧಿಕಾರಿಗಳು ಹಣ ನೀಡಿ ಈ ಸ್ಥಾನಕ್ಕೆ ಬಂದಿರುವುದಾಗಿ ಹೇಳಿದ್ದರ ಕಾರಣ ಬಿಜೆಪಿಯವರು ಹುಡುಕಿಕೊಳ್ಳಬೇಕಿದೆ. ಸಂಬಂಧಿಸಿದವರು ಕೇಳಿದರೆ ಸಾಕ್ಷಿ ಒದಗಿಸಬಹುದು. ಕಾಳಬೋಳನಂತಹವರು ಕೇಳಿದ ಪ್ರಶ್ನೆಗೆ
    ಉತ್ತರ ನೀಡಲಾರೆ. ಹೆಬ್ಬೆಟ್ಟು ಒತ್ತುವ ಮಂದಿಗೂ ಪ್ರತ್ಯುತ್ತರ ನೀಡುವ ಅಗತ್ಯವಿಲ್ಲ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.

    ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಯನ್ನೇ ಪಠ್ಯದಿಂದ ತೆಗೆದು ಹಾಕುವ ಮೂಲಕ ಬಿಜೆಪಿ ಸರ್ಕಾರ ಮತ್ತೊಮ್ಮೆ ತಲೆಕೆಟ್ಟ ಸರ್ಕಾರ ಎಂಬುದನ್ನು ರುಜುವಾತು ಮಾಡಿಕೊಂಡಿದೆ.
    ಎಸ್.ಆರ್.ಶ್ರೀನಿವಾಸ್ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts