More

    ಕೊಟ್ಟೂರೇಶನ ಸನ್ನಿಧಿಗೆ ಭಕ್ತರ ಪಾದಯಾತ್ರೆ

    ದಾವಣಗೆರೆ: ಕೊಟ್ಟೂರು ದೊರೆಯೆ, ನಿನಗಾರು ಸರಿಯೆ, ಸರಿ ಸರಿ ಎಂದವರ ಹಲ್ಲು ಮುರಿಯೆ ಬಹು ಪರಾಕ್.. ಶ್ರೀ ಗುರು ಕೊಟ್ಟೂರೇಶ್ವರ ಮಹಾರಾಜ್ ಕೀ ಜೈ…
    ದಾವಣಗೆರೆಯ ರಸ್ತೆಗಳಲ್ಲಿ ಸೋಮವಾರ ಮೊಳಗಿದ ಜಯಘೋಷಗಳಿವು. ಕೊಟ್ಟೂರು ಬಸವೇಶ್ವರ ರಥೋತ್ಸವ ಹಿನ್ನೆಲೆಯಲ್ಲಿ ಆರಂಭವಾದ ಯಾತ್ರಿಗಳು ಘೋಷಣೆಗಳೊಂದಿಗೆ ಉತ್ಸಾಹ, ಭಕ್ತಿಯ ಸಿಂಚನದೊಂದಿಗೆ ದೊಡ್ಡ ಹೆಜ್ಜೆ ಹಾಕಿದರು. ಕಣ್ಣು ಹಾಯಿಸಿದಲ್ಲೆಲ್ಲ ಜನವೋ ಜನ.
    ಕೈಯಲ್ಲಿ ಕೋಲು-ಬ್ಯಾಟರಿ, ಹೆಗಲಿಗೆ ಚೀಲ ಏರಿಸಿಕೊಂಡ ಯುವಕ-ಯುವತಿಯರು, ಮಹಿಳೆಯರಾದಿಯಾಗಿ 80 ವರ್ಷದ ಹಿರಿಯರು ಯಾತ್ರಿಗಳಾಗಿದ್ದರು. ಮಕ್ಕಳೂ ಕೂಡ ಬರಿಗಾಲಲ್ಲಿ ನಡೆದರು. ಕೆಲವು ಪಾಲಕರು ಚಿಣ್ಣರ ಜೋಲಿ ಸಾಮಗ್ರಿಗಳೊಂದಿಗೆ ಪಾದಯಾತ್ರೆಯಲ್ಲಿ ಸಾಗಿದರು.
    ದಾವಣಗೆರೆಯಲ್ಲದೆ ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ವಿಜಯನಗರ ಇತರೆ ಜಿಲ್ಲೆಗಳ ಭಕ್ತರು ಮಧ್ಯಕರ್ನಾಟಕಕ್ಕೆ ಧಾವಿಸಿದರು. ಇಲ್ಲಿಂದ ಪಾದಯಾತ್ರೆ ಮಾರ್ಗದಲ್ಲಿ ಸಂಚರಿಸಿದರು. ಅಲ್ಲಲ್ಲಿ ಭಕ್ತರು, ದಾನಿಗಳು ಹಣ್ಣು, ಟೀ-ಬಿಸ್ಕತ್ತು, ಉಪಾಹಾರ ಮೊದಲಾದ ಪ್ರಸಾದ ವ್ಯವಸ್ಥೆಯೊಂದಿಗೆ ಬೀಳ್ಕೊಟ್ಟರು.
    ನಗರದ ಬಕ್ಕೇಶ್ವರ ದೇವಸ್ಥಾನದಿಂದ ಅಧಿಕೃತವಾಗಿ ಪಾದಯಾತ್ರೆ ಚಾಲನೆಗೊಂಡಿತು. ಆದರೆ ಯಾತ್ರಿಗಳು ಸ್ವಾಮೀಜಿಗಳ ಭಾಷಣಕ್ಕೂ ಕಿವಿಯಾಗದೆ ತಮ್ಮ ಕಾಲುಗಳಿಗೆ ಬುದ್ದಿ ಹೇಳಿದರು. ದಾರಿಯುದ್ದಕೂ ಬರುವ ದೇವಸ್ಥಾನಗಳಿಗೆ ತೆರಳಿ ಭಕ್ತಿ ಸಲ್ಲಿಸಿ ಪಯಣ ಬೆಳೆಸಿದರು. ಸುಮಾರು 40 ಸಾವಿರಕ್ಕೂ ಹೆಚ್ಚು ಭಕ್ತರು ಕೊಟ್ಟೂರಿನತ್ತ ಸಾಗಿದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts