More

    ಕೊಣ್ಣೂರಿನ ಸ್ಪೂರ್ತಿಗೆ ಪಠ್ಯಪುಸ್ತಕ ವಿತರಣೆ

    ನರಗುಂದ: ಮಲಪ್ರಭಾ ಪ್ರವಾಹದಿಂದ ಪಠ್ಯಪುಸ್ತಕ ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ತಾಲೂಕಿನ ಕೊಣ್ಣೂರ ಗ್ರಾಮದ ವಿದ್ಯಾರ್ಥಿನಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲೂಕಾಡಳಿತದ ಅಧಿಕಾರಿಗಳು ನೆರವಾಗಿದ್ದಾರೆ.

    ಕೊಣ್ಣೂರಿನ 5ನೇ ತರಗತಿ ವಿದ್ಯಾರ್ಥಿನಿ ಸ್ಪೂರ್ತಿ ಮಾನಮ್ಮನವರ ಮುರಾರ್ಜಿ ಪರೀಕ್ಷೆ ಬರೆಯುವ ನಿರೀಕ್ಷೆಯಲ್ಲಿ ಇದ್ದಳು. ಆದರೆ, ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಪಠ್ಯ ಪುಸ್ತಕಗಳು ತೋಯ್ದು ತೊಪ್ಪೆಯಾಗಿದ್ದವು. ಈ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ ಆ.25 ರಂದು ‘ಕೊಣ್ಣೂರಲ್ಲಿ ನೀರು ಪಾಲಾದ ಪಠ್ಯಪುಸ್ತಕ’ ಶೀರ್ಷಿಕೆಯಡಿ ವಿಸ್ಕೃತ ವರದಿ ಪ್ರಕಟಿಸಲಾಗಿತ್ತು. ವರದಿಗೆ ಸ್ಪಂದಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಜೆ. ಗುರುಪ್ರಸಾದ, ತಹಸೀಲ್ದಾರ್ ಎ.ಎಚ್. ಮಹೇಂದ್ರ ಅವರು, ಗುರುವಾರ ಕೊಣ್ಣೂರ ರಲ್ಲಿರುವ ವಿದ್ಯಾರ್ಥಿನಿಯ ಮನೆಗೆ ತೆರಳಿ ಪರೀಕ್ಷೆಗೆ ಬೇಕಾದ ಎಲ್ಲ ಪಠ್ಯಪುಸ್ತಕಗಳನ್ನು ವಿತರಿಸಿದ್ದಾರೆ. ಅಲ್ಲದೆ, ಸ್ಪೂರ್ತಿಗೆ ಶೈಕ್ಷಣಿಕವಾಗಿ ಇನ್ನೂ ಹೆಚ್ಚಿನ ನೆರವು ಕೋರಿದರೆ ತಾಲೂಕಾಡಳಿತದಿಂದ ಕಲ್ಪಿಸಿಕೊಡುವುದಾಗಿ ತಹಸೀಲ್ದಾರ್ ಮಹೇಂದ್ರ ಭರವಸೆ ನೀಡಿದರು.

    ಪಠ್ಯ ಪುಸ್ತಕಗಳು ಇಲ್ಲದೇ ಮುರಾರ್ಜಿ ವಿದ್ಯಾಭ್ಯಾಸಕ್ಕೆ ಸಮಸ್ಯೆ ಉಂಟಾಗಿತ್ತು. ವಿಜಯವಾಣಿ ವರದಿಯಿಂದಾಗಿ ನನಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದೀಗ ಎಲ್ಲ ಪಠ್ಯಪುಸ್ತಕಗಳನ್ನು ಒದಗಿಸಿದ್ದಾರೆ. ಇನ್ನೂ ಅನೇಕರು ವೈಯಕ್ತಿಕವಾಗಿ ಕರೆ ಮಾಡಿ ಪಠ್ಯ ಪುಸ್ತಕಗಳನ್ನು ಖರಿದೀಸಲು ಆರ್ಥಿಕ ಸಹಾಯದ ಭರವಸೆ ನೀಡಿದ್ದಾರೆ. ಪತ್ರಿಕೆಗೆ ವಿಶೇಷ ಅಭಿನಂದನೆಗಳು.

    | ಸ್ಪೂರ್ತಿ ಮಾನಮ್ಮನವರ ವಿದ್ಯಾರ್ಥಿನಿ, ಕೊಣ್ಣೂರ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts